ಹಣ ಉಳಿತಾಯದ Fun Funds ಎಂದರೇನು? Gen-Z ಪೀಳಿಗೆಯ ಈ ಲೆಕ್ಕಾಚಾರ ಟ್ರೆಂಡ್‌ನಲ್ಲಿ ಇರೋದು ಯಾಕೆ?

Published : Aug 27, 2026, 06:27 AM IST
fun fund

ಸಾರಾಂಶ

Gen-Z ಪೀಳಿಗೆಯಲ್ಲಿ ಫನ್ ಫಂಡ್ ಟ್ರೆಂಡ್ ಹೆಚ್ಚಾಗಿದೆ. ಬಟ್ಟೆ ಅಥವಾ ವಸ್ತುಗಳನ್ನು ಕೊಳ್ಳುವ ಬದಲು ಪ್ರವಾಸ, ಸಂಗೀತ ಕಚೇರಿ ಮತ್ತು ವರ್ಕ್‌ಶಾಪ್‌ಗಳಂತಹ ಹೊಸ ಅನುಭವಗಳಿಗಾಗಿ 'ಫನ್ ಫಂಡ್' ಹೆಸರಿನಲ್ಲಿ ಹಣ ಉಳಿಸುತ್ತಿದ್ದಾರೆ. ಏನಿದರ ವಿಶೇಷತೆ ಅನ್ನೋದು ಈ ಸ್ಟೋರಿಯಲ್ಲಿದೆ.

ಸ್ಮಾರ್ಟ್‌ಫೋನ್ ಕೊಳ್ಳುವುದು, ಬ್ರ್ಯಾಂಡೆಡ್ ಬಟ್ಟೆಗಳನ್ನು ಸಂಗ್ರಹಿಸುವುದು ಅಥವಾ ಮನೆ-ಗಾಡಿಗಾಗಿ ಹಣ ಉಳಿಸುವುದು.. ಇದು ಹಳೆಯ ತಲೆಮಾರಿನ ಬಜೆಟ್ ಪ್ಲಾನ್. ಇಂದಿನ Gen-Z (1997-2012ರ ನಡುವೆ ಹುಟ್ಟಿದವರು) ಪೀಳಿಗೆಯ ಆಲೋಚನೆಯೇ ಬೇರೆ! ಅವರು ಈಗ ಏನು ಕೊಳ್ಳಬಹುದು? ಎನ್ನುವುದಕ್ಕಿಂತ ನಾನು ಏನನ್ನು ಅನುಭವಿಸಬಹುದು? (What can I experience?) ಎನ್ನುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹೊಸ ಬದಲಾವಣೆಗೆ ಅವರು ನೀಡಿರುವ ಹೆಸರೇ ಫನ್ ಫಂಡ್ (Fun Funds).

ಏನಿದು 'ಫನ್ ಫಂಡ್'?

ಸರಳವಾಗಿ ಹೇಳುವುದಾದರೆ.. ಕೇವಲ ಮೋಜು-ಮಸ್ತಿ ಮತ್ತು ಹೊಸ ಅನುಭವಗಳಿಗಾಗಿ ಮೀಸಲಿಡುವ ಹಣವೇ 'ಫನ್ ಫಂಡ್'. ಇದು ಮನೆ ಬಾಡಿಗೆ, ದಿನಸಿ ಅಥವಾ ಹೂಡಿಕೆಗಾಗಿ ಇಟ್ಟ ಹಣವಲ್ಲ. ಬದಲಿಗೆ ದಿಢೀರ್ ಎಂದು ಪ್ಲಾನ್ ಮಾಡುವ ಸ್ಕೂಬಾ ಡೈವಿಂಗ್, ಅಬುಧಾಬಿಯಲ್ಲಿ ನಡೆಯುವ ಮ್ಯೂಸಿಕ್ ಕನ್ಸರ್ಟ್, ಪಾಟರಿ (ಮಣ್ಣಿನ ಪಾತ್ರೆ) ವರ್ಕ್‌ಶಾಪ್ ಅಥವಾ ವಾರಾಂತ್ಯದ ಟ್ರೆಕ್ಕಿಂಗ್‌ಗಳಿಗಾಗಿ ಈ ಹಣವನ್ನು ಬಳಸಲಾಗುತ್ತದೆ.

ವಸ್ತುಗಳಿಗಿಂತ 'ನೆನಪು'ಗಳೇ ಮುಖ್ಯ!

BookMyShow-EY-Parthenon ವರದಿಯ ಪ್ರಕಾರ.. ಶೇ. 78ರಷ್ಟು ಭಾರತೀಯ ಗ್ರಾಹಕರು ಈಗ ಭೌತಿಕ ವಸ್ತುಗಳನ್ನು ಕೊಳ್ಳುವುದಕ್ಕಿಂತ ಹೊಸ ಅನುಭವಗಳಿಗಾಗಿ ಹಣ ಖರ್ಚು ಮಾಡಲು ಇಷ್ಟಪಡುತ್ತಿದ್ದಾರೆ.

ಸ್ಪಾಂಟೇನಿಟಿ (Spontaneity): ಶೇಕಡಾ 44ರಷ್ಟು ಜನರು ಯಾವುದೇ ಪ್ಲಾನ್ ಇಲ್ಲದೆ ದಿಢೀರ್ ಎಂದು ಇಂತಹ ಅನುಭವಗಳಿಗಾಗಿ ಹಣ ವ್ಯಯಿಸುತ್ತಾರೆ. ಉದಾಹರಣೆಗೆ.. ವಾರಾಂತ್ಯದಲ್ಲಿ ವ್ಯಾನ್ ಗಾಗ್ ಕಲೆಯ ಪ್ರದರ್ಶನ ಇರುವುದು ತಿಳಿದರೆ ಅಥವಾ ಕೋಲ್ಡ್‌ಪ್ಲೇ (Coldplay) ಸಂಗೀತ ಕಚೇರಿಯ ಟಿಕೆಟ್ ಸಿಕ್ಕರೆ ಅವರು ಯೋಚಿಸದೆ ಹಣ ಖರ್ಚು ಮಾಡುತ್ತಾರೆ.

ಯುವಜನತೆ ಹೀಗೆ ಮಾಡುತ್ತಿರುವುದು ಏಕೆ?

  • ಕೋವಿಡ್ ನಂತರ ಜೀವನದ ಅನಿಶ್ಚಿತತೆ ಅರ್ಥವಾಗಿದೆ. ಪರ್ಫೆಕ್ಟ್ ಸಮಯಕ್ಕಾಗಿ ಕಾಯುವ ಬದಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು ಎಂಬ ಮನೋಭಾವ ಬೆಳೆದಿದೆ.
  • ಸೋಶಿಯಲ್ ಕನೆಕ್ಷನ್: ಶೇರ್ ಮಾಡಬಹುದಾದ, ಫೋಟೋ ತೆಗೆಯಬಹುದಾದ ಮತ್ತು ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳಿಗೆ ಇವರು ಹೆಚ್ಚು ಮೌಲ್ಯ ನೀಡುತ್ತಾರೆ.
  • ಹೊಸ ಹವ್ಯಾಸಗಳನ್ನು ಕಲಿಯುವುದು ಇವರಿಗೆ ಬಟ್ಟೆ ಕೊಳ್ಳುವುದಕ್ಕಿಂತ ಹೆಚ್ಚಿನ ತೃಪ್ತಿ ನೀಡುತ್ತದೆ.

ಬಜೆಟ್ ಪ್ಲೇಬುಕ್ ಹೇಗಿದೆ?

ಖರ್ಚು ಮಾಡುತ್ತಾರೆ ಎಂದಾಕ್ಷಣ ಇವರು ಹಣವನ್ನು ಪೋಲು ಮಾಡುತ್ತಾರೆ ಎಂದಲ್ಲ. ಇವರದ್ದೇ ಆದ ಕೆಲವು ಹಣಕಾಸು ನಿಯಮಗಳಿವೆ.

ಒಂದು ವೇಳೆ ದೊಡ್ಡ ಕನ್ಸರ್ಟ್‌ಗೆ ಹೋಗಬೇಕೆಂದರೆ ಅವರು ತಿಂಗಳ ಹೋಟೆಲ್ ಊಟ ಅಥವಾ ಶಾಪಿಂಗ್ ಅನ್ನು ಕಡಿತಗೊಳಿಸಿ ಆ ಹಣವನ್ನು ಇಲ್ಲಿಗೆ ವರ್ಗಾಯಿಸುತ್ತಾರೆ. ಹೂಡಿಕೆ ಮತ್ತು ಉಳಿತಾಯದ ಹಣವನ್ನು ಮುಟ್ಟದೆ ಉಳಿದ ಹಣದಲ್ಲಿ ಮಾತ್ರ 'ಅನುಭವ'ಗಳನ್ನು ಹುಡುಕುತ್ತಾರೆ.

ನನ್ನ ಬಳಿ ಇಲ್ಲದ ಹಣವನ್ನು ನಾನು ಖರ್ಚು ಮಾಡುವುದಿಲ್ಲ ಎಂಬುದು ಇವರ ಪ್ರಮುಖ ಸೂತ್ರ. ಒಟ್ಟಾರೆಯಾಗಿ..Gen-Z ಪೀಳಿಗೆಯು ಹಣವನ್ನು ಕೇವಲ ಆಸ್ತಿ ಮಾಡುವುದಕ್ಕೆ ಸೀಮಿತಗೊಳಿಸದೆ ಜೀವನವನ್ನು ಅರ್ಥಪೂರ್ಣವಾಗಿಸುವ ನೆನಪುಗಳನ್ನು ಕೊಳ್ಳಲು ಬಳಸುತ್ತಿದ್ದಾರೆ. ಈ 'ಎಕ್ಸ್‌ಪೀರಿಯನ್ಸ್-ಫಸ್ಟ್' ಎಕಾನಮಿ ಈಗ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.

PREV
Read more Articles on
click me!

Recommended Stories

ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..
Success Story: ಬದುಕು ಬದಲಿಸಿದ ಒಂದು ಮೆಸೇಜ್ ಒಂದು ಮೆಸೇಜ್ ಬದಲಿಸಿತು ಬದುಕು; 17ರ ಹುಡುಗ 22ಕ್ಕೆ ಗಳಿಸಿದ್ದು 1 ಕೋಟಿ ರೂ.!