Big Airtel Offer: ಏರ್ಟೆಲ್ ಗ್ರಾಹಕರಿಗೆ ಬಂಪರ್ : ಸಿಗ್ತಿದೆ Pocket FM, ಲಿಂಕ್ಡ್ ಇನ್ ಸಬ್ಕ್ರೈಬ್ ಚಾನ್ಸ್

Published : Aug 10, 2026, 11:52 AM IST
Airtel

ಸಾರಾಂಶ

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದೆ. ಏರ್ಟೆಲ್ ಇನ್ಸೈಡರ್ ರಿವಾರ್ಡ್ಸ್ ಪ್ರೋಗ್ರಾಂ , ಪಾಕೆಟ್ ಎಫ್ಎಂ ಪ್ರೀಮಿಯಂ ಸಬ್ಸ್ಕ್ರೈಬ್ ಒಳಗೊಂಡಿದೆ. ಅರ್ಹ ಏರ್ಟೆಲ್ ಬಳಕೆದಾರರು 3 ತಿಂಗಳ ಪಾಕೆಟ್ ಎಫ್ಎಂ ಪ್ರೀಮಿಯಂ ಚಂದಾದಾರಿಕಯನ್ನು ಉಚಿತವಾಗಿ ಪಡೆಯಲಿದ್ದಾರೆ.

ಏರ್ಟೆಲ್ ಇನ್ಸೈಡರ್ ಬಳಕೆದಾರರಿಗೆ ಮೊಬೈಲ್ ಕನೆಕ್ಟಿವಿಟಿ ನೀಡುವ ಜೊತೆಗೆ ಮನರಂಜನೆ, ವೃತ್ತಿಪರ ನೆಟ್ವರ್ಕಿಂಗ್, ಹೋಟೆಲ್ ಬುಕಿಂಗ್ ಮತ್ತು ಊಟಕ್ಕೆ ಸಂಬಂಧಿಸಿದ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಏರ್ಟೆಲ್ ಇನ್ಸೈಡರ್ ಪ್ರಯೋಜನಗಳನ್ನು ಪಡೆಯಲು, ಪ್ರೋಗ್ರಾಂ ಟೈಂನಲ್ಲಿ ಬಳಕೆದಾರರು ಸಕ್ರಿಯ ಏರ್ಟೆಲ್ ಚಂದಾದಾರಿಕೆಯನ್ನು ಹೊಂದಿರಬೇಕು. ಇದು ಪ್ರಿಪೇಯ್ಡ್, ಪೋಸ್ಟ್ಪೇಯ್ಡ್, ವೈ-ಫೈ ಅಥವಾ ಡಿಟಿಎಚ್ ಯಾವುದೇ ಸಂಪರ್ಕವಾಗಿದ್ರೂ ಲಾಭ ಸಿಗಲಿದೆ.

ಪಾಕೆಟ್ ಎಫ್ಎಂ (Pocket FM) ಪ್ರೀಮಿಯಂ ಆಫರ್

ಈ ರಿವಾರ್ಡ್ಸ್ ಪ್ರೋಗ್ರಾಂ ಅಡಿಯಲ್ಲಿ ಅರ್ಹ ಏರ್ಟೆಲ್ ಗ್ರಾಹಕರು ಉಚಿತ 3 ತಿಂಗಳ ಪಾಕೆಟ್ ಎಫ್ಎಂ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುತ್ತಾರೆ. ಬಳಕೆದಾರರು ಆಗಸ್ಟ್ 3, 2026 ಮತ್ತು ನವೆಂಬರ್ 3, 2026 ರ ನಡುವೆ ಈ ಆಫರ್ ರಿಡೀಮ್ ಮಾಡಿಕೊಳ್ಳಬೇಕು. ಈ ಅವಧಿಯ ನಂತರ ಈ ಆಫರ್ ಇರೋದಿಲ್ಲ.

ಲಿಂಕ್ಡ್ಇನ್ (LinkedIn) ಪ್ರೀಮಿಯಂ ಆಫರ್

ಅರ್ಹ ಏರ್ಟೆಲ್ ಇನ್ಸೈಡರ್ ಗ್ರಾಹಕರು 2,997 ಬೆಲೆಯ 3 ತಿಂಗಳ ಲಿಂಕ್ಡ್ಇನ್ ಪ್ರೀಮಿಯಂ ಕೆರಿಯರ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಆಫರ್ನ ರಿಡೀಮ್ ಅವಧಿ ಜೂನ್ 23, 2026 ರಿಂದ ಆಗಸ್ಟ್ 23, 2026 ರವರೆಗೆ ಇರುತ್ತದೆ. ರಿಡೀಮ್ ಮಾಡಿಕೊಳ್ಳುವ ಸಮಯದಲ್ಲಿ ಬಳಕೆದಾರರು ಸಕ್ರಿಯ ಏರ್ಟೆಲ್ ಪ್ರಿಪೇಯ್ಡ್, ಪೋಸ್ಟ್ಪೇಯ್ಡ್, ವೈ-ಫೈ ಅಥವಾ ಡಿಟಿಎಚ್ ಚಂದಾದಾರಿಕೆಯನ್ನು ಹೊಂದಿರಬೇಕು.

ಎಂಎಂಟಿ ಅಡ್ವಾಂಟೇಜ್ ಪ್ಲಸ್

ಅರ್ಹ ಏರ್ಟೆಲ್ ವೈ-ಫೈ ಗ್ರಾಹಕರು 12 ತಿಂಗಳ ಎಂಎಂಟಿ ಅಡ್ವಾಂಟೇಜ್ ಪ್ಲಸ್ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರಲ್ಲಿ 12 ತಿಂಗಳವರೆಗೆ ಉಚಿತ MMTBLACK GOLD ಸದಸ್ಯತ್ವ ಅಥವಾ ಅಸ್ತಿತ್ವದಲ್ಲಿರುವ GOLD ಸದಸ್ಯರಿಗೆ MMTBLACK PLATINUM ಗೆ ಅಪ್ಗ್ರೇಡ್ ಸೇರಿದೆ. ಹೆಚ್ಚುವರಿಯಾಗಿ, ಗ್ರಾಹಕರು ದೇಶೀಯ ಹೋಟೆಲ್ ಬುಕಿಂಗ್ಗಳಲ್ಲಿ ಶೇಕಡಾ 35 ರಷ್ಟು ರಿಯಾಯಿತಿ ಮತ್ತು ಅಂತರರಾಷ್ಟ್ರೀಯ ಹೋಟೆಲ್ ಬುಕಿಂಗ್ಗಳಲ್ಲಿ ಶೇಕಡಾ 35 ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಏರ್ಟೆಲ್ ಇನ್ಸೈಡರ್ ಆಫರ್ ಹೇಗೆ ಪಡೆಯುವುದು?

ಅರ್ಹ ಬಳಕೆದಾರರು ಏರ್ಟೆಲ್ ಆಪ್ ಮೂಲಕ ಏರ್ಟೆಲ್ ಇನ್ಸೈಡರ್ ಆಫರ್ಗಳನ್ನು ವೀಕ್ಷಿಸಬಹುದು ಮತ್ತು ರಿಡೀಮ್ ಮಾಡಿಕೊಳ್ಳಬಹುದು. ಪ್ರತಿಯೊಂದು ಆಫರ್ ವಿಭಿನ್ನ ರಿಡೀಮ್ ಅವಧಿಯನ್ನು ಹೊಂದಿದೆ ಎಂಬುದನ್ನು ಗಮನಿಸುವುದು ಮುಖ್ಯ. ಬಳಕೆದಾರರು ನಿರ್ದಿಷ್ಟ ಅವಧಿಯೊಳಗೆ ಸಂಬಂಧಿತ ಆಫರ್ ಅನ್ನು ಕ್ಲೈಮ್ ಮಾಡಬೇಕು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Mobile: ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಬಂಪರ್ ಆಫರ್: 7,000mAh ಬ್ಯಾಟರಿಯ ಫ್ಲ್ಯಾಗ್‌ಶಿಪ್ ಫೋನ್ ಬರೋಬ್ಬರಿ ₹9,000 ಅಗ್ಗ!
Mobile: ಸ್ಯಾಮ್‌ಸಂಗ್ ಫೋನ್ ಈಗ ಬರಿ ಅರ್ಧ ಬೆಲೆಗೆ? ಫ್ಲಿಪ್‌ಕಾರ್ಟ್‌ನ ಈ ಆಫರ್‌ ಕುರಿತು ಸಂಪೂರ್ಣ ವಿವರ ಇಲ್ಲಿದೆ!