ಮೈಸೂರಿನಲ್ಲಿ ರೇಸರ್ ಗಳಿಗೆ ರೇಸ್; ಚಾಲನೆ ಕೊಟ್ಟಿದ್ದೇ ಡಿ ಬಾಸ್!

Published : Oct 13, 2019, 02:42 PM ISTUpdated : Oct 13, 2019, 02:46 PM IST
ಮೈಸೂರಿನಲ್ಲಿ ರೇಸರ್ ಗಳಿಗೆ ರೇಸ್; ಚಾಲನೆ ಕೊಟ್ಟಿದ್ದೇ ಡಿ ಬಾಸ್!

ಸಾರಾಂಶ

ಮೈಸೂರಿನಲ್ಲಿ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ | ದೇಶದ 100 ಬೆಸ್ಟ್ ಡ್ರೈವರ್ ಗಳು ಭಾಗಿ | ಒಟ್ಟು 9 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ 

ಮೈಸೂರಿನ ಲಲಿತ್‌ಮಹಲ್ ಹೆಲಿಪ್ಯಾಡ್‌ನಲ್ಲಿ ನಡೆಯುತ್ತಿರುವ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ನೀಡಿದ್ದಾರೆ. 

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಗ್ರಾವೆಲ್ ಫೆಸ್ಟ್ ಆಯೋಜಿಸಲಾಗಿದ್ದು,  ದೇಶದ 100 ಬೆಸ್ಟ್ ಡ್ರೈವರ್ ಗಳು ಭಾಗಿಯಾಗಲಿದ್ದಾರೆ. ಒಟ್ಟು 9 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 

 

ಹಿಂದೆಂದೂ ನೋಡಿರದ ಇಲ್ಲಿಯವರೆಗೆ ಕೇಳಿರದ ಡಿಫರೆಂಟ್ ದರ್ಶನ್

ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳಿಂದ ರ್ಯಾಲಿ ಡ್ರೈವರ್ ಗಳು ಆಗಮಿಸಿದ್ದಾರೆ. 

1100 ಸಿಸಿ ವರಗೆ , 1100 ಸಿಸಿಯಿಂದ 1400 ಸಿಸಿ ವರೆಗೆ, 1400 ಸಿಸಿಯಿಂದ 1650 ಸಿಸಿ ವರೆಗೆ, ಇಂಡಿಯನ್ ಓಪನ್ ಕ್ಲಾಸ್, ಅನ್ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್ ಯುವಿ ಕ್ಲಾಸ್ ಗಳಲ್ಲಿ ನಡೆಯುವ ಸ್ಪರ್ಧೆ ಇದಾಗಿದೆ. ಈ ಬಾರಿ ಮೈಸೂರಿನ 16 ಮಂದಿ ಪ್ರತಿಭೆಗಳು ಹಾಗೂ 10 ಮಂದಿ ಮಹಿಳಾ ಸ್ಪರ್ಧಿಗಳು ಭಾಗಿಯಾಗಿದ್ದಾರೆ. 
 

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!