
ಬೆಂಗಳೂರು (ಅ.10): ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಡಿ ತನಿಖೆ ತೀವ್ರವಾಗಿದೆ. ಇದರ ಬೆನ್ನಲ್ಲಿಯೇ ಮುಡಾದಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳ ಮೂಟೆ ಹೊರಬರುತ್ತಿದ್ದ. ಕಾಂಗ್ರೆಸ್ ಮುಖಂಡ ಎ. ಪಾಪಣ್ಣ ಎನ್ನುವವರಿಗೆ ಮೈಸೂರಿನ ಅತ್ಯಂತ ಪ್ರಮುಖ ಬಡಾವಣೆಯಲ್ಲಿ ಬರೋಬ್ಬರಿ 31 ಸೈಟ್ ಹಂಚಿಕೆ ಮಾಡಲಾಗಿತ್ತು. ಇನ್ನೊಂದೆಡೆ ಮುಡಾ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ತಮ್ಮ ಮನೆಯ ಕೆಲಸದವನ ಹೆಸರಲ್ಲೂ ಕೋಟಿ ಕೋಟಿ ಆಸ್ತಿ ಮಾಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನದ ಬಳಿಕ 59 ಕ್ಕೂ ಹೆಚ್ಚು ಸೈಟ್‌ಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. 60 ಕೋಟಿ ಮೌಲ್ಯದ ಸೈಟ್ ಗಳಲ್ಲಿ ಕಾಂಗ್ರೆಸ್ ಮುಖಂಡ ಎ ಪಾಪಣ್ಣ ಅವರದ್ದೇ ಅಗ್ರ ಪಾಲು ಇದೆ. ಪಾಪಣ್ಣ ಹೆಸರಲ್ಲಿದ್ದ ಎಲ್ಲಾ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟಟುಗೋಲು ಹಾಕಿಕೊಂಡಿದೆ.
ಮೈಸೂರಿನ ಪ್ರಮುಖ ಬಡಾವಣೆಯಾಗಿರುವ ವಿಜಯನಗರ ನಾಲ್ಕನೇ ಹಂತದಲ್ಲಿ ಈ ಸೈಟ್‌ಗಳಿದ್ದವು ಎನ್ನಲಾಗಿದೆ. ಕಾಂಗ್ರೆಸ್ ಮುಖಂಡ ಎ. ಪಾಪಣ್ಣ ಅವರ ಹೆಸರಲ್ಲಿ ಇದ್ದ 31 ಸೈಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಮರೀಗೌಡಗೆ ಕೂಡ ಅಕ್ರಮ ಸೈಟ್ ಮಂಜೂರು ಮಾಡಲಾಗಿದೆ.
ಇಷ್ಟು ಮಾತ್ರವಲ್ಲದೆ ದಿನೇಶ್ ಕುಮಾರ್ ತನ್ನ ಮನೆಯ ಕೆಲಸದವನ ಹೆಸರಲ್ಲೂ ಕೋಟಿ ಕೋಟಿ ಆಸ್ತಿ ಮಾಡಿಟ್ಟಿದ್ದರು ಎನ್ನುವುದು ಗೊತ್ತಾಗಿದೆ. ಮನೆ ಕೆಲಸದವ ರಮೇಶ್ ಹೆಸರಲ್ಲೂ ಕೂಡ ಆಸ್ತಿ, ಬ್ಯಾಂಕ್ ಅಕೌಂಟ್‌ನಲ್ಲಿ ಕೋಟ್ಯಂತರ ಹಣ ಇಡಲಾಗಿತ್ತು. ಅತ್ತೆ, ಮಾವ, ಬಾಮೈದನ ಹೆಸರನ್ನೂ ಕೋಟಿ ಕೋಟಿ ಆಸ್ತಿಯನ್ನು ದಿನೇಶ್ ಕುಮಾರ್ ಮಾಡಿದ್ದರು.