Viral: ಅದೃಷ್ಟಕ್ಕೆ ಕಣ್ಣಿಲ್ಲ, ಸಮಯಕ್ಕೆ ಮಿತಿಯಿಲ್ಲ; ಸತತ ಸೋಲುಗಳ ನಂತರ ಹೊಡೆಯಿತು 13 ಸಾವಿರ ಕೋಟಿ ರೂ.,ಗಳ ಜಾಕ್‌ಪಾಟ್!

Published : Aug 15, 2026, 05:50 PM IST
Money

ಸಾರಾಂಶ

ಅಮೆರಿಕದ ಇಲಿನಾಯ್ಸ್ ನಿವಾಸಿಯೊಬ್ಬರು ಸತತ 44 ಸೋಲುಗಳ ನಂತರ 13,357 ಕೋಟಿ ರೂಪಾಯಿಗಳ ಬೃಹತ್ ಲಾಟರಿ ಜಾಕ್‌ಪಾಟ್ ಗೆದ್ದಿದ್ದಾರೆ. 45ನೇ ಪ್ರಯತ್ನದಲ್ಲಿ ಈ ಅದೃಷ್ಟ ಒಲಿದಿದ್ದು, ವಿಜೇತರಿಗೆ ಹಣ ಪಡೆಯಲು ಎರಡು ಆಯ್ಕೆಗಳನ್ನು ನೀಡಲಾಗಿದೆ.

ಅದೃಷ್ಟ ಯಾವಾಗ, ಯಾರಿಗೆ, ಯಾವ ರೂಪದಲ್ಲಿ ಒಲಿಯುತ್ತದೆ ಎಂದು ಊಹಿಸುವುದು ಯಾರಿಗೂ ಸಾಧ್ಯವಿಲ್ಲ. ಈ ಮಾತು ಅಮೆರಿಕದ ಇಲಿನಾಯ್ಸ್ ನಿವಾಸಿಯೊಬ್ಬರ ಜೀವನದಲ್ಲಿ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಅದೃಷ್ಟವನ್ನು ಪರೀಕ್ಷಿಸುತ್ತಿದ್ದರೂ ನಿರಾಸೆಯಾಗುತ್ತಿದ್ದ ಆ ವ್ಯಕ್ತಿಗೆ, ಬುಧವಾರದ ಆ ಒಂದು ರಾತ್ರಿ ಇಡೀ ಜೀವನವನ್ನೇ ಬದಲಾಯಿಸಿಬಿಟ್ಟಿತು!

ಪವಾಡ ಸಂಭವಿಸಿದ್ದೇಗೆ?

ಅಮೆರಿಕದ ಪ್ರಸಿದ್ಧ ಲಾಟರಿಯೊಂಂದರಲ್ಲಿ ಸತತ ೪೪ ಡ್ರಾಗಳವರೆಗೆ ಒಬ್ಬರಿಗೂ ಜಾಕ್‌ಪಾಟ್ ಒಲಿದಿರಲಿಲ್ಲ. ಎಷ್ಟು ಜನ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದರೋ, ಎಲ್ಲರಿಗೂ ನಿರಾಸೆಯೇ ಎದುರಾಗಿತ್ತು. ಆದರೆ, ಆಗಸ್ಟ್ ೧೨ ರ ಬುಧವಾರ ರಾತ್ರಿ ನಡೆದ ೪೫ನೇ ಡ್ರಾನಲ್ಲಿ ಆ ಪವಾಡ ಸಂಭವಿಸಿಯೇ ಬಿಟ್ಟಿತು. ಇಲಿನಾಯ್ಸ್‌ನಲ್ಲಿ ಮಾರಾಟವಾದ ಕೇವಲ ಒಂದೇ ಒಂದು ಲಾಟರಿ ಟಿಕೆಟ್, ಪವರ್‌ಬಾಲ್‌ನ ಎಲ್ಲಾ ಆರೂ ವಿಜೇತ ಸಂಖ್ಯೆಗಳಿಗೆ ಸರಿಯಾಗಿ ಹೊಂದಿಕೆಯಾಯಿತು.

ಅಷ್ಟಕ್ಕೂ ಆಗಿದ್ದೇನು?

ಈ ಒಂದು ಸಣ್ಣ ಕಾಗದದ ತುಂಡು ಆ ಅಪರಿಚಿತ ವಿಜೇತನಿಗೆ ತಂದುಕೊಟ್ಟ ಮೊತ್ತವೆಷ್ಟು ಗೊತ್ತೇ? ಭರ್ಜರಿ ೧.೪೦ ಬಿಲಿಯನ್ ಡಾಲರ್! ಅಂದರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು ಬರೋಬ್ಬರಿ ೧೩,೩೫೭ ಕೋಟಿ ರೂಪಾಯಿಗಳು! ಈ ಬೃಹತ್ ಮೊತ್ತವನ್ನು ಗೆಲ್ಲುವ ಮೂಲಕ ಆ ಅಜ್ಞಾತ ಲಾಟರಿ ಆಟಗಾರ ರಾತ್ರೋರಾತ್ರಿ ಜಗತ್ತಿನ ಅತಿ ದೊಡ್ಡ ಲಾಟರಿ ವಿಜೇತರ ಸಾಲಿಗೆ ಸೇರ್ಪಡೆಯಾಗಿದ್ದಾನೆ.

ವರದಿಗಳು ಹೇಳುವುದೇನು?

ಕೆಲ ವರದಿಗಳ ಪ್ರಕಾರ, ಬುಧವಾರ ರಾತ್ರಿ ನಡೆದ ಪವರ್‌ಬಾಲ್ ಡ್ರಾನಲ್ಲಿ ಗೆಲುವಿನ ಬಾಗಿಲು ತೆರೆದ ಆ ಆರು ಮಾಂತ್ರಿಕ ಸಂಖ್ಯೆಗಳು; ೪, ೨೬, ೬೬, ೬೭, ೬೯ ಮತ್ತು ಕೆಂಪು ಪವರ್‌ಬಾಲ್ ಸಂಖ್ಯೆ ೯. ಇಲಿನಾಯ್ಸ್‌ನ ಸ್ಥಳೀಯ ಮಳಿಗೆಯೊಂದರಲ್ಲಿ ಖರೀದಿಸಲಾಗಿದ್ದ ಟಿಕೆಟ್‌ನಲ್ಲಿ ಈ ಎಲ್ಲಾ ಸಂಖ್ಯೆಗಳು ಶೇಕಡಾ ೧೦೦ ರಷ್ಟು ನಿಖರವಾಗಿ ಹೊಂದಿಕೆಯಾಗಿದ್ದವು. ಈಗ ಇಡೀ ವಿಶ್ವವೇ ಆಲ್ಮೋಸ್ಟ್ ಶತಕೋಟಿಪತಿಯಾದ ಆ ವ್ಯಕ್ತಿ ಯಾರೆಂದು ಹುಡುಕುತ್ತಿದೆ. ಆದರೆ, ಈ ಬೃಹತ್ ಹಣವನ್ನು ತನ್ನ ಕೈಗೆ ಪಡೆದುಕೊಳ್ಳಲು ವಿಜೇತನಿಗೆ ಲಾಟರಿ ಸಂಸ್ಥೆಯು ಎರಡು ಮುಖ್ಯ ಆಯ್ಕೆಗಳನ್ನು ನೀಡಿದೆ!

ವಿಜೇತನ ಮುಂದಿವೆ ಎರಡು ಆಯ್ಕೆ!

ಮೊದಲನೇ ಆಯ್ಕೆ (ವಾರ್ಷಿಕ ಕಂತುಗಳು); ಸಂಪೂರ್ಣ 13,000 ಕೋಟಿ ರೂಪಾಯಿಗಳ ಮೊತ್ತವನ್ನು ಮುಂದಿನ ೨೯ ವರ್ಷಗಳ ಕಾಲ ಪ್ರತಿವರ್ಷ ನಿಯಮಿತ ವಾರ್ಷಿಕ ಕಂತುಗಳ ರೂಪದಲ್ಲಿ ಪಡೆಯುವುದು.

ಎರಡನೇ ಆಯ್ಕೆ (ಒಂದೇ ಬಾರಿಯ ನಗದು); ತೆರಿಗೆ ಮತ್ತು ನಿಯಮಾವಳಿಗಳ ಕಡಿತದ ನಂತರ ಲಭ್ಯವಾಗುವ ಒಟ್ಟು ನಗದು ಮೊತ್ತವನ್ನು ಒಂದೇ ಕಂತಿನಲ್ಲಿ ತಕ್ಷಣವೇ ತನ್ನ ಖಾತೆಗೆ ಜಮಾ ಮಾಡಿಸಿಕೊಳ್ಳುವುದು. ಸಾಮಾನ್ಯವಾಗಿ ಬಹುತೇಕ ಲಾಟರಿ ವಿಜೇತರು ಒಂದೇ ಬಾರಿಯ ನಗದು ಪಾವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲಿನಾಯ್ಸ್‌ನ ಈ ಹೊಸ ಕುಬೇರ ಯಾವ ಹಾದಿ ತುಳಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

44 ಬಾರಿ ವಿಫಲ!

ಸತತ 44 ಬಾರಿ ವಿಫಲವಾದರೂ ಛಲ ಬಿಡದೆ ಪ್ರಯತ್ನಿಸಿದ ಆ ವ್ಯಕ್ತಿಯ ಅದೃಷ್ಟ, ಕೊನೆಗೂ ೪೫ನೇ ಬಾರಿಗೆ ಬಾಗಿಲು ತೆರೆದಿದೆ. ಸೋಲುಗಳು ಸರಣಿಯಾಗಿ ಬಂದರೂ, ಒಂದೇ ಒಂದು ಯಶಸ್ಸು ಇಡೀ ಬದುಕಿನ ಚಟುವಟಿಕೆಯನ್ನೇ ಬದಲಾಯಿಸಬಲ್ಲದು ಎಂಬುದಕ್ಕೆ ಈ ೧೩, ಸಾವಿರ ಕೋಟಿಯ ಜಾಕ್‌ಪಾಟ್ ಕಥೆಯೇ ಜೀವಂತ ನಿದರ್ಶನ!

PREV
Read more Articles on
click me!

Recommended Stories

ಕ್ರಿಕೆಟ್‌ನಂತೆ ಬಿಸಿನೆಸ್‌ನಲ್ಲೂ ಸಿಕ್ಸರ್ ಹೊಡೆದ 'ಮಾಸ್ಟರ್ ಬ್ಲಾಸ್ಟರ್': ಸಚಿನ್ ತೆಂಡೂಲ್ಕರ್ ₹5 ಕೋಟಿ ಹೂಡಿಕೆ ಈಗ ಮಲ್ಟಿಬ್ಯಾಗರ್!
Viral News: ಭಾರತದಲ್ಲಿ ದುಡಿದು ವಿದೇಶಕ್ಕೆ ಹಾರಿದ ವ್ಯಕ್ತಿ; ಮುಂದಿನ 3 ವರ್ಷಗಳಲ್ಲಿ ನಡೆದ ಪವಾಡ ಕೇಳಿದ್ರೆ ಶಾಕ್ ಆಗ್ತೀರಾ!