ತಮ್ಮನ ನಿಧನದ ಸುದ್ದಿ ಕೇಳಿ ಅಣ್ಣನೂ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬೆಟ್ಟದಪುರ [ನ.07]: ಅಣ್ಣ ಮತ್ತು ತಮ್ಮ ಒಂದೇ ದಿನ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದಲ್ಲಿ ಬುಧವಾರ ನಡೆದಿದೆ.
ಗ್ರಾಮದ ರಾಜಶೇಖರ ಶೆಟ್ಟಿ (70) ಮತ್ತು ಚಿಕ್ಕವೀರ ಶೆಟ್ಟಿ (62)ಒಂದೇ ದಿನ ಮೃತಪಟ್ಟ ಸಹೋದರರು. ತಮ್ಮ ಚಿಕ್ಕವೀರ ಶೆಟ್ಟಿ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ಬುಧವಾರ ಮೃತ ಪಟ್ಟರು.
ಈ ಹಿಂದೆಯೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಅಣ್ಣ ರಾಜಶೇಖರ ಶೆಟ್ಟಿ ಅವರು ಸಹೋದರನ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆಯೂ ಈ ರೀತಿಯ ಅನೇಕ ಪ್ರಕರಣಗಳು ವರದಿಯಾಗಿವೆ, ಪತಿ - ಪತ್ನಿ, ತಾಯಿ ಮಗ ಒಂದೇ ದಿನ ಮೃತಪಟ್ಟ ಘಟನೆಗಳು ನಡೆದಿದ್ದು ಇದೀಗ ಸಹೋದರರಿಬ್ಬರು ಒಂದೆ ದಿನ ಇಹಲೋಕ ತ್ಯಜಿಸಿದ್ದಾರೆ.