ಮಹದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 4 ಟಿಎಂಸಿ ಕುಡಿಯುವ ನೀರು

By Web DeskFirst Published Aug 14, 2018, 3:41 PM IST
Highlights

ನ್ಯಾಯಾಧಿಕರಣ ಮಹದಾಯಿ ತೀರ್ಪು ಪ್ರಕಟಿಸಿದ್ದು ರಾಜ್ಯ ಕೇಳಿದ್ದ 36.5 ಟಿಎಂಸಿ ನೀರಿನಲ್ಲಿ ಕೇವಲ 13.5 ಟಿಎಂಸಿ ಮಾತ್ರ ಹಂಚಲಾಗಿದೆ. ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್'ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. 

ನವದೆಹಲಿ[ಆ.14]: ನ್ಯಾ. ಜೆ.ಎಂ ಪಾಂಚಾಳ್ ನೇತೃತ್ವದ ತ್ರಿಸದಸ್ಯ ಪೀಠ ಮಹದಾಯಿ ತೀರ್ಪನ್ನು ಪ್ರಕಟಿಸಿದ್ದು ರಾಜ್ಯಕ್ಕೆ  4 ಟಿಎಂಸಿ ಕುಡಿಯುವ ನೀರನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಮಹದಾಯಿ ಕಣಿವೆಗೆ 1.5 ಟಿಎಂಸಿ ಒಳಗೊಂಡು ರಾಜ್ಯಕ್ಕೆ ಕುಡಿಯಲು 5.5 ಟಿಎಂಸಿ ನೀರು ಲಭ್ಯವಾಗಿದೆ. ಮಲಪ್ರಭೆ ಜಲಾಶಯಕ್ಕೆ 4 ಟಿಎಂಸಿ ಹರಿಸಲು ಒಪ್ಪಿಗೆ ನೀಡಲಾಗಿದೆ. ತ್ರಿಸದಸ್ಯ ಪೀಠ ಮಹದಾಯಿ ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು ಬಳಸಲು ಒಪ್ಪಿಗೆ ನೀಡಿದೆ. 

ಕಳೆದ 5 ವರ್ಷದಲ್ಲಿ 105 ದಿನಗಳ ಕಾಲ ವಿಚಾರಣೆ ನಡೆಸಿತ್ತು.  ಕರ್ನಾಟಕದ ಪರ ಅಶೋಕ್ ದೇಸಾಯಿ, ಮೋಹನ್ ಕಾತರಕಿ,ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದು,ರಾಜ್ಯಕ್ಕೆ ಕುಡಿಯಲು 7 ಟಿಎಂಸಿ ನೀರನ್ನು ನ್ಯಾಯಾಧಿಕರಣ ಮುಂದೆ ಕೇಳಿದ್ದರು. ರಾಜ್ಯದ ಮನವಿಯಲ್ಲಿ 7 ಟಿಎಂಸಿ  ಹೆಚ್ಚುವರಿ ನೀರಿನ ಬೇಡಿಕೆಯಿತ್ತು. ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ನೀರು ಹಂಚಿಕೆಯಾಗಿದೆ.

ತೀರ್ಪಿನ ಪ್ರಮುಖ ಅಂಶಗಳು

  • 4 TMC ನೀರು ಹರಿಸಲು ಸಮ್ಮತಿ..
  • ಕರ್ನಾಟಕದ ಪಾಲಿಗೆ ಮಹದಾಯಿ ನದಿಯಿಂದ 13.5 TMC ನೀರು
  • ಮಹದಾಯಿಯಿಂದ ಮಲಪ್ರಭೆಗೆ 4 TMC ನೀರು ಹರಿಸಲು ಒಪ್ಪಿಗೆ
  • ಕುಡಿಯುವ ನೀರಿನ ಬಳಕೆಗಾಗಿ 4 ಟಿಎಂಸಿ ಎಂದ ನ್ಯಾಯಾಧಿಕರಣ
  • ಮಹದಾಯಿ ನದಿಯಿಂದ ಕರ್ನಾಟಕಕ್ಕೆ 12 ಟಿಎಂಸಿ ನೀರು ಹಂಚಿಕೆ
  • ಬಂಡೂರ ಯೋಜನೆಗೆ ಒಟ್ಟು 2.18 ಟಿಎಂಸಿ ನೀರು ಹಂಚಿಕೆ
  • ಕಳಸಾ ಯೋಜನೆಗೆ ಒಟ್ಟು 1.72 ಟಿಎಂಸಿ ನೀರು ಹಂಚಿದ ಟ್ರಿಬ್ಯುನಲ್
  • ಜಲ ವಿದ್ಯುತ್ ಯೋಜನೆಗೆ ಒಟ್ಟು 8.02 ಟಿಎಂಸಿ ನೀರು-
  • ಕಳಸಾ ಯೋಜನೆಗೆ ಒಟ್ಟು 1.72 ಟಿಎಂಸಿ ನೀರು ಹಂಚಿದ ಟ್ರಿಬ್ಯುನಲ್
  • ಜಲ ವಿದ್ಯುತ್ ಯೋಜನೆಗೆ ಒಟ್ಟು 8.02 ಟಿಎಂಸಿ ನೀರು-
  • ಮಹದಾಯಿ ನದಿ ಕಣಿವೆಯಲ್ಲಿ ಬಳಸಲು 1.5 TMC ನೀರು ಹಂಚಿಕೆ

ಕ್ಲಿಕ್ಕಿಸಿ:  ನ್ಯಾಯಾಧಿಕರಣ ಆದೇಶದ ಪೂರ್ಣ ಪ್ರತಿ

 

click me!