ಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ, ಬಲೂನ್ ವ್ಯಾಪಾರಿ ಸಾವು, ಕೆಲ ಪ್ರವಾಸಿಗರ ಸ್ಥಿತಿ ಗಂಭೀರ

Published : Dec 25, 2025, 10:32 PM IST
Mysore Cyliner Blast case

ಸಾರಾಂಶ

ಮೈಸೂರು ಅರಮನೆ ಬಳಿ ಸಿಲಿಂಡರ್ ಸ್ಫೋಟ, ಬಲೂನ್ ವ್ಯಾಪಾರಿ ಸಾವು, ಕೆಲ ಪ್ರವಾಸಿಗರ ಸ್ಥಿತಿ ಗಂಭೀರ, ಬಲೂನ್ ಮಾರುತ್ತಿದ್ದ 40 ವರ್ಷದ ವ್ಯಕ್ತಿ ಸ್ಥಳದಲ್ಲ ಮೃತಪಟ್ಟಿದ್ದಾರೆ, ಬೆಂಗಳೂರಿನ ಲಕ್ಷ್ಮಿ, ರಾಣೆಬನ್ನೂರು ಮೂಲದ ಕೊಟ್ರೇಶ್ ಸೇರಿ ಹಲವು ಪ್ರವಾಸಿಗರ ಸ್ಥಿತಿ ಗಂಭೀರವಾಗಿದೆ.

ಮೈಸೂರು (ಡಿ.25) ಮೈಸೂರು ಅರಮನೆ ಬಳಿ ನಡೆದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ಈ ರೀತಿಯ ಬಲೂನ್ ಮಾರಾಟ ಸಾಮಾನ್ಯವಾಗಿದೆ. ಇದೇ ಹೀಲಿಯಂ ಬಲೂನ್ ಸಿಲಿಂಡರ್ ಮೈಸೂರಿನಲ್ಲಿ ಸ್ಫೋಟಗೊಂಡು ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಲೂನ್ ಮಾರುವ 40 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ರಜಾ ದಿನವಾಗಿದ್ದ ಕಾರಣ ಪ್ರವಾಸಕ್ಕೆಂದು ಮೈಸೂರಿಗೆ ಆಗಮಿಸಿದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಬೆಂಗಳೂರು ನಿವಾಸಿ ಲಕ್ಷ್ಮಿ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದೆ.

ಕೆಆರ್ ಆಸ್ಪತ್ರೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ

ಗಾಯಾಳುಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆಯ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿ ಸುಂದರ್ ರಾಜ್ ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗಾಯಾಳುಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಲಕ್ಷ್ಮಿ ಸ್ಥಿತಿ ಗಂಭೀರ, ಕೊಟ್ರೇಶನ್ ಕಾಲಿಗೆ ಗಾಯ

ಬಲೂನ್‌ಗಳಿಗೆ ಹೀಲಿಯಂ ತುಂಬುವಾಗ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡವರ ಪೈಕಿ ಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದರೆ. ರಾಣೆಬೆನ್ನೂರಿನ 34 ವರ್ಷದ ಕೊಟ್ರೇಶ್ ಎರಡೂ ಕಾಲಿಗೆ ಗಂಭೀರ ಗಾಯವಾಗಿದೆ. ಕೊಟ್ರೇಶ್ ಕುಟುಂಬ ಪ್ರವಾಸಕ್ಕೆಂದು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ದುರಂತ ನಡೆದಿದೆ ಎಂದು ಕೊಟ್ರೇಶ್ ಪತ್ನಿ ಪ್ರಿಯಾಂಕ ಮಾಹಿತಿ ನೀಡಿದ್ದಾರೆ.ಬೆಂಗಳೂರು ಮೂಲದ ಲಕ್ಷ್ಮೀ , ಕೊಲ್ಕತ್ತಾದ ಶಾಹಿನ್ ಶಬ್ಬೀರ್ , ರಾಣಿಬೆನ್ನೂರು ಕೊಟ್ರೋಶಿ , ನಂಜನಗೂಡು ಮೂಲದ ಮಂಜುಳಗೆ ಗಾಯಗೊಂಡಿದ್ದಾರೆ.

ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಈ ಸಿಲಿಂಡರ್ ಸ್ಫೋಟಗೊಂಡಿದೆ. ಕ್ರಿಸ್ಮಸ್ ಹಬ್ಬದ ರಜಾ ದಿನದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಧಾವಿಸಿದ್ದಾರೆ. ಮೈಸೂರು ಅರಮನೆ ಸೇರಿದಂತೆ ವಿವಿದ ಪ್ರೇಕ್ಷಣೀಯ ಸ್ಥಳದಲ್ಲಿ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಮೈಸೂರು ಅರಮನೆಯಲ್ಲೂ ಪ್ರವಾಸಿಗರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ಇತ್ತ ಪ್ರವಾಸಿಗರು, ಮಕ್ಕಳ ಆಕರ್ಷಿಸುವ ಮೂಲಕ ಹಲವು ವ್ಯಾಪಾರಿಗಳು ಭರ್ಜರಿ ವ್ಯಾಪರ ನಡೆಸುತ್ತಿದ್ದಾರೆ. ಹೀಗೆ ಹೀಲಿಯಂ ಬಲೂನ್ ವ್ಯಾಪಾರ ಮಾಡುತ್ತಿರುವವ ಸಂಖ್ಯೆ ಕೂಡ ಹೆಚ್ಚಿದೆ. ಈ ಪೈಕಿ ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಬಲೂನ್ ಮಾರಾಟ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯ ಸಿಲಿಂಡರ್ ಸ್ಫೋಟಗೊಂಡಿದೆ. ಬಲೂನ್‌ಗೆ ಹೀಲಿಯಂ ತುಂಬುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

 

PREV
Read more Articles on
click me!

Recommended Stories

ಮೈಸೂರು ಅರಮನೆ ದ್ವಾರದ ಬಳಿ ನೈಟ್ರೋಜನ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ನಾಲ್ವರಿಗೆ ಗಾಯ
ಮೈಸೂರು ಕೆನರಾ ಬ್ಯಾಂಕ್ ಚಿನ್ನ ಅಡವಿಟ್ಟ ಗ್ರಾಹಕರಿಗೆ ಪಂಗನಾಮ: ಅಕ್ಕಸಾಲಿಗನ ವಿರುದ್ಧ ಎಫ್‌ಐಆರ್ ದಾಖಲು!