90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ

Published : Sep 06, 2026, 06:52 PM IST
Microgreens Business

ಸಾರಾಂಶ

90 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಕೇವಲ 30 ಸಾವಿರ ರೂ. ಹೂಡಿಕೆಯೊಂದಿಗೆ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಚಂಡೀಗಢದ ಮೋಹಿತ್ ನಿಜ್ಹವನ್, ಇಂದು ಕೋಟಿಗಳ ಒಡೆಯನಾಗಿದ್ದಾರೆ. ವಾರ್ಷಿಕ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಇವರು, ಲಾಭದಾಯಕ ಕೃಷಿ ಮಾಡುವುದು ಹೇಗೆಂದು ಇತರ ರೈತರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡುತ್ತಾ ಸ್ಫೂರ್ತಿಯಾಗಿದ್ದಾರೆ.

ಚಂಡೀಗಢ: ಇಂದಿನ ಕಾಲದಲ್ಲಿ ವರ್ಷಕ್ಕೆ 90 ಲಕ್ಷ ರೂಪಾಯಿ ಸಂಬಳ ಬರುವ ಕಾರ್ಪೊರೇಟ್ ಕೆಲಸ ಎಂದರೆ ಅದು ಅನೇಕರ ಪಾಲಿಗೆ ಕನಸಿನ ಉದ್ಯೋಗ. ಆದರೆ ಚಂಡೀಗಢದ ಮೋಹಿತ್ ನಿಜ್ಹವನ್ ಅವರಿಗೆ ಈ ಸಂಬಳ ಕೇವಲ ಒಂದು ಆರಂಭವಾಗಿತ್ತು. ತಮ್ಮ ಸುಖದಾಯಕ ಕೆಲಸಕ್ಕೆ ರಾಜೀನಾಮೆ ನೀಡಿ, ಕೇವಲ 30 ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಅವರು ಆರಂಭಿಸಿದ 'ಮೈಕ್ರೋಗ್ರೀನ್ಸ್' ಕೃಷಿ ಇಂದು ಕೋಟಿ ರೂಪಾಯಿಗಳ ವ್ಯವಹಾರವಾಗಿ ಬೆಳೆದಿದೆ.

ಯಾರು ಈ ಮೋಹಿತ್ ನಿಜ್ಹವನ್?

ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವೀಧರರಾಗಿರುವ ಮೋಹಿತ್, 2020ರ ಡಿಸೆಂಬರ್‌ನಲ್ಲಿ ತಮ್ಮ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದರು. ಏನಾದರೂ ಹೊಸದನ್ನು ಮಾಡಬೇಕೆಂಬ ಹಂಬಲದಿಂದ ಅವರು ಆಯ್ದುಕೊಂಡಿದ್ದು 'ಇಂಡೋರ್ ಫಾರ್ಮಿಂಗ್' ಅಥವಾ ಒಳಾಂಗಣ ಕೃಷಿ. ಅಂತಿಮವಾಗಿ ಅವರು ಮೈಕ್ರೋಗ್ರೀನ್ಸ್ (ಪೋಷಕಾಂಶ ಭರಿತ ಸಣ್ಣ ಸಸ್ಯಗಳು) ಬೆಳೆಯುವತ್ತ ಗಮನ ಹರಿಸಿದರು.

100 ಚದರ ಅಡಿಯಿಂದ ಆರಂಭವಾದ ಪಯಣ

ಯಾವುದೇ ದೊಡ್ಡ ಹೂಡಿಕೆ ಮಾಡದೆ, ಮೋಹಿತ್ ತಮ್ಮ ಮನೆಯ ಎರಡನೇ ಮಹಡಿಯ 100 ಚದರ ಅಡಿ ಜಾಗದಲ್ಲಿ ಕೇವಲ 30,000 ರೂಪಾಯಿಗಳೊಂದಿಗೆ ಈ ಕೆಲಸ ಆರಂಭಿಸಿದರು. ಆರಂಭದಲ್ಲಿ ಕೇವಲ 21 ಜಾತಿಯ ಸಾವಯವ ತರಕಾರಿಗಳನ್ನು ಬೆಳೆಸಲು ಮುಂದಾದರು. ಯಾವುದೇ ಕೀಟನಾಶಕಗಳಿಲ್ಲದೆ, ನೈಸರ್ಗಿಕ ವಿಧಾನದಲ್ಲಿ ಬೆಳೆ ತೆಗೆಯುವುದು ಅವರ ಗುರಿಯಾಗಿತ್ತು. 'ಗ್ರೀನು ಮೈಕ್ರೋಗ್ರೀನ್ಸ್' (Greenu Microgreens) ಎಂಬ ಹೆಸರಿನಲ್ಲಿ ಈ ಉದ್ದಿಮೆ ಪ್ರಾರಂಭವಾಯಿತು.

ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯ

ಆರಂಭದಲ್ಲಿ ಕೇವಲ 3 ರಾಕ್‌ಗಳಿಂದ ಶುರುವಾದ ಕೃಷಿ, ಇಂದು 500 ಚದರ ಅಡಿಯ ಫೆಸಿಲಿಟಿಗೆ ವಿಸ್ತರಿಸಿದೆ. ಪ್ರಸ್ತುತ ಮೋಹಿತ್ ಬಳಿ 60 ರಾಕ್‌ಗಳಿದ್ದು, ಪ್ರತಿ ತಿಂಗಳು 12,000 ಟ್ರೇಗಳಲ್ಲಿ ಮೈಕ್ರೋಗ್ರೀನ್ಸ್ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರ ಈ ಉದ್ಯಮವು ತಿಂಗಳಿಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ವಾರ್ಷಿಕವಾಗಿ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.

ಕೇವಲ ತಾವೊಬ್ಬರೇ ಬೆಳೆಯುವುದಲ್ಲದೆ ಮೋಹಿತ್ ಇತರ ರೈತರಿಗೆ ಮತ್ತು ಉದ್ಯಮಿಗಳಿಗೆ ಮೈಕ್ರೋಗ್ರೀನ್ಸ್ ಕೃಷಿಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಕೃಷಿ ತಂತ್ರಜ್ಞಾನ ಮತ್ತು ವಾಣಿಜ್ಯ ಎರಡನ್ನೂ ಅವರು ಜನರಿಗೆ ಕಲಿಸಿಕೊಡುತ್ತಿದ್ದಾರೆ. ಅವರ ಈ ಅಸಾಧಾರಣ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

PREV
Read more Articles on
click me!

Recommended Stories

ಮನೆಯಲ್ಲಿ ಎಷ್ಟು ನಗದು ಹಣ ಇಟ್ಟುಕೊಳ್ಳುವುದು ಸೂಕ್ತ? ಅಗತ್ಯಕ್ಕಿಂತ ಹೆಚ್ಚು ಹಣ ಇಟ್ಟರೆ ನಿಮಗೇ ನಷ್ಟ!
UIDAI: ಆಧಾರ್ ಕೊಟ್ಟಿದ್ದೀರಾ? ಎಲ್ಲೆಲ್ಲಿ ಬಳಕೆಯಾಗಿದೆ ಗೊತ್ತಾ? ಈಗಲೇ ಚೆಕ್ ಮಾಡಿ!