ತೆರಿಗೆ ರಹಿತ ಹಾಲು ಆಮದಿಗೆ ಮೈಮುಲ್‌ ವಿರೋಧ

By Kannadaprabha NewsFirst Published Oct 12, 2019, 3:09 PM IST
Highlights

ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಮುಂದಾಗಿರುವುದನ್ನು ಮೈಮುಲ್ ಖಂಡಿಸಿದೆ. ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿದೆ.

ಮೈಸೂರು(ಅ.12): ಕೇಂದ್ರ ಸರ್ಕಾರವು ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ ಎಂಬ ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಮುಂದಾಗಿರುವುದನ್ನು ಖಂಡಿಸಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಯಾದ ಹಾಲು ಉತ್ಪಾದಕರು ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಏಷ್ಯಾ- ಫೆಸಿಫಿಕ್‌ ವಲಯದ ರಾಷ್ಟ್ರಗಳಾದ ಆಸ್ಪ್ರೇಲಿಯಾ, ಬ್ರುನೈ, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷಿಯಾ, ಜಪಾನ್‌, ಲಾವೋಸ್‌, ಮಲೇಷಿಯಾ, ಮಯಾನ್ಮಾರ್‌, ನ್ಯೂಜಿಲೆಂಡ್‌, ಫಿಲಿಫೈನ್ಸ್‌, ಸಿಂಗಾಪೂರ, ಥೈಲ್ಯಾಂಡ್‌, ವಿಯಾಟ್ನಂ, ದಕ್ಷಿಣ ಕೋರಿಯಾ ರಾಷ್ಟ್ರಗಳು ಪರಸ್ಪರ ಲಾಭ ಮತ್ತು ಪ್ರಬಲ ಮಾರುಕಟ್ಟೆಸೃಷ್ಟಿಸುವ ಉದ್ದೇಶದಿಂದ ಈ ಒಪ್ಪ ಮಾಡಿಕೊಳ್ಳಲಾಗಿದೆ.

ಹುಣಸೂರು ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಫಿಕ್ಸ್

ಇದರಿಂದ ಕೇಂದ್ರ ಸರ್ಕಾರವು ತೆರಿಗೆ ರಹಿತವಾಗಿ ಕ್ಷೀರವನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಹೈನೋದ್ಯೋಮಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳ ಪಾಡು ಏನಾಗಬೇಡ? ಆದ್ದರಿಂದ ಭಾರತವು ಹಾಲು ಉದ್ಯಮದಲ್ಲಿ ಯಾವುದೇ ದೇಶದೊಡನೆ ತೆರಿಗೆ ರಹಿತ ಆಮದು ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮೈಮುಲ್‌ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಮಾಜಿ ಅಧ್ಯಕ್ಷರಾದ ಕೆ.ಜಿ. ಮಹೇಶ್‌, ಎ.ಟಿ. ಸೋಮಶೇಖರ್‌, ನಿರ್ದೇಶಕ ಈರೇಗೌಡ ಮತ್ತಿತರರು ಹಾಜರಿದ್ದರು.

ದಸರಾ ಪ್ರವಾಸಿಗರ ಮೊಬೈಲ್, ಹಣ ಸುಲಿಗೆ

ದೇಶದಲ್ಲಿ 130 ಕೋಟಿ ಜನಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 10 ಕೋಟಿ ಜನರು ಹೈನೋದ್ಯಮ ಮಾಡುತ್ತಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 1081 ಸಂಘಗಳಿದ್ದು, 90 ಸಾವಿರ ಕುಟುಂಬಗಳು ಹೈನುಗಾರಿಕೆ ಮಾಡುತ್ತಿವೆ. ದಿನವಹಿ ಸರಾಸರಿ 6 ಲಕ್ಷಕ್ಕೂ ಮಿಗಿಲಾಗಿ ಹಾಲನ್ನು ಸಹಕಾರ ಸಂಘಕ್ಕೆ ಸರಬರಾದು ಮಾಡುತ್ತಿದ್ದಾರೆ.

ಒಂದು ವೇಳೆ ಕೇಂದ್ರ ಉದ್ದೇಶಿಸಿರುವ ಒಪ್ಪಂದ ಜಾರಿಗೆ ಬಂದಲ್ಲಿ ಹಾಲು ವಿದೇಶಗಳಿಂದ ಭಾರತಕ್ಕೆ ಬರುತ್ತದೆ. ಆಗ ಇಲ್ಲಿನ ಹೈನುಗಾರಿಕಾ ಕುಟುಂಬಗಳ ಬದುಕು ಅತಂತ್ರವಾಗಲಿದೆ ಎಂದು ಮೈಮುಲ್‌ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಟೀಕಿಸಿದರು.

ಮೈಸೂರು: ಚಾಮುಂಡಿಗೆ ರಾಷ್ಟ್ರಪತಿ ನಮನ

click me!