
ಗೋವಾ (ಜೂ.24) ಒಂದೆಡೆ ಭಾರತೀಯ ರೈಲ್ವೆ ದಕ್ಷಿಣ ವಿಭಾಗ ಫುಟ್ ಬೋರ್ಡ್ ನಲ್ಲಿ ಸೆಲ್ಫಿ ತೆಗೆದುಕೊಂಡರೆ ದಂಡ ವಸೂಲಿ ಮಾಡುತ್ತೆನೆ ಎಂದು ಕಟ್ಟು ನಿಟ್ಟಾಗಿ ಹೇಳಿ ಆದೇಶವನ್ನು ಕೊಯಮತ್ತೂರು ನಿಲ್ದಾಣದಲ್ಲಿ ಜಾರಿಮಾಡಿದೆ. ಇನ್ನೊಂದು ಕಡೆ ಗೋವಾದ ಬೀಚ್‌ಗಳಲ್ಲೂ ಸೆಲ್ಫಿ ತೆಗೆದುಕೊಳ್ಳುವಂತೆ ಇಲ್ಲ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗರು ದುರಂತ ಸಾವಿಗೀಡಾಗುತ್ತಿರುವುದಕ್ಕೆ ಪರಿಹಾರ ಸೂಚಿಸಲು ಗೋವಾ ಸರಕಾರ ಅಪಾಯಕಾರಿ ತಾಣಗಳನ್ನು ಗುರುತಿಸುವ ಕೆಲಸ ಆರಂಭಿಸಿತ್ತು. ಇದೀಗ ವರದಿಯ ಆಧಾರದ ಮೇಲೆ 'ನೋ ಸೆಲ್ಫಿ' ವಲಯಗಳನ್ನು ಹೇಳಿದ್ದು ಇನ್ನು ಮುಂದೆ ಸೆಲ್ಫಿಗೆ ಫೋಸ್ ಕೊಡುವುದಕ್ಕೆ ನಿಷೇಧ ಹೇರಿದೆ.
ಇಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ದಂಡ ತೆರಬೇಕಾದೀತು ಜೋಕೆ!
ಗುರುತು ಮಾಡಿರುವ ನೋ ಸೆಲ್ಫಿ ವಲಯಗಳಲ್ಲಿ ಮಾನ್ಸೂನ್ ಮುಗಿಯುವ ತನಕ ಬೆಳಿಗ್ಗೆ 7.30ರಿಂದ ಸಂಜೆ 6ರ ತನಕ ಸಿಬ್ಬಂದಿ ಕೆಲಸ ಮಾಡಲಿದ್ದು ಪ್ರವಾಸಿಗರಿಕೆ ಎಚ್ಚರಿಕೆ ನೀಡಲಿದ್ದಾರೆ. ಸಂಜೆ 6ರಿಂದ ಮಧ್ಯರಾತ್ರಿ 12ವರೆಗೆ ಕಡಲತೀರ ಸುರಕ್ಷತಾ ಪಡೆ ಬೀಚ್‌ಗಳಲ್ಲಿ ಗಸ್ತು ತಿರುಗುಗಲಿದೆ. ಇತ್ತೀಚೆಗೆ ಅಲೆಗಳನ್ನು ಹತ್ತಿರದಿಂದ ನೋಡಲು ಹೋಗಿದ್ದ ತಮಿಳುನಾಡಿನ ಇಬ್ಬರು ಪ್ರವಾಸಿಗರು ನೀರಿ ಪಾಲಾಗಿದ್ದರು.
ಸೆಲ್ಫಿ ನಿಷೇಧಿತ ವಲಯಗಳು ಯಾವುವು? ದಕ್ಷಿಣ ಗೋವಾದ ಅಗೊಂಡಾ, ಬಾಗ್‌ಮಾಲೊ, ಹೊಲ್ಯಾಂಟ್, ಬೈನಾ, ಪೌಲೆಮ್, ಜಪಾನೀಸ್ ಗಾರ್ಡನ್, ಬೆತುಲ್, ಕೆನಾಗ್ವಿನಿಂ, ಖೋಲಾ, ಕ್ಯಾಬೊ ಡೆ ರಾಮಾ, ಪೊಲೆಮ್, ಗಲ್ಜಿಬಾಗ್, ತಾಲ್ಪೋನಾ ಮತ್ತು ರಾಜ್‌ಬಾಗ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುವಂತೆ ಇಲ್ಲ. ಇನ್ನು ಉತ್ತರ ಗೋವಾದ ಬ್ಯಾಂಬೊಲಿಂ ಮತ್ತು ಸಿರಿಡಾವೊ ನಡುವಣ ಬಾಗಾ ನದಿ, ವಗಾಟರ್, ದೋನಾ ಪೌಲಾ ಜೆಟ್ಟಿ, ಸಿಂಕ್ವೆರಿಂ ಕೋಟೆ, ಅಂಜುವಾನಾ, ಮೋರ್ಜಿಂ, ಅಶ್ವೆಮ್, ಅರಂಬೋಲ್, ಕೆರಿಂಬನಲ್ಲಿಯೂ ಮೊಬೖಲ್ ಕ್ಯಾಮರಾ ಆನ್ ಮಾಡಬೇಕಿದ್ದರೆ ಎಚ್ಚರಿಕೆ ಹೇಳಲಾಗುತ್ತದೆ. [ಸಾಂದರ್ಭಿಕ ಚಿತ್ರ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.