ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

First Published Jul 22, 2018, 1:36 PM IST
Highlights

ಕಾಂಗ್ರೆಸ್ ದೇಶದ ಜನರ ಆಶಯದ ಪ್ರತಿಬಿಂಬ

ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ 

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ

ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸಲು ಕಸರತ್ತು

ನವದೆಹಲಿ(ಜು.22): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನೂತನವಾಗಿ ರಚಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ದೆಹಲಿಯಲ್ಲಿ ಆರಂಭವಾಗಿದೆ.

ಸಂಸತ್ತಿನ ಅನೆಕ್ಸ್ ಬಿಲ್ಡಿಂಗ್​ನಲ್ಲಿ ನಡೆಯುತ್ತಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಮಧ್ಯ ಪ್ರದೇಶ, ರಾಜಸ್ತಾನ,ಮತ್ತು ಛತ್ತೀಸ್ ಗಡ್ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವೆಣೆ ಬಗ್ಗೆ ಚರ್ಚಿಸಲಾಗುವುದು. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಹಿರಿಯ ಕಾಂಗ್ರೆಸ್ ಮುಖಂಡರಾದ  ಗುಲಾಂ ನಬಿ ಆಜಾದ್,  ಮಲ್ಲಿಕಾಜರ್ಜುನ ಖರ್ಗೆ, ಮೊತಿಲಾಲ್ ವೊರಾ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

The first meeting of the newly constituted Congress Working Committee gets underway under the leadership of Congress President pic.twitter.com/ThugWGGIr6

— Congress (@INCIndia)

ಕಾಂಗ್ರೆಸ್ ಪಕ್ಷ ದೇಶದ ಜನತೆಯ ಧ್ವನಿ ಎಂದು ಬಣ್ಣಿಸಿರುವ ಕಾರ್ಯಕಾರಿ ಸಮಿತಿ, 2019 ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ಚರ್ಚೆ ನಡೆಸಲಿದೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಾಡಿದ ಭಾಷಣವನ್ನು ಶ್ಲಾಘಿಸಲಾಗಿದೆ.

ರಾಹುಲ್ ಭಾಷಣ ಇಡೀ ದೇಶದ ಜನರ ಮನಸ್ಸನ್ನು ತಟ್ಟಿದ್ದು, ಲೋಕಸಭೆ ಚುನಾವಣೆಯಲ್ಲಿ ಸಕಾರಾತ್ಮಕ ಪರಿಣಾಮ ತೋರಲಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.     

click me!