ವಿಧಾನಸೌಧ ವಜ್ರ ಮಹೋತ್ಸವ ಅಲ್ಲ, ಅಧ್ವಾನೋತ್ಸವ..! ಇಲ್ಲಿವೆ 10 ಅಧ್ವಾನಗಳ ಪಟ್ಟಿ

Published : Oct 25, 2017, 01:52 PM ISTUpdated : Apr 11, 2018, 12:57 PM IST
ವಿಧಾನಸೌಧ ವಜ್ರ ಮಹೋತ್ಸವ ಅಲ್ಲ, ಅಧ್ವಾನೋತ್ಸವ..! ಇಲ್ಲಿವೆ 10 ಅಧ್ವಾನಗಳ ಪಟ್ಟಿ

ಸಾರಾಂಶ

* ಕಾರ್ಯಕ್ರಮಕ್ಕೆ ನಿವೃತ್ತ ಕಾರ್ಯದರ್ಶಿಗಳಿಂದ ಸಲಹೆ ಪಡೆದಿದ್ದರೂ ಅವರನ್ನೇ ಕಾರ್ಯಕ್ರಮಕ್ಕೆ ಕರೆದಿರಲಿಲ್ಲ * ರಾಷ್ಟ್ರಪತಿ ಭಾಷಣದಲ್ಲಿ ಪ್ರಧಾನಿ ಪಟ್ಟಕ್ಕೇರಿದ ರಾಜ್ಯದ ಏಕೈಕ ಸಾಧಕ ದೇವೇಗೌಡರ ಹೆಸರನ್ನೇ ಮರೆತ ಸರ್ಕಾರ * ಹೂವಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ದರೂ ರಾಷ್ಟ್ರಪತಿ ಭಾಷಣದ ಬೆನ್ನಲ್ಲೇ ಕುಸಿದು ಬಿದ್ದ ಅಲಂಕಾರ

ಬೆಂಗಳೂರು(ಅ. 25): ವಿಧಾನಸೌಧ ನಿರ್ಮಾಣವಾಗಿ 60 ವರ್ಷ ಗತಿಸಿದ ಈ ಸಂದರ್ಭದಲ್ಲಿ ಸರಕಾರವು ವಜ್ರಮಹೋತ್ಸವ ಆಯೋಜನೆ ಮಾಡಿದೆ. ಆದರೆ, ಕಾರ್ಯಕ್ರಮದಲ್ಲಿ ಆದ ಹಲವು ಯಡವಟ್ಟುಗಳು ಸರಕಾರ ತರಾತುರಿಯಿಂದ ಆಯೋಜನೆ ಮಾಡಿರಬಹುದೆಂಬ ಸೂಚನೆ ನೀಡಿದೆ. ಮಾಜಿ ಪ್ರಧಾನಿ ದೇವೇಗೌಡರ ಹೆಸರು ಪ್ರಸ್ತಾಪ ಮಾಡದೇ ಇರುವುದು ಸೇರಿದಂತೆ ಕೆಲ ಪ್ರಮುಖ 10 ಅಧ್ವಾನಗಳ ಪಟ್ಟಿಯನ್ನು ಸುವರ್ಣನ್ಯೂಸ್ ಮಾಡಿದೆ.

ವಜ್ರಮಹೋತ್ಸವದಲ್ಲಿ ಹತ್ತು ಅಧ್ವಾನಗಳು:

1) 10 ಕೋಟಿ ಖರ್ಚಿನ ಸಂಭ್ರಮದಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್​ ಹನುಮಂತಯ್ಯ ಸಮಾಧಿಗೆ ಒಂದು ಹೂವಿನ ಭಾಗ್ಯವೂ ಇಲ್ಲ

2) ಅವ್ಯವಸ್ಥೆಯ ಪರಮಾವಧಿ: ವಜ್ರ ಮಹೋತ್ಸವದ ಸಂಭ್ರಮಕ್ಕೆ ವಿಧಾನಸೌಧ ಪ್ರವೇಶಿಸಲು ಶಾಸಕರಿಗೇ ಪರದಾಟ

3) ವಿಧಾನಸೌಧ ಪ್ರವೇಶಕ್ಕೆ ಶಾಸಕರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಭಾರೀ ಜಟಾಪಟಿ

4) ಭಾರತರತ್ನ ಸಿಎನ್​ಆರ್​ ರಾವ್​ ಅವರಂಥಾ ಗಣ್ಯರೂ ಕೂಡಾ ವಿಧಾನಸೌಧ ಪ್ರವೇಶಕ್ಕೆ ಹರಸಾಹಸ ಪಡುವಂತಾಯ್ತು

5) ವಿರೋಧ ಪಕ್ಷದ ಶಾಸಕರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾರ್ಯಕ್ರಮ ಆಯೋಜನೆ

6) ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿ ಅನುಭವವಿರುವ ಪೊಲೀಸರನ್ನು ದೂರ ಇಟ್ಟ ಇಲಾಖೆ

7) ವಿಧಾನಸೌಧದ ಹಿರಿಯ ಅಧಿಕಾರಿಗಳ ಪ್ರವೇಶಕ್ಕೆ ತಡೆ, ವಿಧಾನಸಭೆ, ಪರಿಷತ್​ನ ಸಿಬ್ಬಂದಿಗೇ ಆಹ್ವಾನವಿಲ್ಲ

8) ಕಾರ್ಯಕ್ರಮಕ್ಕೆ ನಿವೃತ್ತ ಕಾರ್ಯದರ್ಶಿಗಳಿಂದ ಸಲಹೆ ಪಡೆದಿದ್ದರೂ ಅವರನ್ನೇ ಕಾರ್ಯಕ್ರಮಕ್ಕೆ ಕರೆದಿರಲಿಲ್ಲ

9) ರಾಷ್ಟ್ರಪತಿ ಭಾಷಣದಲ್ಲಿ ಪ್ರಧಾನಿ ಪಟ್ಟಕ್ಕೇರಿದ ರಾಜ್ಯದ ಏಕೈಕ ಸಾಧಕ ದೇವೇಗೌಡರ ಹೆಸರನ್ನೇ ಮರೆತ ಸರ್ಕಾರ

10) ಹೂವಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ದರೂ ರಾಷ್ಟ್ರಪತಿ ಭಾಷಣದ ಬೆನ್ನಲ್ಲೇ ಕುಸಿದು ಬಿದ್ದ ಅಲಂಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್