
ಮೈಸೂರು (ಸೆ.19) ಮೈಸೂರು ದಸರಾ ಹಬ್ಬದ ಸಂಭ್ರಮ ಕಳಗಟ್ಟಿದೆ. ದಸರಾ ಉದ್ಘಾಟನೆ ವಿಚಾರದಲ್ಲಿ ಭಾರಿ ವಿವಾದ, ಕೋಲಾಹಲ ಎದ್ದಿದೆ. ಸರ್ಕಾರದ ನಿರ್ಧಾರದ ವಿರುದ್ದ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಪ್ರಯೋಜನವಾಗಿಲ್ಲ. ಇತ್ತ ಅರಮನೆ ನಗರಿಯಲ್ಲಿ ದಸರಾ ಹಬ್ಬದ ತಯಾರಿ ನಡೆಯುತ್ತಿದೆ. ಕಾಡಿನಿಂದ ಮೈಸೂರಿಗೆ ಆಗಮಿಸಿರುವ ಆನೆಗಳು ತಾಲೀಮು ನಡೆಸುತ್ತಿದೆ. ಇದರ ನಡುವೆ ಮೈಸೂರು ಮಹಾರಾಣಿ ತ್ರಿಷಿಕಾ ದೇವಿ ಕುಮಾರಿ ಮಾವುತರ ಮಕ್ಕಳ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ತ್ರಿಷಿಕಾ ತಮ್ಮ ಮಗುವಿನ ಜೊತೆ ಆನೆ ಬಿಡಾರಕ್ಕೆ ತೆರಳಿ ಮಾವುತರ ಮಕ್ಕಳ ಜೊತೆ ಕಾಲ ಕಳೆದಿದ್ದಾರೆ.
ಮೈಸೂರು ದಸರಾ ಹಬ್ಬಕ್ಕಾಗಿ ಆನೆಗಳು ಮೈಸೂರು ಅರಮನೆಯ ಆನೆ ಬಿಡಾರದಲ್ಲಿ ಬೀಡು ಬಿಟ್ಟಿದೆ. ಪ್ರತಿ ದಿನ ತಾಲೀಮು ನಡೆಯುತ್ತಿದೆ. ಆನೆಗಳ ಜೊತೆ ಮಾವುತರೂ ಮಾತ್ರವಲ್ಲ, ಕುಟುಂಬವೂ ಆಗಮಿಸಿದೆ. ಆನೆಗಳ ಬಿಡಾರಕ್ಕೆ ಭೇಟಿ ನೀಡಿದ ಮಹಾರಾಣಿ ತ್ರಿಷಿಕಾ ದೇವಿ, ಮಾವುತರ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಇದೇ ವೇಳೆ ಮಕ್ಕಳಿಗೆ ಹಲವು ಉಡುಗೊರೆ ನೀಡಿದ್ದಾರೆ. ನೀರಿನ ಫ್ಲಾಸ್ಕ್ ಬಾಟಲಿ, ಆಟವಾಡಲು ಚೆಂಡು ಸೇರಿದಂತೆ ಕೆಲ ವಸ್ತುಗಳನ್ನು ಉಡುಗೊರೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲೂ ಗೆದ್ದ ದಸರಾ ಉದ್ಘಾಟನೆ ಅತಿಥಿ ಬಾನು ಮುಷ್ತಾಕ್; ವಿರೋಧಿಸಿದವರ ಅರ್ಜಿ ವಜಾ!
ಆನೆ ಬಿಡಾರಕ್ಕೆ ಭೇಟಿ ನೀಡಿದ ತ್ರಿಷಿಕಾ ದೇವಿ, ಆನೆ ಮಾವುತರು, ಸಿಬ್ಬಂದಿಗಳ ಜೊತೆ ಫೋಟೋ ಕ್ಲಿಕ್ಕಿಸಿದ್ದರು. ಮಕ್ಕಳ ಜೊತೆಗೂ ಫೋಟೋ ಕ್ಲಿಕ್ಕಿಸಿದ್ದಾರೆ. ಜೊತೆಗೆ ಆನೆಯ ಫೋಟೋ ಕ್ಲಿಕ್ಕಿಸಿದ್ದಾರೆ. ಬಳಿಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರು ದಸರಾ ವಿಶ್ವವಿಖ್ಯಾತಿಗೊಂಡಿರುವ ನಾಡಹಬ್ಬ. ಈ ಬಾರಿ ಸೆಪ್ಟೆಂಬರ್ 22ರಿಂದ ಮೈಸೂರು ದಸರಾ ಆರಂಭಗೊಳ್ಳುತ್ತಿದೆ. ಅಕ್ಟೋಬರ್ 2ರಂದು ವಿಜಯದಶಮಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇನ್ನು ಜಂಬೂ ಸವಾರಿ ಅಕ್ಟೋಬರ್ 2ರ ವಿಜಯದಶಮಿ ದಿನ ನಡೆಯಲಿದೆ. ಆನೆ ಮೇಲೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮಂಡೇಶ್ವರಿ ದೇವಿಯ ಮೆರವಣಿಗೆ ನಡೆಯಲಿದೆ. ಮೈಸೂರು ಅರಮನೆಯಲ್ಲಿ ಈ ಅದ್ಧೂರಿ ದಸರಾ ಆಚರಣೆ ನಡೆಯಲಿದೆ.
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್‌ಗೆ ಸರ್ಕಾರ ಆಹ್ವಾನ ನೀಡಿದೆ. ಆದರೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಭಾನು ಮುಷ್ತಾಕ್, ತಾಯಿ ಭುವನೇಶ್ವರಿ ದೇವಿ, ಕುಂಕುಮ, ಅರಶಿನ ವಿರುದ್ದ ಹೇಳಿಕೆ ನೀಡಿದ್ದರು. ಭುವನೇಶ್ವರಿ ದೇವಿಯನ್ನೇ ತಾಯಿ ಎಂದು ಒಪ್ಪಿಕೊಳ್ಳದ ಭಾನು ಮುಷ್ತಾಕ್, ದಸರಾ ಹಬ್ಬದ ಚಾಮುಂಡೇಶ್ವರಿ ದೇವಿಯನ್ನು ಒಪ್ಪಿಕೊಳ್ಳುತ್ತಾರಾ, ಮೂರ್ತಿ ಪೂಜೆ ಒಪ್ಪದ ಭಾನು ಮುಷ್ತಾಕ್ ಹಾಗೂ ಅವರ ಸಮುದಾಯ, ಚಾಮುಂಡೇಶ್ವರಿ ದೇವಿ ಪೂಜೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಬಿಜೆಪಿ ಪ್ರಶ್ನಿಸಿತ್ತು.
ಓಣಂ ರೀತಿ ಹೈಜಾಕ್ ಆಗದಿರಲಿ ನಾಡಹಬ್ಬ ಮೈಸೂರು ದಸರಾ: ವಿಕಾಸ್ ಪುತ್ತೂರು ಲೇಖನ