ಮೈಸೂರು ವಿಶ್ವದ್ಯಾಲಯದಲ್ಲಿ ಬೌದ್ಧ ಅಧ್ಯಯನ ಕೇಂದ್ರ

By Kannadaprabha NewsFirst Published Oct 15, 2019, 10:15 AM IST
Highlights

ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ವರ್ಷದಿಂದ ಬೌದ್ಧ ಅಧ್ಯಯನ ಕೇಂದ್ರ ಆರಂಭವಾಗಲಿದೆ. ಇದಕ್ಕಾಗಿ ವಿಶ್ವ ವಿದ್ಯಾನಿಲಯದಿಂದ 5 ಲಕ್ಷ ರೂಪಾಯಿ ಬಿಡುಗಡೆ ಮಾಡುತ್ತೇವೆ ಎಂದು ಮೈಸೂರು ವಿವಿ ಕುಲಪತಿ ಪೊ›.ಜಿ. ಹೇಮಂತ್‌ ಕುಮಾರ್‌ ತಿಳಿಸಿದ್ದಾರೆ.

ಮೈಸೂರು(ಅ.15): ಬೌದ್ಧ ಅಧ್ಯಯನ ಕೇಂದ್ರವನ್ನು ಈ ವರ್ಷದಿಂದ ವಿಶ್ವ ವಿದ್ಯಾನಿಲಯದ ಮಟ್ಟದಲ್ಲಿ ಪ್ರಾರಂಭ ಮಾಡುತ್ತೇವೆ. ವಿಶ್ವ ವಿದ್ಯಾನಿಲಯದಿಂದ 5 ಲಕ್ಷ ರೂಪಾಯಿ ಬಿಡುಗಡೆ ಮಾಡುತ್ತೇವೆ ಎಂದು ಮೈಸೂರು ವಿವಿ ಕುಲಪತಿ ಪೊ›.ಜಿ. ಹೇಮಂತ್‌ ಕುಮಾರ್‌ ತಿಳಿಸಿದ್ದಾರೆ.

ಬಾಬಾ ಸಾಹೇಬ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 63ನೇ ವರ್ಷದ ಧಮ್ಮ ದೀಕ್ಷಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಬುದ್ಧ ಗುರುವಿನತ್ತ ಪಯಣ ಸಾಂಸ್ಕೃತಿಕ ತಲ್ಲಣಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಎನ್‌ಟಿಎಂಸ್ ಶಾಲೆ ಹಸ್ತಾಂತರವಿಲ್ಲ, ಯಥಾಸ್ಥಿತಿಯಲ್ಲಿ ನಡೆಸಲು ಸೂಚನೆ

ಮೊದಲು ಅಂಬೇಡ್ಕರ್‌ ಅಧ್ಯಯನ ಕೇಂದ್ರದಿಂದ ಆರಂಭ ಮಾಡಿ ನಂತರ ಸರ್ಕಾರಕ್ಕೆ ಗಮನಕ್ಕೆ ತಂದು ಪತ್ರ ಬರೆದು ನಂತರ ಸರ್ಕಾರ ಅನುದಾನ ನೀಡಿದ್ದಲ್ಲಿ ಪ್ರತ್ಯೇಕ ಬೌದ್ಧ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು. ಇವತ್ತಿನ ದಿನಗಳಲ್ಲಿ ಯುವ ಜನಾಂಗ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕು. ಪಠ್ಯೇತರ ಚಟುವಟಿಕೆಯನ್ನು ಕಲಿಯಬೇಕು. ಹೃದಯವಂತಿಕೆ ಬೆಳಸಿಕೊಳ್ಳಬೇಕು ಆಗ ಮಾತ್ರ ಬೌದ್ಧಿಕ ವಿಕಾಸಕ್ಕೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಸಿದ್ದು-ಪ್ರಸಾದ್ ಮುಖಾಮುಖಿ: ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು! ಮುಂದೇನಾಯ್ತು?

ಇಂದು ಬೌದ್ಧ ಧರ್ಮದ, ಬುದ್ಧ ಮತ್ತು ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಯುವ ಜನತೆಗೆ ತಿಳಿಸುವ ಪ್ರಯತ್ನ ಮಾಡಬೇಕಿದೆ. ಯುವ ಜನತೆಗೆ ಒಂದು ಗುರಿ ಎಂಬುದು ಇಲ್ಲ. ಅವರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದು ತಿಳಿಯದೇ ಸಾಗುತ್ತಿದ್ದಾರೆ. ಅವರಿಗೆ ಇಂತವರ ವಿಚಾರ ಧಾರೆಗಳನ್ನು ಹಂತ ಹಂತವಾಗಿ ತಿಳಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ಮೃಗಾಲಯದ Weekly Off ರದ್ದು: ಪ್ರವಾಸಿಗರು ಎಲ್ಲಾ ದಿನವೂ ಹೋಗ್ಬಹುದು

ದೇವನೂರು ಬಸವರಾಜ ಮಾತನಾಡಿ, ಇಂದು ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಸಮಾನತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಬುದ್ಧನ ವಿಚಾರ ಧಾರೆಗಳನ್ನು ತಿಳಿಸಿ ಅರಿವು ಮೂಡಿಸಬೇಕಿದೆ. ಇಂದು ಜಾತಿ ಧರ್ಮ ಎಲ್ಲಾವನ್ನು ಮೆಟ್ಟಿನಿಲ್ಲುವಂತಹ ಜಾಗೃತಿಯನ್ನು ಯುವ ಸಮೂಹ ಮಾಡಬೇಕು ಎಂದು ಹೇಳಿದ್ದಾರೆ. ಜೀತವನದ ಮನೋರಖ್ಚಿತ ಭಂತೇಜಿ, ಪ್ರೊ.ಜೆ. ಸೋಮಶೇಖರ್‌ ಇದ್ದರು.

click me!