ಮೈಸೂರು ಮೃಗಾಲಯದ Weekly Off ರದ್ದು: ಪ್ರವಾಸಿಗರು ಎಲ್ಲಾ ದಿನವೂ ಹೋಗ್ಬಹುದು

By Web DeskFirst Published Oct 14, 2019, 5:59 PM IST
Highlights

ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಎಲ್ಲಾ ದಿನವೂ ಮೃಗಾಲಯಕ್ಕೆ ಭೇಟಿ ನೀಡಬಹುದು.

ಮೈಸೂರು, [ಅ.14]:  ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದ ವಾರದ (Weekly Off) ರಜೆಯನ್ನು ರದ್ದು ಮಾಡಲಾಗಿದೆ.

ಪ್ರತಿ ಮಂಗಳವಾರ ಮೈಸೂರು ಮೃಗಾಲಯಕ್ಕೆ ರಜೆ ಇರುತ್ತಿತ್ತು. ಆದ್ರೆ, ಇದೀಗ ಆ ವಾರದ ರಜೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮೃಗಾಲಯದ ವಾರದ ರಜೆಯನ್ನು ರದ್ದು ಮಾಡಲಾಗಿದೆ.

ಮೈಸೂರು ಝೂಗೆ ವಿಮಾನದಲ್ಲಿ ಬಂದ ಬಿಳಿ ಘೇಂಡಾಮೃಗ

ರಜೆ ರದ್ದು ಹಿನ್ನೆಲೆಯಲ್ಲಿ ಪ್ರವಾಸಿಗರು ವಾರದ ಎಲ್ಲಾ ದಿನವು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಬಹುದು. ಆದ್ರೆ ಮೃಗಾಯಲದ ಸಮಯದಲ್ಲಿ ಮಾತ್ರ.

ಮೈಸೂರಿನಲ್ಲಿರುವ ಈ ಶ್ರೀ ಚಾಮರಾಜೇಂದ್ರ ಮೃಗಾಲಯ ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದು. ಈ ಮೃಗಾಲಯ 1892 ರಲ್ಲಿ ಉದ್ಘಾಟನೆಗೊಂಡರೂ, ಸಾರ್ವಜನಿಕರಿಗೆ ಲಭ್ಯವಾದದ್ದು 1902 ರಲ್ಲಿ.

ಇಲ್ಲಿ ನಾನಾ ರೀತಿಯ ನಾನಾ ದೇಶದ ಪ್ರಾಣಿಗಳಿದ್ದು ಮಕ್ಕಳಿಂದ ವಯಸ್ಕರರಿಗೂ ಹಾಗೂ ಎಲ್ಲರಿಗೂ ಆಕರ್ಷಣೀಯ ಸ್ಥಳವಾಗಿದೆ. ಫ್ರೀ ಟೈಮ್ ನಲ್ಲಿ ಒಮ್ಮೆ ರೌಂಡ್ ಹೋಗಿ ಬನ್ನಿ.

ಮೃಗಾಲಯ ಭೇಟಿ ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 5.30ರ ವರೆಗೆ. 

ಪ್ರವೇಶ ಶುಲ್ಕ : ಮಕ್ಕಳಿಗೆ : 30.00 ರೂ,  ವಯಸ್ಕರಿಗೆ : 50.00 ರೂ, 

ಹೆಚ್ಚಿನ ಮಾಹಿತಿಗಾಗಿ:  0821-2421051

ವೆಬ್ ಸೈಟ್: www.mysorezoo.info

click me!