ನಾಳೆಯೇ ಅಂತಿಮ ದಿನಾಂಕ; ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಇದೇ ಫೈನಲ್‌ ಅಲರ್ಟ್!

Published : Aug 22, 2026, 12:56 PM IST
LPG e KYC

ಸಾರಾಂಶ

ದೇಶದಾದ್ಯಂತ ಇಂಡಿಯನ್, ಎಚ್‌ಪಿ, ಮತ್ತು ಭಾರತ್ ಗ್ಯಾಸ್ ಬಳಕೆದಾರರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಮುಂದುವರಿಸಲು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಆ್ಯಪ್‌ಗಳ ಮೂಲಕ ಅಥವಾ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಪೂರ್ಣಗೊಳಿಸಬಹುದು, ತಪ್ಪಿದಲ್ಲಿ ಸಬ್ಸಿಡಿ ಸ್ಥಗಿತಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ದೇಶದಾದ್ಯಂತ ಕೋಟ್ಯಾಂತರ ಮಂದಿ ಗ್ಯಾಸ್ ಬಳಕೆದಾರರು ಇದು ಪ್ರಮುಖ ಅಲರ್ಟ್. ಇಂಡಿಯನ್, ಎಚ್‌ಪಿ, ಭಾರತ್ ಗ್ಯಾಸ್ ಬಳಕೆದಾರರು ತಮ್ಮ ಎಲ್‌ಪಿಜಿ ಕನೆಕ್ಷನ್‌ಗೆ ಸಂಬಂಧಿಸಿದ ಇ-ಕೆವೈಸಿ ಪೂರ್ಣಗೊಳಿಸಲು ಕಂಪನಿಗಳು ಪ್ರಮುಖ ಅಲರ್ಟ್ ನೀಡಿದೆ. ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಎಂಬ ಇ-ಕೆವೈಸಿ ಪ್ರಕ್ರಿಯೆಯನ್ನು ನಾಳೆಯ ವೇಳೆಗೆ ಪೂರ್ಣಗೊಳಿಸಲು, ಇಲ್ಲ ಎಂದರೆ ಗ್ಯಾಸ್ ಸಬ್ಸಿಡಿ ಮಿಸ್ ಮಾಡಿಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಗ್ಯಾಸ್ ಸಬ್ಸಿಡಿ ರಹಸ್ಯ: ತಪ್ಪಿಸಲು ಇದೊಂದೇ ದಾರಿ!

ಅಗತ್ಯ ನಿಯಮಗಳನ್ನು ಪೂರ್ಣಗೊಳಿಸಲಿಲ್ಲ ಎಂದರೆ, ಸಬ್ಸಿಡಿ ಪ್ರಯೋಜನ ಮಿಸ್ ಆಗುವ ಅವಕಾಶವಿದೆ. ಸರ್ಕಾರ ಕಡ್ಡಾಯ ಮಾಡಿರುವ ನಿಯಮವನ್ನು ಪಾಲಿಸಬೇಕು ಎಂದು, ಇದನ್ನು ಗ್ರಾಹಕರು ನಿರ್ಲಕ್ಷ್ಯ ಮಾಡುವಂತೆ ಇಲ್ಲ ಎಂದು ಕಂಪನಿಗಳು ಹೇಳಿವೆ. ಇದರಿಂದ ಸಾಮಾನ್ಯ ದರಕ್ಕೆ ಸಿಲಿಂಡರ್ ಸಿಗದೆ ನೀವು ಅಧಿಕ ಮೊತ್ತ ಪಾವತಿ ಮಾಡಬೇಕಾಗುತ್ತದೆ ಎಂದು ಗ್ಯಾಸ್ ಕಂಪನಿಗಳು ಸ್ಪಷ್ಟ ಮಾಡಿದೆ.

ಆಲ್‌ಲೈನ್ ಪೋರ್ಟಲ್‌ಗಳ ಸರ್ವಸ್ ಸಮಸ್ಯೆ ಎದುರಾದ ಕಾರಣ ಈ ಹಿಂದೆ ನಿಗದಿ ಮಾಡಿದ್ದ ಡೆಡ್‌ಲೈನ್‌ಅನ್ನು ವಿಸ್ತರಣೆ ಮಾಡಲಾಗಿತ್ತು. ಈ ಕ್ರಮವೂ ಸಿಲಿಂಡರ್‌ಗಳ ಪೂರೈಕೆಯಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಲು, ನಕಲಿ ಕನೆಕ್ಷನ್ ಸಮಸ್ಯೆಯನ್ನು ನಿವಾರಿಸಲು ನಡೆಸಲಾಗುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಅಷ್ಟೇ ಅಲ್ಲದೇ, ಸಾಮಾನ್ಯ ಗೃಹ ಬಳಕೆದಾರರು, ಇದುವರೆಗೂ ಇ-ಕೆವೈಸಿ ಮಾಡಿಸದವರು ಕೂಡಲೇ ಈ ಪ್ರಕ್ರಿಯೆನ್ನು ಪೂರ್ಣಗೊಳಿಸಬೇಕಿದೆ.

5 ನಿಮಿಷದಲ್ಲಿ ಇ-ಕೆವೈಸಿ ಪೂರ್ಣಗೊಳಿಸಿ

ಓಟಿಪಿ ಮೂಲಕ ಲಾಗ್ ಇನ್ ಆಗಿ, ಫೇಸ್ ಸ್ಕ್ಯಾನ್ ಮೂಲಕ ಕೆಲವೇ ನಿಮಿಷಗಳಲ್ಲಿ ಈ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಬಹಳ ಸರಳ ಪ್ರಕ್ರಿಯೆಯಾಗಿದೆ. ಗ್ರಾಹಕರು ತಮ್ಮ ಗ್ಯಾಸ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್, ಕನ್ಸೂಮರ್ ಐಡಿ ತೆಗೆದಿಟ್ಟುಕೊಳ್ಳಬೇಕಿದೆ. ಅಧಿಕೃತ ಆ್ಯಪ್ಗಳಾಗಿರುವ ಇಂಡಿಯನ್ ಅಯಿಲ್, ಎಚ್‌ಪಿ, ಹಲೋ ಬಿಪಿಸಿಎಲ್ ಗಳೊಂದಿಗೆ ಆಧಾರ್ ಫೇಸ್ ಆರ್ಡಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು, ಒಟಿಪಿ ಮೂಲಕ ಲಾಗ್ ಇನ್ ಆಗಿ, ಫೇಸ್ ಸ್ಕ್ಯಾನ್ ಮಾಡಿದರೆ ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗ್ರಾಹಕರು ತಮ್ಮ ಗ್ಯಾಸ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಲು ಆ್ಯಪ್ ಮೂಲಕ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಅವರು ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನಿಗದಿತ ಸಮಯದೊಳಗೆ ಇದನ್ನು ಪೂರ್ಣಗೊಳಿಸಲು ವಿಫಲವಾದರೆ ಸಬ್ಸಿಡಿ ಸ್ಥಗಿತಗೊಳ್ಳಬಹುದು ಮತ್ತು ಭವಿಷ್ಯದಲ್ಲಿ ಸಿಲಿಂಡರ್‌ಗಳನ್ನು ಬುಕ್ ಮಾಡುವಲ್ಲಿ ತೊಂದರೆಗಳು ಉಂಟಾಗಬಹುದು. ಆದ್ದರಿಂದ, ಅಧಿಕಾರಿಗಳು ಗ್ರಾಹಕರಿಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.

ಒಂದೊಮ್ಮೆ ಆ್ಯಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಸಮಸ್ಯೆಗಳು ಎದುರಾದರೆ ಹೆಲ್ಪ್‌ಲೈನ್ ನಂಬರ್‌ಗಳಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಈ ಪ್ರಕ್ರಿಯೆ ಪೂರ್ಣಗೊಂಡರೆ ಸಾಮಾನ್ಯ ದರಕ್ಕೆ ಎಲ್‌ಪಿಜಿ ಸಿಲಿಂಡರ್ ಸಿಗಲಿದೆ, ಆದ್ದರಿಂದ ಮಿಸ್ ಮಾಡದೆ ಇ-ಕೆವೈಸಿ ಪೂರ್ಣಗೊಳಿಸಿ.

PREV
Read more Articles on
click me!

Recommended Stories

Success Story: ಜೇಬಿನಲ್ಲಿ ₹20 ಇಟ್ಟು ಅಮೆರಿಕಾಗೆ ಹೋದ ಹುಡುಗ! ಇಂದು ಸಾವಿರಾರು ಕೋಟಿ ಒಡೆಯ! ತನ್ನ ಬೇರು ಮರೆಯದೆ ಭಾರತದ ಯುವಕರಿಗಾಗಿ ಮತ್ತೆ ಬಂದಿದ್ದಾರೆ!
₹13ರ ಕಸದಿಂದ ತಿಂಗಳಿಗೆ ₹40 ಲಕ್ಷ ಸಂಪಾದನೆ! ಈ ಯುವಕನ ಸೂಪರ್ ಬಿಸಿನೆಸ್ ಐಡಿಯಾ ನೋಡಿ...