#MeToo : ರಿಯಾಲಿಟಿ ಶೋ ಜಡ್ಜ್ ಸ್ಥಾನ ತೊರೆದ ಹಾಡುಗಾರ

By Web DeskFirst Published Oct 22, 2018, 8:37 AM IST
Highlights

ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನವನ್ನೇ ಇದೀಗ ಮೀ ಟೂ ಸೃಷ್ಟಿಸಿದೆ. ಇದೇ ವೇಳೆ ಸಂಗೀತ ಕಾರ್ಯಕ್ರಮ ಒಂದರಲ್ಲಿ ಜಡ್ಕ್ ಆಗಿದ್ದ ವ್ಯಕ್ತಿ ಮೀ ಟೂ ಆರೋಪ ಹಿನ್ನೆಲೆ ತಮ್ಮ ಸ್ಥಾನ ತೊರೆದಿದ್ದಾರೆ. 

ಮುಂಬೈ: ಮೀ ಟೂ ಆಂದೋಲನದಲ್ಲಿ ಲೈಂಗಿಕ ಆರೋಪಕ್ಕೆ ಗುರಿಯಾಗಿರುವ ಸಂಗೀತ ಸಂಯೋಜಕ ಅನು ಮಲಿಕ್ ಅವರು ಇಂಡಿಯನ್ ಐಡಲ್ ಎಂಬ ಸಂಗೀತ ರಿಯಾಲಿಟಿ ಶೋನ ಜಡ್ಜ್ ಸ್ಥಾನದಿಂದ ಕೆಳಗಿಳಿದಿದ್ದಾರೆ. 

ಈ ಬಗ್ಗೆ ಭಾನುವಾರ ಪ್ರಕಟಣೆ ಹೊರಡಿಸಿರುವ ಸೋನಿ ವಾಹಿನಿ, ‘ಇಂಡಿಯಾ ಐಡಲ್ ರಿಯಾಲಿಟಿ ಶೋನ ಜಡ್ಜ್ ಸ್ಥಾನಕ್ಕೆ ಅನು ಮಲಿಕ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ವಿಶಾಲ್ ದಡ್ಲಾನಿ ಹಾಗೂ ನೇಹಾ ಕಕ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಐಡಲ್ ಸೀಸನ್ -10 ನೇ ಆವೃತ್ತಿ ನಿಗದಿಯಂತೆ ನಡೆಯಲಿದೆ,’ ಎಂದು ಸ್ಪಷ್ಟಪಡಿಸಿದೆ. 

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಲಿಕ್, ‘2004 ರಿಂದಲೂ ಐಡಲ್ ಸೀಸನ್‌ನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದೆ. ಆದರೆ, ನನ್ನ ಕೆಲಸಗಳ ಮೇಲೆ ನಿಗಾ ವಹಿಸಲು ಅಸಾಧ್ಯವಾಗುತ್ತಿರುವುದರಿಂದ, ರಿಯಾಲಿಟಿ ಶೋನಿಂದ ಹೊರರುತ್ತಿರುವೆ’ ಎಂದು ತಿಳಿಸಿದ್ದಾರೆ.

click me!