
ಗದಗ (ಜ.19): ಹನಿ ಕೇಕ್ ತಿಂದು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಅಸ್ವಸ್ಥರಾಗಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಉಮೇಶ ವಡ್ಡರ್ ಎನ್ನುವವರ ಕುಟುಂಬದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ವೆಂಕಟೇಶ ಅಯ್ಯಂಗಾರ್ ಬೇಕರಿಯಿಂದ ತಂದಿದ್ದ ಹನಿ ಕೇಕ್ ತಿಂದ ಮಕ್ಕಳು ಸೇರಿದಂತೆ ಕುಟುಂಬಸ್ಥರು ಅಸ್ವಸ್ಥರಾಗಿದ್ದಾರೆ. ತನು 2, ಅಶ್ವಿನಿ 2, ಜಯಶ್ರೀ 3, ಸಪ್ನ 4, ನೀಲವ್ವ 6, ಸುವರ್ಣ 7, ನೇತ್ರಾ 9, ಷಣ್ಮುಖ 14, ಉಡಚವ್ವ 19, ಪ್ರವೀಣ 4 ಅಸ್ವಸ್ಥಗೊಂಡವರು. ನಿನ್ನೆ ರಾತ್ರಿ ಹನಿ ಕೇಕ್ ತಿಂದು ಮಲಗಿದವರು ಮಧ್ಯೆ ರಾತ್ರಿ ವಾಂತಿ ಭೇದಿಯಿಂದ ನರಳಾಡಲಾರಂಭಿಸಿದರು. ನಸುಕಿನಲ್ಲಿ ಇವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.