ಬಿಎಸ್‌ವೈ, ಶಾ ವಿರುದ್ಧ ರಾಷ್ಟ್ರಪತಿಗೆ ದೂರು ಕೊಡ್ತಾರಂತೆ ಸಿದ್ದು..!

By Divya PerlaFirst Published Nov 8, 2019, 3:18 PM IST
Highlights

ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬಿ. ಎಸ್‌. ಯಡಿಯೂರಪ್ಪ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಎಸ್‌ವೈ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳ ಭೇಟಿ ಸಂಬಂಧ ಅವರು ಪ್ರತಿಕ್ರಿಯಿಸಿದ್ದಾರೆ.

ಮೈಸೂರು(ನ.08): ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬಿ. ಎಸ್‌. ಯಡಿಯೂರಪ್ಪ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಎಸ್‌ವೈ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳ ಭೇಟಿ ಸಂಬಂಧ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಬಿ. ಎಸ್‌. ಯಡಿಯೂರಪ್ಪ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳ ಭೇಟಿ ಮಾಡಲಿದ್ದೇನೆ. ರಾಷ್ಟ್ರಪತಿಗಳ ಸಮಯ ಕೇಳಿದ್ದೇವೆ. ಅವರು ಸಮಯ ಕೊಟ್ಟರೆ ಖಂಡಿತಾ ಭೇಟಿ ಮಾಡುತ್ತೇವೆ ಎಂದಿದ್ದಾರೆ.

ಅನರ್ಹರನ್ನು ಬಗ್ಗು ಬಡಿಯಲು ಸಿದ್ದರಾಮಯ್ಯ ಸೇನೆ ರೆಡಿ! ಯಾರ್ಯಾರಿದ್ದಾರೆ ನೋಡಿ

ಯಡಿಯೂರಪ್ಪ ಆ ಆಡಿಯೋದಲ್ಲಿ ಎಲ್ಲವನ್ನು ಹೇಳಿದ್ದಾರೆ. ಖುದ್ದು ಅಮಿತ್ ಷಾ ಇದರ ಉಸ್ತುವಾರಿ ವಹಿಸಿದ್ದರು. ಅವರ ಸೂಚನೆಯಂತೆ ನಾನು ಆಪರೇಷನ್ ಕಮಲ‌ ಮಾಡಿದೆ ಎಂದಿದ್ದಾರೆ. ಬಿಜೆಪಿ ಅನೈತಿಕವಾಗಿ ಅಧಿಕಾರಕ್ಕೆ‌ ಬಂದಿದ್ದಾರೆ. ಇಂತಹ ಕೆಲಸ ಮಾಡಿರುವ ಅಮಿತ್ ಶಾ ಮಂತ್ರಿಯಾಗಿರಬಾರದು. ಬಿಎಸ್‌ವೈ ಸಿಎಂ ಆಗಿರಬಾರದು. ಅವರಿಬ್ಬರನ್ನ ವಜಾಗೊಳಿಸಿ ಅಂತ ರಾಷ್ಟ್ರಪತಿಗಳಿಗೆ ದೂರು ಕೊಡುತ್ತೇವೆ ಎಂದಿದ್ದಾರೆ.

ಜೆಡಿಎಸ್‌ ಹೋರಾಟ ಮಾಡ್ತಾರಾ ಬಿಡ್ತಾರಾ ಅವ್ರನ್ನೇ ಕೇಳಿ:

ಅನರ್ಹರ ವಿಚಾರವಾಗಿ ಜೆಡಿಎಸ್‌ ಹೋರಾಟ ಬಗ್ಗೆ ಪ್ರತಿಕ್ರಿಯಿಸಿ, ಅವರು ಹೋರಾಟ ಮಾಡ್ತಾರಾ ಬಿಡ್ತಾರಾ ಅಂತ ಅವರನ್ನೆ ಕೇಳಿ. ಅವರು ಬಿಜೆಪಿ ಬಗ್ಗೆ ಸಾಫ್ಟ್ ಆಗಿದ್ದಾರಾ ಹಾರ್ಡ್ ಆಗಿದ್ದಾರಾ ಅನ್ನೋದನ್ನು ಅವರನ್ನೆ ಕೇಳಿ. ಅನರ್ಹರ ವಿಚಾರದಲ್ಲಿ ನಮ್ಮ‌ಹೋರಾಟ ಮುಂದುವರೆಯುತ್ತದೆ. ಚುನಾವಣೆ ಮುಂದೂಡುವ ಅರ್ಜಿಗೆ ಆಕ್ಷೇಪ ಹಾಕಿ ಅಂತ ನಮ್ಮ ಲಾಯರ್‌ಗೆ ಹೇಳುತ್ತೇವೆ ಎಂದಿದ್ದಾರೆ.

ರಾಜಕೀಯದಲ್ಲಿ ಯಾರು ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ: ಸಿದ್ದು ಟಾಂಗ್ ಕೊಟ್ಟ ಸಚಿವ

click me!