ಅನರ್ಹ 10 ಶಾಸಕರಿಗೆ ಸಚಿವ ಸ್ಥಾನ

By Web DeskFirst Published Aug 24, 2019, 2:40 PM IST
Highlights

ಅನರ್ಹ ಶಾಸಕರ ಪೈಕಿ 9 ರಿಂದ 10 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಅನರ್ಹ ಶಾಸಕರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು [ಆ.24] : ಸುಪ್ರೀಂಕೋರ್ಟ್‌ನ ನಡೆ ಆಧರಿಸಿ ಅನರ್ಹ ಶಾಸಕರ ಪೈಕಿ 9 ರಿಂದ 10 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. 

ಈ ಬಗ್ಗೆ ಅನರ್ಹ ಶಾಸಕರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಮಾತುಕತೆ ನಡೆಸಿದ್ದಾರೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಘಿ ಇಲ್ಲಿ ಕ್ಲಿಕ್ಕಿಸಿ

ಎಲ್ಲ ಅನರ್ಹ ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿಲ್ಲ. ಇನ್ನುಳಿದ ಹಲವರಿಗೆ ಪ್ರಮುಖ ನಿಗಮ ಮಂಡಳಿಗಳನ್ನು ನೀಡಲು ಒಪ್ಪಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಸಚಿವ ಸಂಫುಟ ವಿಸ್ತರಣೆ ಮಾಡಿದ್ದು, ಖಾತೆ ಹಂಚಿಕೆ ಮಾತ್ರ ನಡೆದಿಲ್ಲ. ಆದರೆ ಇನ್ನೊಂದು ಅವಧಿಯಲ್ಲಿ ಸಂಪುಟ ವಿಸ್ತರಣೆ ನಡೆಯಲಿದ್ದು ಈ ವೇಳೆ ಖಾತೆ ಅನರ್ಹರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. 

click me!