ನವದೆಹಲಿ(ಏ.30):ಟ್ರಾನ್ಸ್‌ಷನ್ ಇಂಡಿಯಾದ ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎನಿಸಿರುವ ಟೆಕ್ನೊ ಮೊಬೈಲ್ ತನ್ನ ಅತ್ಯಾಕರ್ಷಕ ಫ್ಯಾಂಟಮ್ಎಕ್ಸ್ ಮೊಬೈಲ್ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್ ಸೆಗ್ಮೆಂಟ್-ಫಸ್ಟ್ ಕರ್ವ್ಡ್ ಎಎಂಒಎಲ್‌ಇಡಿ ಡಿಸ್ಪ್ಲೆ ಹೊಂದಿದೆ. ಅದೂ ನಂಬಲು ಅಸಾಧ್ಯವೆನಿಸುವ ಕೇವಲ 25,999/- ರೂ. ಬೆಲೆ ಶ್ರೇಣಿಯಲ್ಲಿ ದೊರೆಯುತ್ತದೆ.
ಫ್ಯಾಂಟಮ್ ಎಕ್ಸ್ ಮೊಬೈಲ್‌ನಲ್ಲಿ ಪ್ರಭಾವಶಾಲಿ 108 ಎಂಪಿ ಅಲ್ಟ್ರಾ ಎಚ್‌ಡಿ ಮೋಡ್ಅನ್ನು 50 ಎಂಪಿ + 13 ಎಂಪಿ + 8ಎಂಪಿ ಲೇಸರ್-ಫೋಕಸ್ಡ್ ರಿಯರ್ ಕ್ಯಾಮೆರಾದೊಂದಿಗೆ ಹೊಂದಿಸಲಾಗಿದೆ. ಇದು 1/1.3-ಇಂಚಿನ ಅಲ್ಟ್ರಾ ಲಾರ್ಜ್ ಸೆನ್ಸರ್ ಬೆಂಬಲಿತ ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲಿಯೂ ಸಹ ಹೆಚ್ಚು ನಿಖರವಾದ ಮತ್ತು ವಿಭಿನ್ನ ಛಾಯಾಗ್ರಹಣ ಅನುಭವ ನೀಡುತ್ತದೆ. ಡ್ಯುಯಲ್ 48ಎಂಪಿ + 8ಎಂಪಿ ಫ್ರಂಟ್ ಕ್ಯಾಮೆರಾವು ಸೆಲ್ಫಿ ಪ್ರಿಯರಿಗೆ ಸೂಕ್ಷ್ಮವಾದ ಮತ್ತು ಸ್ಪಷ್ಟವಾದ ಫೋಟೊ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳು ಉದ್ಯಮ- ಆಧಾರಿತ ಪ್ರಮುಖ ವೃತ್ತಿಪರ ಮೋಡ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿವೆ. ಇದು ಭಾವಚಿತ್ರಗಳನ್ನು ಕ್ಲಿಕ್ ಮಾಡುವಾಗ ಪಿಕ್ಸೆಲ್ ಚದುರುವಿಕೆಯನ್ನು ತಡೆದು, ಫೋಟೊಗಳು ಅತ್ಯಂತ ಸಹಜ ರೀತಿಯಲ್ಲಿ ಕಾಣುವಂತೆ ಮಾಡುತ್ತದೆ. ಶಕ್ತಿಶಾಲಿ 13ಜಿಬಿ ರಾಮ್ ಹೊಂದಿರುವ ಈ ಫೋನ್ ಅಲ್ಟ್ರಾ-ಫಾಸ್ಟ್ ಎಲ್ಪಿಡಿಡಿಆರ್4x 8ಜಿಬಿ ಹೊಂದಿದ್ದು, ಮೆಮೊರಿ ಫ್ಯೂಷನ್ ತಂತ್ರಜ್ಞಾನಬಳಸಿಕೊಂಡು5ಜಿಬಿ ವರೆಗೂ ವಿಸ್ತರಿಸಿ ಸೂಪರ್-ಫಾಸ್ಟ್ ವೇಗವನ್ನು ಪಡೆಯಬಹುದಾಗಿರುತ್ತದೆ. ಸಮಕಾಲೀನ ಉತ್ಪನ್ನಗಳ ಶ್ರೇಣಿಯಲ್ಲಿ ಫ್ಯಾಂಟಮ್ ಉನ್ನತ ಶ್ರೇಣಿಯನ್ನು ಪೂರೈಸುತ್ತದೆ ಮತ್ತು ಟೆಕ್ನೊ ಮೊಬೈಲ್‌ನ ಈ ಮೊದಲೇ ಚಾಲ್ತಿಯಲ್ಲಿರುವ ಸೆಗ್ಮೆಂಟ್ ಪೋರ್ಟ್ ಫೋಲಿಯೊವನ್ನು ಮತ್ತಷ್ಟು ಬಲಪಡಿಸುತ್ತದೆ.
undefined
5,000mAh ಬ್ಯಾಟರಿ, ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಭಾರತದಲ್ಲಿ ಲಾಂಚ್!
ಯುವ ಜನತೆಯನ್ನು ಗುರಿಯಾಗಿಸಿಕೊಂಡ ಬ್ರ್ಯಾಂಡ್ ಇದಾಗಿದ್ದು, ಟೆಕ್ನೊ ಅದ್ಭುತ ವಿನ್ಯಾಸಗಳು ಮತ್ತು ನವೀನ ನಿರ್ದಿಷ್ಟತೆಗಳೊಂದಿಗೆ ತಾಂತ್ರಿಕವಾಗಿ ಸುಧಾರಿತ ಸಾಧನಗಳನ್ನು ಒದಗಿಸುತ್ತದೆ. ನಮ್ಮ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು, ಫ್ಯಾಂಟಮ್ ಎಕ್ಸ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಸುಸ್ಥಿರ ತಂತ್ರಜ್ಞಾನ ಆವಿಷ್ಕಾರಗಳ ಫಲಿತಾಂಶವಾಗಿದೆ. ನಮ್ಮ ಮಂತ್ರವಾದ 'ಸ್ಟಾಪ್ ಅಟ್ ನಥಿಂಗ್' ಬೆಂಬಲದೊಂದಿಗೆ, ಕಂಪನಿಯು ಯಾವಾಗಲೂ ಗ್ರಾಹಕರಿಗೆ ಹೆಚ್ಚು ಸ್ಪರ್ಧಾತ್ಮಕ ಬೆಲೆಗಳಲ್ಲಿ ಪ್ರೀಮಿಯಂ ತಂತ್ರಜ್ಞಾನವನ್ನು ಒದಗಿಸಿದೆ. ಈ ಹಿಂದೆ ನಮ್ಮ ಗಮನವು ಮಧ್ಯಮ-ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಉದ್ದೇಶಿಸಿತ್ತು. ಅಲ್ಲಿ ನಾವು ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಈಗ ನಾವು ಈ ಹೊಸ ಉತ್ಪನ್ನದ ಪ್ರಾರಂಭದೊಂದಿಗೆ, ಕಂಪನಿಯ ವಿಶಿಷ್ಟ ಉತ್ಪನ್ನಗಳೊಂದಿಗೆ ಪ್ರೀಮಿಯಂ ವಿಭಾಗದಲ್ಲಿ ನಮ್ಮ ಸಮುದಾಯವನ್ನು ಮತ್ತಷ್ಟು ಬೆಳೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಟ್ರಾನ್ಸ್ ಷನ್ ಇಂಡಿಯಾದ ಸಿಇಒ ಅರಿಜೀತ್ ತಲಪಾತ್ರ ಹೇಳಿದರು.
ಫ್ಯಾಂಟಮ್ ಎಕ್ಸ್ಅನ್ನು ಅತ್ಯುನ್ನತ ಮಟ್ಟದ ತಂತ್ರಜ್ಞಾನ, ಅತ್ಯುತ್ತಮ ಬಳಕೆದಾರ ಅನುಭವ ಮತ್ತು ಗರಿಷ್ಠ ರಕ್ಷಣೆಯೊಂದಿಗೆ ಸೌಂದರ್ಯಾತ್ಮಕವಾಗಿ ಆಕರ್ಷಕ ವಿನ್ಯಾಸಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹೊಂದಲು ಉತ್ಸುಕರಾಗಿರುವ ವಿಭಿನ್ನ ಗ್ರಾಹಕರಿಗಾಗಿಯೇ ರಚಿಸಲಾಗಿದೆ. ಫ್ಯಾಂಟಮ್ ಎಕ್ಸ್ ಹೆಲಿಯೋ ಜಿ95 ಪ್ರೊಸೆಸರ್ ಬೆಂಬಲಿಸುತ್ತದೆ. ಇದು ಸ್ಮಾರ್ಟ್‌ಫೋನ್‌ಗಳಿಗೆ ಉತ್ಕೃಷ್ಟ ಎಆರ್‌ಎಂ ಎಸ್ಒಸಿ ಆಗಿದೆ. ಇದಲ್ಲದೇ ಫೋನ್ 4700 ಎಂಎಎಚ್ ಪವರ್‌ಫುಲ್ ಬ್ಯಾಟರಿ ಮತ್ತು 33 ವ್ಯಾಟ್ ಫ್ಲ್ಯಾಶ್ ಅಡಾಪ್ಟರ್‌ನೊಂದಿಗೆ ಅತೀ ವಿಶಿಷ್ಟವಾದ ಹೀಟ್ ಪೈಪ್ ಕೂಲಿಂಗ್ ವ್ಯವಸ್ಥೆಯೊಂದಿಗೆ ಸುಸ್ಥಿರವಾಗಿದೆ. ಇನ್ನೊಂದು ವಿಷಯವೆಂದರೆ, ಈ ಸ್ಮಾರ್ಟ್‌ಫೋನ್ ಇತ್ತೀಚೆಗೆ ಜಾಗತಿಕವಾಗಿ ಪ್ರಸಿದ್ಧವಾದ ಐಎಫ್ ಡಿಸೈನ್ ಅವಾರ್ಡ್ 2022 ಪಡೆದಿದೆ. ಈ ಪ್ರಶಸ್ತಿಯನ್ನು ʻಉತ್ಪನ್ನ ವಿನ್ಯಾಸಗಳ ಆಸ್ಕರ್ʼಅಂತಲೂ ಕರೆಯಲಾಗುತ್ತದೆ. 132 ಸದಸ್ಯರ ತೀರ್ಪುಗಾರ ಮಂಡಳಿಯು 57 ದೇಶಗಳಿಂದ ಬಂದಿದ್ದ ಸುಮಾರು 11,000 ಉತ್ಪನ್ನ ವಿನ್ಯಾಸದ ಮಾದರಿಗಳನ್ನು ಪರಿಶೀಲಿಸಿ, ಕೊನೆಗೆ ಇದಕ್ಕೆ ಈ ಪ್ರಶಸ್ತಿ ಕೊಡಮಾಡಿರುವುದು ವಿಶೇಷವಾಗಿದೆ.
5G Smartphone 5ಜಿ ಕ್ಷೇತ್ರಕ್ಕೆ ಟೆಕ್ನೋ ಎಂಟ್ರಿ, ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಲಾಂಚ್!
ರೂ.25,999/-ಬೆಲೆಯೊಂದಿಗೆ ವೈಶಿಷ್ಟ್ಯಗಳ ಆಗರವೆನಿಸಿರುವ ಸ್ಮಾರ್ಟ್‌ಫೋನ್ ಫ್ಯಾಂಟಮ್ ಎಕ್ಸ್ ಮಾರಾಟವು ಭಾರತದಲ್ಲಿ 04 ಮೇ 2022ರಿಂದ ಪ್ರಾರಂಭವಾಗಲಿದೆ. ಫ್ಯಾಂಟಮ್ ಎಕ್ಸ್‌ನ ಪ್ರತಿ ಖರೀದಿಯ ಮೇಲೆ ಗ್ರಾಹಕರು ಒಂದು ಬಾರಿ ಸ್ಕ್ರೀನ್ ರಿಪ್ಲೇಸ್‌ಮೆಂಟ್‌ನೊಂದಿಗೆ ರೂ. 2,999/- ಮೊತ್ತದ ಕಾಂಪ್ಲಿಮೆಂಟರಿ ಬ್ಲೂಟೂತ್ ಸ್ಪೀಕರ್ ಪಡೆಯುತ್ತಾರೆ.
ಫ್ಯಾಂಟಮ್ ಎಕ್ಸ್ ಅತ್ಯುತ್ತಮ ಇನ್-ಹ್ಯಾಂಡ್ ಆರಾಮಕ್ಕಾಗಿ ಫೋನ್‌ನ ಬದಿಗಳಲ್ಲಿ 36.5° ಸೂಕ್ತ ರೌಂಡಿಂಗ್‌ನೊಂದಿಗೆ ಗೋಲ್ಡನ್ ಗ್ರಿಪ್ ಜತೆ ಬರುತ್ತದೆ. ಗ್ರಾಹಕರಿಗೆ ಇದು ಉತ್ತಮ ಅನುಭವ ನೀಡುತ್ತದೆ. 6.7" ಎಫ್ಎಚ್‌ಡಿ + ಎಎಂಒಎಲ್‌ಇಡಿ ಡಿಸ್ಪ್ಲೆ, 91% ಸ್ಕ್ರೀನ್ ಟು ಬಾಡಿ ರೇಷಿಯೊ, 90ಊz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್‌ಫೋನ್ ಎರಡೂ ಬದಿಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಇರುವ ಕಾರಣ ಮೊಬೈಲ್ ಕೆಳಗೆ ಜಾರಿ ಬಿದ್ದರೆ ಅದರ ಕಾರ್ಯಕ್ಷಮತೆಗೆ ಧಕ್ಕೆಯಾಗುವುದನ್ನು ತಡೆಯುತ್ತದೆ. ಅಲ್ಲದೇ ಗೀಚುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಪ್ರಭಾವಶಾಲಿ 108ಎಂಪಿ ಅಲ್ಟ್ರಾ ಎಚ್‌ಡಿ ಮೋಡ್ 50ಎಂಪಿ + 13ಎಂಪಿ + 8ಎಂಪಿ ರಿಯರ್ ಕ್ಯಾಮೆರಾದೊಂದಿಗೆ ಸಂಯೋಜನೆಗೊಂಡಿದೆ
ಫ್ಯಾಂಟಮ್ ಎಕ್ಸ್ 108ಎಂಪಿ ಅಲ್ಟ್ರಾ ಎಚ್‌ಡಿ ಮೋಡ್‌ನೊಂದಿಗೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅತ್ಯಂತ ನಿಖರತೆಯೊಂದಿಗೆ ಅದ್ಭುತವಾಗಿ ಫೋಟೋಗಳನ್ನು ಕ್ಲಿಕ್ ಮಾಡಲು ಇದರಿಂದ ಸಾಧ್ಯವಾಗುತ್ತದೆ. ಇದು 13ಎಂಪಿ 50ಎಂಎಂ ವೃತ್ತಿಪರ ಪೋರ್ಟೇಟ್ ಲೆನ್ಸ್ ಮತ್ತು ಡ್ಯುಯಲ್-ಕೋರ್ ಲೇಸರ್ ಫೋಕಸ್ ಸಹ ಇದ್ದು, ಇದು ಸ್ನ್ಯಾಪ್‌ಗಳನ್ನು ಅತ್ಯಂತ ನಿಖರತೆಯೊಂದಿಗೆ ತೆಗೆಯಲು ನೆರವಾಗುತ್ತದೆ. ಫ್ಯಾಂಟಮ್ ಎಕ್ಸ್ ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿದ್ದು, 50 ಎಂಪಿ ಅಲ್ಟ್ರಾ-ನೈಟ್ ಕ್ಯಾಮೆರಾ ಇದೆ. ಇದು ಉದ್ಯಮದಲ್ಲಿ ಮುಂಚೂಣಿಯಲ್ಲಿರುವ 1/1.3-ಇಂಚಿನ ಜಿಎನ್ 1 ಲೈಟ್ ಸೆನ್ಸಿಟಿವಿಟಿ ಸೆನ್ಸರ್ ಒಳಗೊಂಡಿದೆ.
ಅಲ್ಟ್ರಾ ಎಚ್‌ಡಿ ಮೋಡ್‌ಗಾಗಿ 105ಲಿ ಅಗಲದ ಲೆನ್ಸ್ ಮತ್ತು 48 ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್‌ನೊಂದಿಗೆ ಬಳಕೆದಾರ ಅತ್ಯಂತ ಮನಮೋಹಕವಾದ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು. ಫ್ರಂಟ್ ಕ್ಯಾಮೆರಾವು 4ಏ ಟೈಮ್-ಲ್ಯಾಪ್ಸ್, ಸ್ಲೋ ಮೋಷನ್, ವೈವಿಧ್ಯಮಯ ಥೀಮ್‌ಗಳೊಂದಿಗೆ ವೃತ್ತಿಪರ ಭಾವಚಿತ್ರಗಳು ಮತ್ತು ಸೆಲ್ಫಿ ಡ್ಯುಯಲ್ ಫ್ಲ್ಯಾಶ್ ಲೈಟ್‌ಗೆ ಪೂರಕವಾದ ಇತರ ಆಕರ್ಷಕ ಮೋಡ್ ಗಳನ್ನು ಚಿತ್ರೀಕರಿಸಲು ಅನುವು ಮಾಡಿಕೊಡುತ್ತದೆ.
ದೊಡ್ಡ ಡೇಟಾ ಸ್ಟೋರೇಜ್ ಮತ್ತು ಸೂಪರ್-ಫಾಸ್ಟ್ ಪ್ರೊಸೆಸಿಂಗ್‌ಗಾಗಿ 13gb RAM ಜೊತೆಗೆ 256gb ROM
ಹೊಸ ಫ್ಯಾಂಟಮ್ ಎಕ್ಸ್ 8ಜಿಬಿ ಎಲ್ಪಿಡಿಡಿಆರ್4ಎಕ್ಸ್ ಹೊಂದಿದ್ದು, 5 ಜಿಬಿ ಮೆಮ್‌ಫ್ಯೂಷನ್ ರಾಮ್‌ವರೆಗೆ ವಿಸ್ತರಿಸುವ ಕಾರಣ ಸೂಪರ್-ಫಾಸ್ಟ್ ವೇಗವನ್ನು ಒದಗಿಸುತ್ತದೆ. ಇದರ 256 ಜಿಬಿ ಯುಎಫ್ಎಸ್ 2.1 ಫ್ಲ್ಯಾಶ್ ಆಂತರಿಕ ಸ್ಟೋರೇಜ್ ಡೇಟಾ ಅನುಭವವನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಫೈಲ್‌ಗಳಿಗೆ ಹೇರಳವಾದ ಸ್ಥಳಾವಕಾಶವನ್ನು ಕೊಡುತ್ತದೆ. ನಿಗದಿತ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು 13 ಜಿಬಿ ರಾಮ್ ಮೂಲಕ ಶೇಖರಣಾ ಸಾಮರ್ಥ್ಯವನ್ನು 512 ಜಿಬಿವರೆಗೆ ಹೆಚ್ಚಿಸಬಹುದು. ಇದು ಸರಾಸರಿ ಅಪ್ಲಿಕೇಶನ್ ಲಾಂಚ್ ಅನ್ನು 80% ರಷ್ಟು ಸುಧಾರಿಸುತ್ತದೆ.
ಹೆಲಿಯೋ ಜಿ95 ಪವರ್‌ಫುಲ್ ಪ್ರೊಸೆಸರ್ ತನ್ನ ಅಲ್ಟ್ರಾ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳು ಮತ್ತು ತ್ವರಿತ ರೀಫಿಲ್ಲಿಂಗ್‌ಗಾಗಿ 33W ಫ್ಲ್ಯಾಶ್ ಚಾರ್ಜರ್‌ನೊಂದಿಗೆ ಹೊಂದಿಕೆಯಾಗಲಿದೆ
ಟೆಕ್ನೊ ಫ್ಯಾಂಟಮ್ ಎಕ್ಸ್ಅನ್ನು ಆಕ್ಟಾ-ಕೋರ್ ಮೀಡಿಯಾಟೆಕ್ ಹೆಲಿಯೊ ಜಿ 95 ಎಸ್ಒಸಿಯಿಂದ ಚಾಲಿತಗೊಳಿಸಲಾಗುತ್ತದೆ. ಇದು ವೀಡಿಯೊ ಸ್ಟ್ರೀಮಿಂಗ್, ಆಟಗಳನ್ನು ಆಡುವಾಗ ಮತ್ತು ಅನೇಕ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡುವಾಗ ಅತ್ಯುತ್ತಮ ಗುಣಮಟ್ಟದ ವೇಗವನ್ನು ನೀಡುತ್ತದೆ. ಸ್ಮಾರ್ಟ್ ಫೋನ್ ನ ಆರ್ಮ್ ಮಾಲಿ-ಜಿ76 ಜಿಪಿಯು ಜೊತೆಗೆ ಎಂಡ್-ಟು-ಎಂಡ್ ಆಪ್ಟಿಮೈಸೇಶನ್ ಫಾರ್ ಸ್ಮೂತ್ ಮೂವ್ಸ್ ಮತ್ತು ರಾಪಿಡ್ ಸೆನ್ಸ್ ರೆಸ್ಪಾನ್ಸ್ ವ್ಯವಸ್ಥೆಯು ಒಟ್ಟಾರೆಯಾಗಿ ಮೊಬೈಲ್ ಸಾಧನ ಬಳಸುವ ಅನುಭವವನ್ನು ಉತ್ತಮಗೊಳಿಸುತ್ತದೆ. ಇದರ ಜತೆಗೆ ಫೋನ್ 4700 ಎಂಎಎಚ್ ಶಕ್ತಿಶಾಲಿ ಬ್ಯಾಟರಿಹೊಂದಿದ್ದು, ಇದು 38 ದಿನಗಳ ಅಲ್ಟ್ರಾ-ಲಾಂಗ್ ಸ್ಟ್ಯಾಂಡ್ ಬೈ ಸಮಯವನ್ನು ಒದಗಿಸುತ್ತದೆ. ಬಾಕ್ಸ್‌ನೊಳಗೆ 33W ಫ್ಲ್ಯಾಶ್ ಅಡಾಪ್ಟರ್ಸಹ ಇರುತ್ತದೆ.
ಅಲ್ಟ್ರಾ-ಥಿನ್ ಆಪ್ಟಿಕಲ್ ಸೆನ್ಸರ್ ನೆರವಿನಿಂದ ಕರ್ವ್ಡ್ ಡಿಸ್ಪ್ಲೆದೊಂದಿಗೆ ಇತ್ತೀಚಿನ ಫಿಂಗರ್ ಸೆಕ್ಯೂರಿಟಿ ವ್ಯವಸ್ಥೆ ಸಂಯೋಜಿತಗೊಂಡಿದೆ. ಹೀಟ್ ಪೈಪ್ ಕೂಲಿಂಗ್ ಸಲ್ಯೂಷನ್‌ನಿಂದ ತಾಪಮಾನದ ಬಿಸಿ ತಾಗದಂತೆ ಇಟ್ಟುಕೊಳ್ಳಬಹುದು.
ಈ ಹೊಸ ಸ್ಮಾರ್ಟ್‌ಫೋನ್ ಇತ್ತೀಚಿನ ಇನ್-ಡಿಸ್ಪ್ಲೆ ಫಿಂಗರ್‌ಪ್ರಿಂಟ್ ಸೆನ್ಸರ್ಒಳಗೊಂಡಿದೆ. ಇದು ಆಪ್ಟಿಕಲ್ ಡಿಟೆಕ್ಟರ್ ಆಗಿದ್ದು, ಫೋನ್ನ ಡಿಸ್ಪ್ಲೆ ಜತೆ ಸಮ್ಮಿಳಿತಗೊಂಡಿದೆ. ಇದು ಫೋನ್‌ಅನ್ನು 0.4 ಸೆಕೆಂಡುಗಳಲ್ಲಿ ಅನ್ಲಾಕ್ ಮಾಡುತ್ತದೆ. ಫಿಂಗರ್‌ಪ್ರಿಂಟ್ ಸೆನ್ಸರ್ ವಿಶೇಷವಾದ ತಂತ್ರಜ್ಞಾನದಿಂದ ಕೂಡಿರವ ಕಾರಣ ಎಣ್ಣೆಯ ಜಿಡ್ಡಿನಿಂದ ಕೂಡಿದ ಬೆರಳುಗಳೊಂದಿಗೆ ಬಳಸುವಾಗ ಕಿರಿಕಿರಿಯಾಗದಂತೆ ಮಾಡುತ್ತದೆ. ಫ್ಯಾಂಟಮ್ ಎಕ್ಸ್ ವಿಶಾಲವಾದ 1007.5mm² ಲಿಕ್ವಿಡ್ ಕೂಲಿಂಗ್ ಸಿಸ್ಟಂ ಮತ್ತು ಸೂಪರ್-ಎಫಿಶಿಯೆಂಟ್ ಹೀಟ್ ಡಿಸೆಪೇಷನ್ ಸಹಾಯದಿಂದ ಕೋರ್ ಸಿಪಿಯು ತಾಪಮಾನವನ್ನು ಕಡಿಮೆ ಮಾಡುವ ಫ್ಲ್ಯಾಗ್ ಶಿಪ್ ಕೂಲಿಂಗ್ ಸಿಸ್ಟಮ್ ಸಹ ಒದಗಿಸುತ್ತದೆ.