
ಲಂಡನ್(ಮೇ. 22): ವಿಷಪ್ರಾಶನಕ್ಕೆ ತುತ್ತಾಗಿರುವ ರಷ್ಯಾದ ಮಾಜಿ ಡಬಲ್ ಏಜೆಂಟ್ ಸರ್ಜೆ ಸ್ಕ್ರಿಪಾಲ್ ಭೇಟಿಗೆ ಆತನ ತಾಯಿ ಮೊರೆ ಇಟ್ಟಿದ್ದಾಳೆ. ಕಳೆದ 14 ವರ್ಷಗಳಿಂದ ಮಗನ ಮುಖವನ್ನೇ ನೋಡಿಲ್ಲ ಎಂದು ಗೋಳಿಟ್ಟಿರುವ ಆಕೆ, ಕರುಳ ಕುಡಿಯನ್ನು ಕಣ್ತುಂಬಿಕೊಳ್ಳಲು ಕಾನೂನಿನ ಅಪ್ಪಣೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಸರ್ಜೆಯ ಧ್ವನಿ ಕೇಳಿ ದಶಕಗಳೇ ಆಗಿದ್ದು, ಲಂಡನ್ ಅಧಿಕಾರಿಗಳ ವಶದಲ್ಲಿರುವ ಮಗನನ್ನು ಭೇಟಿ ಮಾಡಲು ಅನುವು ಮಾಡಿಕೊಡಿ ಎಂದು ಗೋಗರೆದಿದ್ದಾರೆ.
ಯುರೋಪ್ ನಲ್ಲಿದ್ದ ರಷ್ಯನ್ ಏಜೆಂಟ್ ರಿಗೆ ಗುಪ್ತ ಮಾಹಿತಿ ರವಾನಿಸುತ್ತಿದ್ದ ಸರ್ಜೆ ನಂತರ ಡಬಲ್ ಏಜೆಂಟ್ ಆಗಿ ಪರಿವರ್ತನೆಯಾಗಿದ್ದರು. ನಂತರ ಲಂಡನ್ ಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದರು. ಮಾತೃದೇಶದ ವಿರುದ್ದವೇ ಬೇಹುಗಾರಿಕೆ ನಡೆಸಿದ ಆರೋಪ ಇವರ ವಿರುದ್ದ ಕೇಳಿ ಬಂದಿತ್ತು. ಕಳೆದ ಮೂರು ತಿಂಗಳ ಹಿಂದೆ ಸರ್ಜೆ ಮೇಲೆ ವಿಷಾನೀಲ ದಾಳಿ ಮಾಡಲಾಗಿತ್ತು. ಘಟನೆಗೆ ಬ್ರಿಟನ್ ಮತ್ತು ರಷ್ಯಾ ಪರಸ್ಪರ ಆರೋಪದಲ್ಲಿ ನಿರತವಾಗಿವೆ. ಈ ಮಧ್ಯೆ ಸರ್ಜೆ ಅವರನ್ನು ತಮ್ಮ ವಶಕ್ಕೆ ಪಡೆದಿರುವ ಅಧಿಕಾರಿಗಳು ಅವರ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ.
ಆದರೆ ಸರ್ಜೆ ತಾಯಿ ಭೇಟಿಗೆ ಮೊರೆ ಇಟ್ಟಿದ್ದು, ಬ್ರಿಟನ್ ಅನುಮತಿ ನೀಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ರಷ್ಯಾದ ಮಾಧ್ಯಮವೊಂದು ಸರ್ಜೆ ಅವರ ತಾಯಿಯ ಸಂದರ್ಶನ ನಡೆಸಿದ್ದು, ಈ ವಿಡಿಯೋ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಿದ ಬಳಿಕವೇ ಮುಂದಡಿ ಇಡುವುದಾಗಿ ಬ್ರಿಟನ್ ಸ್ಪಷ್ಟನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.