ನಂಜನಗೂಡು : ಪೊಲೀಸ್ ಅಧಿಕಾರಿ ಜೇಬಿನಿಂದ ಕಳ್ಳತನ

Published : Oct 14, 2019, 10:11 AM IST
ನಂಜನಗೂಡು : ಪೊಲೀಸ್ ಅಧಿಕಾರಿ ಜೇಬಿನಿಂದ ಕಳ್ಳತನ

ಸಾರಾಂಶ

ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆ ನಡೆದಿದ್ದು, ಈ ವೇಳೆ ಪೊಲೀಸರ ಜೇಬಿನಿಂದಲೇ ಕಳ್ಳತನವೂ ಕೂಡ ನಡೆಯಿತು. 

ಮೈಸೂರು [ಅ.14]:  ಮಹರ್ಷಿ ವಾಲ್ಮೀಕಿ ಜಯಂತಿಯಂದು ಡಿಜೆಗೆ ಪೊಲೀಸರು ಅವಕಾಶ ನೀಡಲಿಲ್ಲವೆಂದು ಉದ್ರಿಕ್ತ ಯುವಕರ ಗುಂಪು ಪ್ರತಿಭಟನೆ ನಡೆಸಿ ಬಸ್ ಮೇಲೆ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಜರುಗಿತು.

ಕಲ್ಲು ತೂರಾಟದ ವೇಳೆಯಲ್ಲಿ ಡಿವೈಎಸ್ಪಿ ಮಲ್ಲಿಕ್ ಅವರ ಬೆನ್ನಿನ ಭಾಗಕ್ಕೆ ಕಲ್ಲು ಬಿದ್ದು ಗಾಯ ಗೊಂಡಿದ್ದಲ್ಲದೆ ಅವರ ಜೇಬಿನಲ್ಲಿದ್ದ 25 ಸಾವಿರ ಹಣ, ಕ್ರೆಡಿಟ್ ಕಾರ್ಡ್, ಡಿಬಿಟ್ ಕಾರ್ಡ್ ಸೇರಿದಂತೆ ದಾಖಲೆಗಳು ಕಳೆದು ಹೋದವು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಇದರಿಂದ ಕೆಲವು ಯುವಕರು ಗಾಯಗೊಂಡರು. ನಂತರ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!