ಜೆಡಿಎಸ್‌ನಿಂದ ನಾನು ಈಗ ದೂರ ಎಂದು ಪುನರುಚ್ಛರಿಸಿದ ಜಿಟಿಡಿ

By Kannadaprabha News  |  First Published Nov 6, 2019, 12:22 PM IST

ಜೆಡಿಎಸ್‌ ಪಕ್ಷದ ಚಟುವಟಿಕೆಯಿಂದ ನಾನು ದೂರವಿದ್ದೇನೆ ಎಂದು ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ನಾನು ಯಾವ ಜೆಡಿಎಸ್‌ ಶಾಸಕರ ಜೊತೆಯೂ ಮಾತನಾಡಿಲ್ಲ. ಯಾರನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ಯಾರನ್ನು ಪಕ್ಷ ಕಟ್ಟುತ್ತೇನೆ ಬನ್ನಿ ಎಂದು ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಮೈಸೂರು(ನ.06): ಜೆಡಿಎಸ್‌ ಪಕ್ಷದ ಚಟುವಟಿಕೆಯಿಂದ ನಾನು ದೂರವಿದ್ದೇನೆ ಎಂದು ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವ ಜೆಡಿಎಸ್‌ ಶಾಸಕರ ಜೊತೆಯೂ ಮಾತನಾಡಿಲ್ಲ. ಯಾರನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ. ಯಾರನ್ನು ಪಕ್ಷ ಕಟ್ಟುತ್ತೇನೆ ಬನ್ನಿ ಎಂದು ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Latest Videos

undefined

ನಾನು ತಾಂತ್ರಿಕವಾಗಿ JDSನಲ್ಲಿದ್ದೇನೆ ಹೊರತು ಮಾನಸಿಕವಾಗಿ ಇಲ್ಲ : ದೇವೇಗೌಡ

ಜೆಡಿಎಸ್‌ ಶಾಸಕರಾದ ಸಿ.ಎಸ್‌. ಪುಟ್ಟರಾಜು, ಕೆ. ಮಹದೇವ ಬಂದು ನನ್ನ ಜೊತೆ ಮಾತನಾಡಿದರು. ನಮಗೂ ನೋವಾಗಿದೆ. ಮುಂದೆ ಸರಿಯಾಗುತ್ತೆ ದುಡುಕುವುದು ಬೇಡ ಅಂದರು. ಅದಕ್ಕೆ ಸರಿ ಎಂದಿದ್ದೇನೆ ಎಂದರು. ಇದೇ ವೇಳೆ ಹುಣಸೂರು ಉಪ ಚುನಾವಣೆಯಲ್ಲಿ ಪುತ್ರ ಜಿ.ಡಿ. ಹರೀಶ್‌ಗೌಡ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಟಿಕೆಟ್‌ ಕೊಡಿ ಅಂತ ಯಾರ ಬಳಿಯೂ ಹೋಗಿಲ್ಲ. ಯಾರು ನಮಗೆ ಸ್ಪರ್ಧಿಸಿ ಅಂತಾನೂ ಕೇಳಿಲ್ಲ. ಈ ಚುನಾವಣೆಯಲ್ಲಿ ನಾನು ತಟಸ್ಥನಾಗಿರುತ್ತೇನೆ ಎಂದು ಹೇಳಿದ್ದಾರೆ.

ದಸರೆಯಲ್ಲಿ ಮೋದಿ, ಬಿಎಸ್‌ವೈ ಗುಣಗಾನ ಮಾಡಿದ ಜಿಟಿಡಿ!

ರಾಜ್ಯ ರಾಜಕಾರಣದ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನಾನು ನನ್ನ ಕ್ಷೇತ್ರದ ಕಡೆ ಮಾತ್ರ ಗಮನಹರಿಸುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡುವುದು ಅವರಿಗೆ ಮಾತ್ರ ಗೊತ್ತಾಗುತ್ತದೆ. ಕುಮಾರಸ್ವಾಮಿ ಸರ್ಕಾರ ಕೆಡವಲು ಬಿಡಲ್ಲ ಉಳಿಸುತ್ತೇವೆ ಎಂದಿದ್ದಾರೆ. ನಮಗೂ ಅದೇ ಬೇಕಾಗಿರುವುದು. ಜನರ ಕೆಲಸಗಳು ಆಗಬೇಕು, ಅಭಿವೃದ್ಧಿಯಾಗಬೇಕು ಅಷ್ಟೇ ಎಂದರು.

'ಸಿಎಂ ಭೇಟಿಯಾದರೆಂದು ಜಿಟಿಡಿ ಪಕ್ಷ ಬಿಡ್ತಾರೆ ಅಂತ ಹೇಳಬೇಡಿ

click me!