ನವ ವಿವಾಹಿತೆ ಗರ್ಭಿಣಿ ಪತ್ನಿಯನ್ನೇ ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪತ್ನಿ ಗರ್ಭಿಣಿಯಾಗಲು ತಾನು ಕಾರಣ ಅಲ್ಲ ಎಂದು ಆರೋಪಿ ಹೇಳಿದ್ದ. ಆಕೆಯನ್ನು ವಿವಾಹವಾಗುವುದಕ್ಕೂ ನಿರಾಕರಿಸಿದ್ದ.
ಮೈಸೂರು(ಅ.18): ನವ ವಿವಾಹಿತ ಪತ್ನಿಯನ್ನೇ ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ಲಕ್ಷ್ಮಿಪುರದ ನಿವಾಸಿ ನಾಗಮ್ಮ (19) ಮೃತ ನವ ವಿವಾಹಿತೆ. ನಾಗರಾಜ ಅಲಿಯಾಸ್ ಪವನ್ (19), ಪತ್ನಿಯನ್ನೇ ಕೊಂದ ಬಂಧಿತ ಆರೋಪಿ.
ಚಾಮುಂಡಿ ತಾಯಿ ಮುಂದೆ ಕೈಕಟ್ಟಿ ಕೂತು ಕಣ್ಣೀರಿಟ್ಟ ಸಾರಾ ಮಹೇಶ್..!
ಅಕ್ಟೋಬರ್ 10ರಂದು ಮನೆಯಿಂದ ಹೊರ ಹೋಗಿದ್ದ ನಾಗಮ್ಮ ನಾಪತ್ತೆಯಾಗಿದ್ದಳು. ಈ ಬಗ್ಗೆ ನಾಗಮ್ಮ ಪೋಷಕರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಸಂದರ್ಭ ಮೃತಳ ಪೋಷಕರು ಆರೋಪಿ ನಾಗರಾಜನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ತನಿಖೆ ಚುರುಕುಗೊಳಿಸಿದ ಬೆಟ್ಟದಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಓದುತ್ತಿದ್ದಾಗಲೇ ಪ್ರೀತಿಸುತ್ತಿದ್ದರು:
ಮೃತ ನಾಗಮ್ಮ, ಆರೋಪಿ ನಾಗರಾಜ ಓದುತಿದ್ದಾಗಲೇ ಪರಸ್ಪರ ಪ್ರೀತಿಸುತಿದ್ದರು. ವಿವಾಹಕ್ಕೂ ಮೊದಲೇ ಮೃತ ನಾಗಮ್ಮ ಗರ್ಭಿಣಿಯಾಗಿದ್ದಳು. ಈ ಸಂದರ್ಭ ನಾಗರಾಜ ವಿವಾಹಕ್ಕೆ ಒಲ್ಲೆ ಎಂದಿದ್ದ. ನಾಗಮ್ಮ ಗರ್ಭಿಣಿಯಾಗಲು ನಾನು ಕಾರಣನಲ್ಲ ನಾನು ಮದುವೆ ಆಗಲ್ಲ ಎಂದು ನಾಗರಾಜ್ ಹೇಳಿದ್ದ.
ನ್ಯಾಯ ಪಂಚಾಯಿತಿಯಲ್ಲಿ ಮದುವೆ:
10ದಿನಗಳ ಹಿಂದೆಯಷ್ಟೇ ನ್ಯಾಯ ಪಂಚಾಯಿತಿ ಮಾಡಿ ಗ್ರಾಮಸ್ಥರು ಇಬ್ಬರಿಗೂ ಮದುವೆ ಮಾಡಿಸಿದ್ದರು. ಒಲ್ಲದ ಮದುವೆಯಾಗಿದ್ದ ನಾಗರಾಜ ಪ್ರಿಯತಮೆಯನ್ನು ಊರಾಚೆ ಕರೆಸಿಕೊಂಡಿದ್ದ. ಲಕ್ಷ್ಮೀಪುರ ಗ್ರಾಮದ ಕರಿಕಲ್ಲು ಗುಡ್ಡದಲ್ಲಿ ಬರ್ಬರವಾಗಿ ಕೊಂದು ಹತ್ಯೆ ಮಾಡಿದ್ದ.
ಆರೋಪಿ ನಾಗರಾಜ್ ಪೋಲಿಸರ ತನಿಖೆಯಲ್ಲಿ ಅಸಲಿ ಸತ್ಯ ಬಾಯಿಬಿಟ್ಟು ಕಂಬಿ ಎಣಿಸುತ್ತಿದ್ದಾನೆ. ಡಿವೈಎಸ್ಪಿ ಸುಂದರರಾಜ್ ನೇತೃತ್ವದಲ್ಲಿ ಬೆಟ್ಟದಪುರ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿದ್ದರು.
ಹುಣಸೂರಲ್ಲಿ ಅನರ್ಹ ಶಾಸಕ ಹೇಳಿದ್ದೇ ಫೈನಲ್ ಎಂದ್ರು ಸೋಮಣ್ಣ