
ಫೋನ್ ಖರೀದಿ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಚಾರ ಏನೆಂದರೆ.. ಕ್ಯಾಮೆರಾ, ಬ್ಯಾಟರಿ ಮತ್ತು ಪ್ರೊಸೆಸರ್ ಜೊತೆಗೆ, ನೀರು ಮತ್ತು ಧೂಳಿನ ರಕ್ಷಣೆಯೂ ಬಹಳ ಮುಖ್ಯ. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ನಮ್ಮ ಫೋನ್ ಅನ್ನು ಹೇಗೆ ರಕ್ಷಿಸಿಕೊಳ್ಳಬಹುದು ಅಂತಾ. ಯಾಕೆಂದರೆ ನಾವು ಫೋನ್ ಬಳಸುತ್ತಿದ್ದೇವೆ ಅಂದರೆ ಅದು ನೀರಿನ ಸಂಪರ್ಕಕ್ಕೆ ಬರೋದಂತೂ ಗ್ಯಾರಂಟಿ.
ಹಾಗಾಗಿ ಹೊಸ ಫೋನ್ ಖರೀದಿಸುವಾಗ ಫೋನ್‌ನ ಐಪಿ ರೇಟಿಂಗ್ ಪರಿಶೀಲಿಸಬೇಕು. ಐಪಿ ರೇಟಿಂಗ್ ಸಾಧನವು ಧೂಳು ಮತ್ತು ನೀರಿನಿಂದ ಎಷ್ಟು ರಕ್ಷಣೆ ನೀಡುತ್ತದೆ ಅಂತಾ ತೋರಿಸುತ್ತದೆ. ಮಳೆಯಲ್ಲಿ ಫೋನ್ ಬಳಸುವವರಿಗೆ ಇದು ತುಂಬಾನೇ ಮುಖ್ಯವಾಗುತ್ತದೆ. ಪ್ರಸ್ತುತ ಐಪಿ 68 ಮತ್ತು ಐಪಿ 69 ರೇಟಿಂಗ್ ಟ್ರೆಂಡಿಂಗ್‌ನಲ್ಲಿದೆ.
IP67 ರೇಟಿಂಗ್ ಹೊಂದಿರುವ ಫೋನ್ ಬಯಸುವ ಬಳಕೆದಾರರಿಗೆ Samsung Galaxy A33 5G ಮತ್ತು Galaxy A34 5G ಒಳ್ಳೆಯ ಆಯ್ಕೆ. ಭಾರತದಲ್ಲಿ Galaxy A33 5G ಯ ಪ್ರಸ್ತುತ ಬೆಲೆ ₹19,980 ರಿಂದ ₹33,990 ವರೆಗೆ ಇದೆ. Samsung Galaxy A34 5G ಬೆಲೆ ₹20,790 ರಿಂದ ಪ್ರಾರಂಭವಾಗುತ್ತದೆ. Galaxy A34 5G IP67 ರೇಟಿಂಗ್, ಉತ್ತಮ ಕ್ಯಾಮೆರಾ ಮತ್ತು ದೀರ್ಘಕಾಲೀನ ಸಾಫ್ಟ್‌ವೇರ್ ಸಪೋರ್ಟಿಂಗ್ ಸಿಸ್ಟಮ್ ಹೊಂದಿದೆ.
OPPO A6c ಸ್ಮಾರ್ಟ್‌ಫೋನ್ IP64 ರೇಟಿಂಗ್ ಹೊಂದಿದೆ. ಕಂಪನಿ ಹೇಳಿಕೊಂಡಿರುವ ಪ್ರಕಾರ.. ಇದು ಸಾಮಾನ್ಯ ಬಳಕೆಯ ಸಮಯದಲ್ಲಿ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆ ನೀಡುತ್ತದೆ. 4GB+64GB ರೂಪಾಂತರದ ಪ್ರಸ್ತುತ ಬೆಲೆ ಸುಮಾರು ₹16,999. ಈ ಫೋನ್ 6.75-ಇಂಚಿನ 120Hz ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 685 ಪ್ರೊಸೆಸರ್ ಮತ್ತು 6,500mAh ಬ್ಯಾಟರಿ ಹೊಂದಿದೆ.
Samsung Galaxy A06 5G IP54 ರೇಟಿಂಗ್ ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆ ನೀಡುತ್ತದೆ. ಆದರೆ ಇದನ್ನು ಮುಳುಗುವಿಕೆಗಾಗಿ ವಿನ್ಯಾಸಗೊಳಿಸಲಾಗಿಲ್ಲ. ಇದರ ಬೆಲೆ ₹17,499. ಫೋನ್ 5G ಸಂಪರ್ಕವನ್ನು ನೀಡುತ್ತದೆ.
Redmi A7 Pro 5G ಸ್ಮಾರ್ಟ್‌ಫೋನ್ IP52 ರೇಟಿಂಗ್ ಹೊಂದಿದೆ. ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ. ಮೂಲ ಬೆಲೆ ₹14,499 ರಿಂದ ಪ್ರಾರಂಭವಾಗುತ್ತದೆ. ಈ ಫೋನ್ 6.9-ಇಂಚಿನ 120Hz ಡಿಸ್‌ಪ್ಲೇ ಹೊಂದಿದೆ.
POCO C85 5G ಸ್ಮಾರ್ಟ್‌ಫೋನ್ ಐಪಿ ರೇಟಿಂಗ್ ಜೊತೆಗೆ ಧೂಳು ಮತ್ತು ನೀರಿನ ಪ್ರತಿರೋಧವನ್ನೂ ಹೊಂದಿದೆ. 128GB ರೂಪಾಂತರದ ಪ್ರಸ್ತುತ ಬೆಲೆ ಸುಮಾರು ₹16,999 ರಿಂದ ಪ್ರಾರಂಭಗುತ್ತದೆ. 8GB+128GB ಮಾಡೆಲ್ ₹17,999 ವರೆಗೆ ಇದೆ. ಈ ಫೋನ್ 6.9-ಇಂಚಿನ 120Hz HD+ ಡಿಸ್ಪ್ಲೇ ಮತ್ತು 50MP ಹಿಂಬದಿಯ ಕ್ಯಾಮೆರಾ ಹೊಂದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.