10 ಕೈ ನಾಯಕರಿಗೆ ಅನರ್ಹತೆ ಶಿಕ್ಷೆ : ಭಾರೀ ಅಸಮಾಧಾನ

By Web DeskFirst Published May 28, 2019, 12:26 PM IST
Highlights

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತಿದೆ. ಇದೀಗ 10 ಕೈ ನಾಯಕರಿಗೆ ಅನರ್ಹತೆ ಶಿಕ್ಷೆ ನೀಡಲಾಗಿದೆ. 

ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಹಲವು ಕೈ ಮುಖಂಡರು ಬೆಂಬಲಿಸಿದ್ದ ಕಾರಣ ಅನರ್ಹ ಗೊಳಿಸಲಾಗಿದೆ. 

ಸುಮಲತಾ ಪರ ಪ್ರಚಾರ ನಡೆಸಿದ್ದ ಮನ್ ಮುಲ್ ನಿರ್ದೇಶಕರನ್ನು ಅನರ್ಹಗೊಳಿಸಲಾಗಿದೆ ಎಂದು ಬೇಲೂರು ಸೋಮಶೇಖರ್ ಆರೋಪ ಮಾಡಿದ್ದಾರೆ. 

ಸುಮಲತಾಗೆ ಬೆಂಬಲ ನೀಡಿದ್ದರಿಂದ ಅನರ್ಹತೆ ಜೊತೆ 1ವರ್ಷದ ಸಹಕಾರಿ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆಯೂ ಕೂಡ ನಿಷೇಧ ಹೇರಲಾಗಿದೆ. 

ಮನ್‌ ಮುಲ್‌ನ 12ನಿರ್ದೇಶಕರ ಪೈಕಿ ಇಬ್ಬರೂ ಜೆಡಿಎಸ್‌ ನಿರ್ದೇಶಕರನ್ನ ಹೊರತು ಪಡಿಸಿ
 
ಉಳಿದ 10ಕಾಂಗ್ರೆಸ್ ನಿರ್ದೇಶಕರಿಗೆ ಈ ಅನರ್ಹತೆ ಶಿಕ್ಷೆ ನೀಡಲಾಗಿದೆ ಎಂದರು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾರನ್ನು ಬೆಂಬಲಿಸಿದ್ದಕ್ಕೆ ಸರ್ಕಾರ ಈ ರೀತಿ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪ ಮಾಡಿದರು.

click me!