Business: ಇದು ಯಾವ ಬಿಸಿನೆಸ್? ಆಫೀಸ್ ಇಲ್ಲದೆ, ಉದ್ಯೋಗಿಗಳಿಲ್ಲದೆ ಲಕ್ಷ-ಲಕ್ಷ ಸಂಪಾದಿಸುತ್ತಿರುವ ವ್ಯಕ್ತಿ!

Published : Aug 30, 2026, 09:07 PM IST
Money

ಸಾರಾಂಶ

ಸಾಮಾಜಿಕ ಮಾಧ್ಯಮದಲ್ಲಿ ಅಂಕಿತ್ ಪಾಂಡೆ ಹಂಚಿಕೊಂಡ ವ್ಯಕ್ತಿಯೊಬ್ಬರು ಯಾವುದೇ ಹೂಡಿಕೆ ಇಲ್ಲದೆ ತಿಂಗಳಿಗೆ 5 ಲಕ್ಷದವರೆಗೆ ಗಳಿಸುವ ಅವಕಾಶ ಮುಂದಿಟ್ಟಿದ್ದಾರೆ. ಆದರೆ ಇದರ ಪ್ರಾಯೋಗಿಕ ಸವಾಲುಗಳ ಬಗ್ಗೆ ಚರ್ಚೆಯಲ್ಲಿವೆ.

ಯಾವುದೇ ದೊಡ್ಡ ಹೂಡಿಕೆ ಇಲ್ಲದೆ, ಸ್ವಂತ ಆಸ್ತಿಯೂ ಇಲ್ಲದೆ, ಕೇವಲ ಅರೆಕಾಲಿಕ (Part-time) ಕೆಲಸ ಮಾಡುವ ಮೂಲಕ ತಿಂಗಳಿಗೆ ಸುಮಾರು 5 ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು ಎಂದರೆ ಯಾರು ತಾನೇ ಆಶ್ಚರ್ಯಪಡಲ್ಲ? ಪ್ರಸ್ತುತ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ (ಟ್ವಿಟರ್) ಅಂಕಿತ್ ಪಾಂಡೆ ಎಂಬುವವರು ಹಂಚಿಕೊಂಡಿರುವ 'ರಿಯಲ್ ಎಸ್ಟೇಟ್ ಫ್ರೀಲ್ಯಾನ್ಸಿಂಗ್' (Real Estate Freelancing) ಎಂಬ ಬಿಸಿನೆಸ್ ಮಾಡೆಲ್ ನೆಟಿಜನ್‌ಗಳ ಗಮನ ಸೆಳೆದಿದ್ದು, ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಏನಿದು 'ರಿಯಲ್ ಎಸ್ಟೇಟ್ ಫ್ರೀಲ್ಯಾನ್ಸಿಂಗ್'? ಪ್ರಾರಂಭಿಸುವುದು ಹೇಗೆ?

ಈ ವ್ಯವಹಾರವನ್ನು ಪ್ರಾರಂಭಿಸಲು ಯಾವುದೇ ರೀತಿಯ ಆಫೀಸ್ ಬಾಡಿಗೆ ಕಟ್ಟುವ ಅಗತ್ಯವಿಲ್ಲ, ಕೆಲಸಕ್ಕೆ ಉದ್ಯೋಗಿಗಳನ್ನು ಇಟ್ಟುಕೊಳ್ಳಬೇಕಿಲ್ಲ ಅಥವಾ ಹೂಡಿಕೆದಾರರಿಂದ ನಿಧಿ ಪಡೆಯುವ ಅಗತ್ಯವೂ ಇಲ್ಲ ಎಂದು ಅಂಕಿತ್ ಪಾಂಡೆ ಹೇಳಿದ್ದಾರೆ. ಇದನ್ನು ಮಾಡಲು ಅವರು ನೀಡಿರುವ ಸರಳ ಹಂತಗಳು ಇಲ್ಲಿವೆ!

1. ಬಿಲ್ಡರ್‌ಗಳ ಜೊತೆ ನೆಟ್‌ವರ್ಕಿಂಗ್; ಮೊದಲಿಗೆ ನಿಮ್ಮ ನಗರದಲ್ಲಿರುವ 10 ರಿಂದ 15 ಪ್ರಮುಖ ಬಿಲ್ಡರ್‌ಗಳನ್ನು ಭೇಟಿಯಾಗಿ, ಅವರ 'ಚಾನೆಲ್ ಪಾರ್ಟ್‌ನರ್ ಪ್ರೋಗ್ರಾಂ'ಗೆ (Channel Partner Program) ಸೇರ್ಪಡೆಯಾಗಬೇಕು.

2. ಪೂರ್ಣ ಮಾಹಿತಿ ಸಂಗ್ರಹ; ಬಿಲ್ಡರ್‌ಗಳ ಯೋಜನೆಗಳು (Projects), ಮನೆಗಳ ಬೆಲೆ, ಪಾವತಿ ವಿಧಾನಗಳು (Payment Plans) ಮತ್ತು ಮನೆ ಹಸ್ತಾಂತರ ಮಾಡುವ ದಿನಾಂಕಗಳ (Possession Dates) ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕು.

3. ಗ್ರಾಹಕರ ಹುಡುಕಾಟ; ಇನ್‌ಸ್ಟಾಗ್ರಾಮ್, ಎಕ್ಸ್, ಫೇಸ್‌ಬುಕ್, ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳು ಹಾಗೂ ಸ್ನೇಹಿತರ ವಲಯವನ್ನು ಬಳಸಿ ಮನೆ ಖರೀದಿಸಲು ಬಯಸುವ ಗ್ರಾಹಕರನ್ನು (Clients) ತಲುಪಬೇಕು.

ಅಂಕಿತ್ ಪಾಂಡೆ ಮಂಡಿಸಿದ ಗಳಿಕೆಯ ಲೆಕ್ಕಾಚಾರ!

ಯಾವುದೇ ಪ್ರಾಡಕ್ಟ್ ಅಥವಾ ಹೂಡಿಕೆ ಇಲ್ಲದೆ, ಕೇವಲ ಗ್ರಾಹಕರನ್ನು ಹುಡುಕಿ, ಅವರಲ್ಲಿ ವಿಶ್ವಾಸ ಬೆಳೆಸಿ ಡೀಲ್ ಮುಕ್ತಾಯಗೊಳಿಸುವುದು (Deal Closure) ಇದರ ಮೂಲ ಸೂತ್ರ. ಇದಕ್ಕಾಗಿ ಅವರು ನೀಡಿರುವ ಲೆಕ್ಕಾಚಾರ ಹೀಗಿದೆ:

ನೀವು 50 ಲಕ್ಷ ರೂ. ಮೌಲ್ಯದ ಒಂದು ಮನೆಯನ್ನು ಮಾರಾಟ ಮಾಡಿದರೆ, 3% ಕಮಿಷನ್ ಆಧಾರದ ಮೇಲೆ ನಿಮಗೆ 1.5 ಲಕ್ಷ ರೂ. ಸಿಗುತ್ತದೆ. ಒಂದು ವೇಳೆ ತಿಂಗಳಿಗೆ 3 ಮನೆಗಳನ್ನು ಮಾರಾಟ ಮಾಡಿದರೆ 4.5 ಲಕ್ಷ ರೂ., ಗಳಿಸಬಹುದು. ಅದೇ ರೀತಿ ತಿಂಗಳಿಗೆ 4 ಮನೆಗಳನ್ನು ಮಾರಾಟ ಮಾಡಿದರೆ ನಿಮ್ಮ ಸಂಪಾದನೆ 6 ಲಕ್ಷ ರೂ. ತಲುಪುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಶುರುವಾಯ್ತು ಪರ-ವಿರೋಧ ಚರ್ಚೆ!

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮಾಡೆಲ್ ಕಾಗದದ ಮೇಲೆ ಸುಲಭವಾಗಿ ಕಂಡರೂ, ಪ್ರಾಯೋಗಿಕವಾಗಿ (Practically) ಹಲವು ಸವಾಲುಗಳಿವೆ ಎಂದು ಅನೇಕರು ಬೆಟ್ಟು ಮಾಡಿ ತೋರಿಸಿದ್ದಾರೆ.

ಸಾಮಾನ್ಯ ಬ್ರೋಕರ್ ಕೆಲಸ: ಇದು ಹೊಸ ಬಿಸಿನೆಸ್ ಮಾಡೆಲ್ ಏನಲ್ಲ, ಕೇವಲ ಸಾಂಪ್ರದಾಯಿಕ 'ರಿಯಲ್ ಎಸ್ಟೇಟ್ ಬ್ರೋಕರ್' ಕೆಲಸಕ್ಕೆ ನೀಡಲಾಗಿರುವ ಕಾರ್ಪೊರೇಟ್ ಹೆಸರು ಅಷ್ಟೇ. ಇದನ್ನು ಅರೆಕಾಲಿಕವಾಗಿ ಮಾಡುವುದು ಅತ್ಯಂತ ಕಷ್ಟ," ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಆದಾಯದಲ್ಲಿ ಸ್ಥಿರತೆ ಇಲ್ಲ; ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಒಂದು ತಿಂಗಳು 2-3 ಮನೆಗಳು ಮಾರಾಟವಾದರೂ, ಮುಂದಿನ 4 ರಿಂದ 6 ತಿಂಗಳುಗಳ ಕಾಲ ಒಂದೇ ಒಂದು ಡೀಲ್ ಕ್ಲೋಸ್ ಆಗದಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಕುಟುಂಬದ ಏಕೈಕ ಆದಾಯದ ಮೂಲವನ್ನು ನೆಚ್ಚಿಕೊಂಡಿರುವವರಿಗೆ ಇದು ಸೂಕ್ತವಲ್ಲ.

ದೊಡ್ಡ ಕಂಪನಿಗಳ ಪೈಪೋಟಿ; ಮಾರುಕಟ್ಟೆಯಲ್ಲಿ ಸಿಬಆರ್‌ಇ (CBRE) ಯಂತಹ ಪ್ರಭಾವಿ ಹಾಗೂ ಬೃಹತ್ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಗಳಿರುವಾಗ, ಒಬ್ಬ ವ್ಯಕ್ತಿ ಅರೆಕಾಲಿಕವಾಗಿ ಬಂದು ಗ್ರಾಹಕರ ವಿಶ್ವಾಸ ಗಳಿಸುವುದು ಮತ್ತು ಅವರಿಂದ ಕೋಟಿ ಮೌಲ್ಯದ ಮನೆ ಖರೀದಿಸುವುದು ಅಷ್ಟು ಸುಲಭವಲ್ಲ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

PREV
Read more Articles on
click me!

Recommended Stories

ನಾರಾಯಣ ಮೂರ್ತಿ ಕುಟುಂಬದಿಂದ ಹೊಸ ಶೇರು ಖರೀದಿ.. 5 ವರ್ಷದಲ್ಲಿ ಭಾರೀ ಲಾಭ, ಯಾವ ಕಂಪನಿ ಗೊತ್ತಾ?
EPFO: 30 ವರ್ಷ ಸರ್ವಿಸ್ ಮುಗಿಸಿದರೆ ಎಷ್ಟು ಪೆನ್ಷನ್ ಸಿಗುತ್ತೆ? ನೀವೇ ಲೆಕ್ಕಹಾಕಲು ಇಲ್ಲಿದೆ ಸರಳ ವಿಧಾನ