ಚಂದ್ರನತ್ತ ನೌಕೆ ಕಳುಹಿಸಲು ಪೈಪೋಟಿ! ಭಾರತ-ಇಸ್ರೇಲ್ ಮಧ್ಯೆ ಮೂನ್ ವಾರ್! ಚಂದ್ರಯಾನ-2 ಯೋಜನೆ ಮುಂದಕ್ಕೆ! ತಾಂತ್ರಿಕ ತೊಂದರೆಯಿಂದ ಯೋಜನೆ ಮುಂದೂಡಿಕೆ
ಬೆಂಗಳೂರು(ಆ.4): ಭಾರತ, ಇಸ್ರೇಲ್ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳು ಚಂದ್ರನತ್ತ ದೃಷ್ಟಿ ನೆಟ್ಟು ಕೂತಿವೆ. ಈ ನಡುವೆ ಚಂದ್ರನ ಮೇಲೆ ನೌಕೆ ಇಳಿಸಲು ಭಾರತ ಮತ್ತು ಇಸ್ರೇಲ್ ನಡುವೆ ಭಾರೀ ಪೈಪೋಟಿ ಶುರುವಾಗಿದೆ.
ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದ ಈ ಯೋಜನೆ 2019 ಕ್ಕೆ ಮುಂದೂಡಲ್ಪಟ್ಟಿದೆ.
undefined
ಇದೇ ಸಮಯಕ್ಕಾಗಿ ಕಾಯುತ್ತಿದ್ದ ಇಸ್ರೇಲ್, ಭಾರತಕ್ಕೂ ಮೊದಲೇ ಚಂದ್ರನ ಮೇಲೆ ನೌಕೆ ಇಳಿಸಲು ಸಜ್ಜಾಗಿದೆ. ಇಸ್ರೇಲ್ ನ SpaceIL ಎಂಬ ಖಾಸಗಿ ಕಂಪನಿ ಚಂದ್ರನ ಮೇಲೆ ನೌಕೆ ಇಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಭಾರತಕ್ಕೂ ಎರಡು ಹೆಜ್ಜೆ ಮುಂದೆ ಹೋಗಿದೆ.
ಅಮೆರಿಕದ ಫಾಲ್ಕನ್-9 ಅತ್ಯಾಧುನಿಕ ರಾಕೆಟ್ ಸಹಾಯದಿಂದ 2019 ರ ಫೆಬ್ರುವರಿ 13 ರಂದು ಇಸ್ರೇಲ್ ಚಂದ್ರನತ್ತ ನೌಕೆ ಕಳುಹಿಸಲಿದೆ. ಈ ಮಧ್ಯೆ ಭಾರತ ತನ್ನ ಚಂದ್ರಯಾನ-2 ಯೋಜನೆಯನ್ನು ಇದಕ್ಕೂ ಮೊದಲೇ ಕೈಗೆತ್ತಿಕೊಳ್ಳಲಿದೆಯೇ ಅಥವಾ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.