ಸಚಿವರಿಗೂ ನೋ, ಅಧಿಕಾರಿಗಳಿಗೂ ನೋ: ಮೋದಿ ಭದ್ರತೆಗೆ ಹೊಸ ನಿಯಮಾವಳಿ!

Published : Jun 26, 2018, 04:44 PM IST
ಸಚಿವರಿಗೂ ನೋ, ಅಧಿಕಾರಿಗಳಿಗೂ ನೋ: ಮೋದಿ ಭದ್ರತೆಗೆ ಹೊಸ ನಿಯಮಾವಳಿ!

ಸಾರಾಂಶ

ಪ್ರಧಾನಿಗೆ ಭದ್ರತೆ ಹೆಚ್ಚಿಸಿದ ಕೇಂಧ್ರ ಗೃಹ ಇಲಾಖೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗೆ ಅಸ್ತು ಸಚಿವರು, ಅಧಿಕಾರಿಗಳೂ ಮೋದಿ ಬಳಿ ಹೋಗುವಂತಿಲ್ಲ ಹೊಸ ನಿಯಮಾವಳಿಯಲ್ಲಿ ಇರುವ ಅಂಶಗಳೇನು?

ನವದೆಹಲಿ(ಜೂ.26): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಇಲಾಖೆ ಪ್ರಧಾನಿ ಅವರ ಭದ್ರತೆಗೆ ಹೊಸ ನೀತಿ ರೂಪಿಸಿದೆ. ಈ ಹೊಸ ನೀತಿ ನಿಯಮಾವಳಿಗಳ ಕುರಿತು ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಕೂಡ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಇಲಾಖೆ ಹೊಸ ಭದ್ರತಾ ನಿಯಮಾವಳಿ ಪ್ರಕಾರ ಇನ್ನು ಮುಂದೆ ಯಾರೂ ಕೂಡ ಪ್ರಧಾನಿ ಸಮೀಪ ಬರುವಂತಿಲ್ಲ. ಈ ನಿಯಮದ ಅನ್ವಯ ಸಚಿವರು, ಅಧಿಕಾರಿಗಳು ಕೂಡ ಪರವಾನಿಗೆ ಇಲ್ಲದೇ ಅವರ ಬಳಿ ಹೋಗುವಂತಿಲ್ಲ. ಪ್ರಧಾನಿ ಅವರ ಭದ್ರತಾ ಸಿಬ್ಬಂದಿ ಪರವಾನಿಗೆ ಪಡೆದ ಮೇಲೆಯೇ ಸಚಿವರು ಮತ್ತು ಅಧಿಕಾರಿಗಳು ಅವರ ಬಳಿ ತೆರಳಬಹುದು ಎಂದು ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಎಲ್ಲಾ ರಾಜ್ಯ ಸರ್ಕಾರಗಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆ, ಪ್ರಧಾನಿ ಅವರಿಗೆ ಅನಾಮಿಕ ವ್ಯಕ್ತಿಗಳು ಅಥವಾ ಸಂಘಟನೆಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ. 2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಯೋತ್ಪಾದಕ ಸಂಘಟನೆಗಳು ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಇಲಾಖೆ ಈ ಆದೇಶ ಹೊರಡಿಸಿದೆ.

ನಕ್ಸಲರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಮಾದರಿಯಲ್ಲೇ ಹತ್ಯೆಗೈಯ್ಯುವ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾದ ಬಳಿಕ, ಅವರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಎಸ್‌ಪಿಜಿ ಪರವಾನಿಗೆ ಇಲ್ಲದೇ ಯಾರೂ ಅವರ ಬಳಿ ಹೋಗದಂತೆ ನೋಡಿಕೊಳ್ಳಲು ಆದೇಶ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?