ಮೈಸೂರು: ಅಕ್ರಮ ಪ್ಲಾಸ್ಟಿಕ್‌ ವಶ, 36 ಸಾವಿರ ರೂಪಾಯಿ ದಂಡ

By Kannadaprabha News  |  First Published Oct 22, 2019, 2:57 PM IST

ಪ್ಲಾಸ್ಟಿಕ್ ನಿಷೇಧಿಸಿ ತಿಂಗಳು ಕಳೆದರೂ ಕದ್ದುಮುಚ್ಚಿ ಪ್ಲಾಸ್ಟಿಕ್ ಉತ್ಪಾಸುವುದು ಬಳಸುವುದು ನಡೆಯುತ್ತಲೇ ಇದೆ. ನಿಷೇಧಿತ ಪ್ಲಾಸ್ಟಿಕ್‌ನ್ನು ಇನ್ನೂ ಬಳಸುತ್ತಿದ್ದರೆ ಬಿಟ್ಟುಬಿಡಿ. ಸಾವಿರಾರು ರೂಪಾಯಿ ದಂಡ ಕಟ್ಬೇಕಾಗುತ್ತೆ ಹುಷಾರ್..!


ಮೈಸೂರು(ಅ.22): ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಗಾಳಿಗೆ ತೂರಿ ರಾಜಾರೋಷವಾಗಿ ಪ್ಲಾಸ್ಟಿಕ್ ಬಳಸುವವರು ಎಚ್ಚೆತ್ತಕೊಳ್ಳಲೇ ಬೇಕು. ಮೈಸೂರಿನ ಟಿ ನರಸೀಪುರದಲ್ಲಿ ಅಕ್ರಮ ಪ್ಲಾಸ್ಟಿಕ್ ವಶಪಡಿಸಿದ ಅಧಿಕಾರಿಗಳು ಸಾವಿರಾರು ರುಪಾಯಿ ದಂಡ ವಿಧಿಸಿದ್ದಾರೆ.

ಟಿ. ನರಸೀಪುರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ನೂರಾರು ಕೆ.ಜಿ. ಪ್ಲಾಸ್ಟಿಕ್‌ನ್ನು ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡು, 36 ಸಾವಿರ ರು. ಗಳ ದಂಡ ವಿಧಿಸಿದ್ದಾರೆ.

Tap to resize

Latest Videos

ಮನೆಗೆ ಆಸರೆಯಾಗಿದ್ದ ಮಗ ದುಷ್ಕರ್ಮಿಗಳಿಗೆ ಬಲಿ, ಅನ್ನಾಹಾರ ಬಿಟ್ಟ ಸಾಕು ನಾಯಿ

ಪ್ಲಾಸ್ಟಿಕ್‌ ಮಾರಾಟದ ಮೇಲೆ ನಿಷೇಧ ಹೇರಿ, ಮಾರಾಟ ಮಾಡಿದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಪ್ಲಾಸ್ಟಿಕ್‌ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು.

ಮೊದಲು ಗೀತಾ ಏಜೆನ್ಸಿ ಅಂಗಡಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಕ್ರಮ ದಾಸ್ತಾನು ಪ್ಲಾಸ್ಟಿಕ್‌ ವಶಪಡಿಸಿಕೊಂಡು 25 ಸಾವಿರ ರು. ಗಳ ದಂಡ ವಿಧಿಸಿದರು. ನಂತರ ಹೂವು ಮಾರಾಟ ಅಂಗಡಿಗಳ ಮೇಲೂ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳಾದ ಮಹದೇಶ ಹಾಗೂ ಪಾಂಡು ಅವರಿಗೆ ತಲಾ 5 ಸಾವಿರ ರು. ಗಳ ದಂಡ ಹಾಕಿದ್ದಾರೆ.

ನಮ್ಮನ್ನು ಖರೀದಿಸಲು ನಾವು ದನ, ಕುರಿ, ಕೋಳಿ ಅಲ್ಲ: ಬಿ. ಸಿ. ಪಾಟೀಲ್

ಮುಖ್ಯಾಧಿಕಾರಿ ಅಶೋಕ ಸೂಚನೆ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಪರಿಸರ ಎಂಜಿನಿಯರ್‌ ಮೈತ್ರಾದೇವಿ, ಆರೋಗ್ಯ ನಿರೀಕ್ಷಕ ಆರ್‌. ಚೇತನ್‌ಕುಮಾರ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಹಲವು ಬಾರಿ ಸೂಚನೆ ಸಲಹೆಗಳನ್ನು ನೀಡಿದ್ದರೂ ಕೂಡ ಪಟ್ಟಣದ ರಸ್ತೆಗಳಲ್ಲಿ ಬಿಡಾಡಿ ದನಗಳನ್ನು ಬಿಡಲಾಗಿದೆ. ಜಾನುವಾರುಗಳ ಮಾಲೀಕರು ಎತ್ತೆಚ್ಚುಕೊಳ್ಳದಿದ್ದರೆ ಬಿಡಾಡಿ ದನಗಳನ್ನು ವಶಕ್ಕೆ ಪಡೆಯುತ್ತೇವೆ. ವಶಪಡಿಸಿಕೊಂಡ ಮೇಲೆ ಯಾರೇ ಹೇಳಿದರೂ ಬಿಡಲ್ಲ ಎಂದು ಆರೋಗ್ಯ ನಿರೀಕ್ಷಕ ಆರ್‌. ಚೇತನ್‌ಕುಮಾರ್‌ ಹೇಳಿದ್ದಾರೆ.

ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...!

click me!