ಮೈಸೂರಿನಲ್ಲಿ ಕೊರೋನಾದಿಂದಾಗಿ ಕಾಸು ಕಂಡರು ಭಯ..!

Suvarna News   | Asianet News
Published : Apr 22, 2020, 04:53 PM IST
ಮೈಸೂರಿನಲ್ಲಿ ಕೊರೋನಾದಿಂದಾಗಿ ಕಾಸು ಕಂಡರು ಭಯ..!

ಸಾರಾಂಶ

ಹಣದ ಮೂಲಕವೂ ಕೊರೋನಾ ಹರಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ರಸ್ತೆ ಮೇಲೆ ಹಣ ಬಿದ್ದರೂ ಎತ್ತಿಕೊಳ್ಳಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಬಂದೊದಗಿದೆ. ಆದರೆ ದೇವರಾಜ ಮೊಹಲ್ಲಾದಲ್ಲಿ ವ್ಯಕ್ತಿಯೊಬ್ಬ ಇದೀಗ ಕ್ವಾರಂಟೈನ್‌ಗೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ.

ಮೈಸೂರು(ಏ.22): ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎನ್ನುವ ಮಾತೊಂದಿದೆ. ಆದರೆ ಕೊರೋನಾದಿಂದಾಗಿ ಪ್ರಾಣದ ಮುಂದೆ ಹಣ ನಗಣ್ಯ ಎನ್ನುವುದು ಇದೀಗ ಸಾಬೀತಾಗಿದೆ. 

ಹಣದ ಮೂಲಕವೂ ಕೊರೋನಾ ವೈರಸ್ ಹರಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ರಸ್ತೆ ಮೇಲೆ ಹಣ ಬಿದ್ದರೂ ಎತ್ತಿಕೊಳ್ಳಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ಬಂದೊದಗಿದೆ. ಆದರೆ ದೇವರಾಜ ಮೊಹಲ್ಲಾದಲ್ಲಿ ವ್ಯಕ್ತಿಯೊಬ್ಬ ಇದೀಗ ಕ್ವಾರಂಟೈನ್‌ಗೆ ಒಳಗಾಗುವ ಭೀತಿ ಎದುರಿಸುತ್ತಿದ್ದಾರೆ.

ಕೆಲ‌ ಮಂತ್ರಿಗಳಿಗೆ ಕಂಟಕ‌: ಕರ್ನಾಟಕದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ...!

ಹೌದು, ರಸ್ತೆ ಮೇಲೆ ಬಿದ್ದಿದ್ದ ನಾಣ್ಯಗಳನ್ನು ಬಾಬಣ್ಣ ಎತ್ತಿಕೊಂಡಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ವಶಕ್ಕೆ ಪಡೆದು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 
 

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!