
ನವದೆಹಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ಸಾವಿಗೆ 9 ದಿನಗಳ ಮುನ್ನ ‘ನನಗೆ ಬದುಕುವ ಇಚ್ಛೆಯಿಲ್ಲ.. ಸಾವು ಬರಲಿ ಎಂದು ಬೇಡಿಕೊಳ್ಳುತ್ತಿದ್ದೇನೆ’ ಎಂದು ಪತಿಗೆ ಇ-ಮೇಲ್ ಕಳಿಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ನಾಲ್ಕೂವರೆ ವರ್ಷದ ಹಿಂದೆ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಸಂಭವಿಸಿದ್ದ ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿನ ತನಿಖೆ ನಡೆಸಿದ ಪೊಲೀಸರು ಕಳೆದ ಮೇ 14ರಂದು ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಈ ಪ್ರಕರಣದ ಏಕೈಕ ಆರೋಪಿಯನ್ನಾಗಿಸಿ ಕೋರ್ಟ್‌ಗೆ ದಾಖಲೆ ಸಲ್ಲಿಸಿದ್ದರು. ಆ ದಾಖಲೆಯಲ್ಲಿ, ಸುನಂದಾ ಪುಷ್ಕರ್ ಸಾವಿಗೂ ಮುನ್ನ ಶಶಿಗೆ ಕಳುಹಿಸಿದ್ದ ಇ-ಮೇಲನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಪೋಸ್ಟ್‌ಗಳನ್ನು ಮರಣಪೂರ್ವ ಹೇಳಿಕೆಯನ್ನಾಗಿ ದಾಖಲಿಸಿಕೊಂಡಿದ್ದೇವೆ. ನ್ಯಾಯಾಲಯ ಕೂಡಾ ಇದನ್ನು ಮಾನ್ಯ ಮಾಡಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ.
ಇನ್ನು, ಸುನಂದಾ ಅವರ ಆತ್ಮಹತ್ಯೆಗೆ ಶಶಿ ತರೂರ್ ಪ್ರಚೋದನೆ ನೀಡಿದ್ದಕ್ಕೆ ನಮ್ಮ ಬಳಿ ಸಾಕಷ್ಟುಸಾಕ್ಷ್ಯವಿದೆ. ಅವರನ್ನು ವಿಚಾರಣೆಗೆ ಕರೆಸಬೇಕು ಎಂದೂ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಕುರಿತು ಜೂ.5ರಂದು ಆದೇಶ ಹೊರಡಿಸುವುದಾಗಿ ಜಡ್ಜ್ ಸೋಮವಾರದ ವಿಚಾರಣೆ ವೇಳೆ ತಿಳಿಸಿದರು. ಸುನಂದಾ ಅವರ ಸಾವು ವಿಷದಿಂದ ಸಂಭವಿಸಿದೆ. ಅವರ ಕೋಣೆಯಲ್ಲಿ 27 ಮಾತ್ರೆಗಳು ಸಿಕ್ಕಿದ್ದವು. ಆದರೆ, ಎಷ್ಟುಮಾತ್ರೆಗಳನ್ನು ಆಕೆ ಸೇವಿಸಿದ್ದರು ಎಂಬುದು ಖಚಿತವಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಸುನಂದಾ 2014ರ ಜ.17ರಂದು ದಕ್ಷಿಣ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಸಾವನ್ನ$್ಪಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಘಟನೆ ಕುರಿತು ತನಿಖೆ ನಡೆಸಿದ್ದ ದೆಹಲಿ ಪೊಲೀಸರು, ಮರಣೋತ್ತರ ಪರೀಕ್ಷೆ ವೇಳೆ ಸುನಂದಾ ದೇಹದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಇದು ಸಾವಿಗೂ ಮುನ್ನ ಆಗಿದ್ದ ಗಾಯಗಳು ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.