ಅಭಿನಂದನ್ ಟೀ ಬಿಲ್‌ನಲ್ಲಿ ಬರೆದಿದ್ದೇನು?: ಒಂದು ಕಪ್ ಚಹಾಗೆ ಮಿಗ್-21!

By Web Desk  |  First Published Mar 30, 2019, 7:19 PM IST

ಅಭಿನಂಧನ್ ಕುಡಿದಿದ್ದ ಟೀ ಬಿಲ್ ತೋರಿಸಿದ ಪಾಕ್ ಸೇನಾ ಮೆಸ್| ಅಭಿನಂದನ್ ಟೀ ಬಿಲ್‌ನಲ್ಲಿ ಏನಿದೆ? ಒಂದು ಕಪ್ ಚಹಾಗೆ ಮಿಗ್-21 ಬಿಲ್ ಮಾಡಿದ ಪಾಕ್ ಸೇನೆ| ಪಾಕ್ ಸೇನೆಯ ವ್ಯಂಗ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ| ಅಭಿನಂದನ್ ಹೆಸರು, ಯುನಿಟ್, ರ್ಯಾಂಕ್ ಉಲ್ಲೇಖ| ಪಾಕ್ ಸೇನಾ ಮೆಸ್ ಬಿಲ್ ವೈರಲ್| 


ಇಸ್ಲಾಮಾಬಾದ್(ಮಾ.30): ಪಾಕಿಸ್ತಾನ ಸೇನೆಯಿಂದ ಬಂಧಿತರಾಗಿ ನಂತರ ಬಿಡುಗಡೆಗೊಂಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್, ಪಾಕ್ ಸೇನಾ ಮೆಸ್‌ನಲ್ಲಿ ಚಹಾ ಕುಡಿಯುತ್ತಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು.

ಆದರೆ ಅಭಿನಂಧನ್ ಅವರಿಗೆ ಕೊಟ್ಟಿದ್ದ ಚಹಾದ ಬಿಲ್ ಕೊಟ್ಟಿರುವ ಸೇನಾ ಮೆಸ್, ಬಿಲ್‌ನಲ್ಲಿ ಮಿಗ್-21 ಎಂದು ಬರೆದಿದೆ. ಈ ಕುರಿತಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಚಹಾದ ಬದಲಿಗೆ ಮಿಗ್-21 ಪಡೆದಿದ್ದಾಗಿ ಪಾಕ್ ಸೇನೆ ವ್ಯಂಗ್ಯವಾಡಿದೆ.

Tussi great ho
This is class.. pic.twitter.com/qnKRhcGpss

— Israr Kkr (@Iam7israr)

Tap to resize

Latest Videos

ಪಾಕ್ ಸೇನಾ ಮೆಸ್‌ನ ಬಿಲ್‌ನಲ್ಲಿ ಅಧಿಕಾರಿಗಳ ಊಟ, ತಿಂಡಿಯ ಲೆಕ್ಕ ಇಡಲಾಗುತ್ತದೆ. ಅದರಂತೆ ಬಿಲ್‌ನ ಎಡ ಮೇಲ್ಭಾಗದಲ್ಲಿ ಅಭಿನಂದನ್ ರ್ಯಾಂಕ್ ನಮೂದಿಸಲಾಗಿದ್ದು, ಬಲ ಮೇಲ್ಭಾಗದಲ್ಲಿ ಹೆಸರು ಮತ್ತು ಕೆಳಗಡೆ ಯುನಿಟ್ ಹೆಸರನ್ನು ನಮೂದಿಸಲಾಗಿದೆ.

ಕೆಳಗಡೆ Chai ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಕ್ವಾಂಟಿಟಿ 1 ಎಂದು ಬರೆದು ಪಕ್ಕದಲ್ಲಿರುವ ಬಿಲ್ ಕಾಲಂನಲ್ಲಿ ಮಿಗ್-21 ಎಂದು ನಮೂದಿಸಲಾಗಿದೆ.

click me!