ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದೇ ಡೌಟು!

Published : Oct 12, 2019, 02:58 PM ISTUpdated : Oct 12, 2019, 05:18 PM IST
ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದೇ ಡೌಟು!

ಸಾರಾಂಶ

ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದೇ ಅನುಮಾನ ಎಂದು ಮುಖಂಡರೋರ್ವರು ಹೇಳಿದರು. 

ಮಂಡ್ಯ (ಅ.12): ನಾವು ಅನರ್ಹರು ಅಥವಾ ಶಾಸಕರಲ್ಲ ಎಂದು ತೀರ್ಮಾನ ಆಗಿಲ್ಲ. ಉಪ ಚುನಾವಣೆ ನಡೆಯುತ್ತದೆ ಎಂಬ ವಿಶ್ವಾಸ
ನಮಗಿಲ್ಲ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ  ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ನಾರಾಯಣಗೌಡ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮಾಜಿ ಸ್ಪೀಕರ್ ನಮ್ಮನ್ನು ಅನರ್ಹ ಳಿಸಿದ್ದಾರೆ. ಸುಪ್ರೀಂ ಕೋಟ್ ನರ್ಲ್ಲಿ ಅನರ್ಹತೆ ವಜಾ ಆಗಲಿದೆ. ಪಕ್ಷ ನಮ್ಮನ್ನು ವಜಾ ಮಾಡಿದೆ, ಆದರೆ ನಮ್ಮ ಶಾಸಕ ಸ್ಥಾನವನ್ನು ವಜಾ ಮಾಡಲು ಪಕ್ಷಕ್ಕೆ ಅಧಿಕಾರವೇ ಇಲ್ಲ. ಕ್ಷೇತ್ರದಲ್ಲಿ ಶಾಸಕ ಸ್ಥಾನವೇ ಖಾಲಿ ಇಲ್ಲ. 

ನಾವಿನ್ನೂ ಅನರ್ಹರೆಂದು ತೀರ್ಮಾನವೇ ಆಗಿಲ್ಲ. ಚುನಾವಣೆ ಆಯೋಗ ಮಾತ್ರ ಉಪ ಚುನಾವಣೆ ಪ್ರಕಟ ಮಾಡಿರುವುದು ನಮಗೆ ಆರ್ಥವೇ ಆಗುತ್ತಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನರ್ಹತೆ ವಜಾ ಆದರೆ ನಾವು ಶಾಸಕರಾಗೇ ಉಳಿದುಕೊಳ್ಳಲಿದ್ದೇವೆ. ನಾವು ಶಾಸಕರಾಗೇ ಉಳಿದುಕೊಂಡ್ರೆ ಚುನಾವಣೆ ಎಲ್ಲಿಂದ ಬರುತ್ತೆ ಹೇಳಿ ಎಂದು ಪ್ರಶ್ನೆ ಮಾಡಿದ ಅವರು, ನಾವು ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ. ಶಾಸಕ ಸ್ಥಾನ ಖಾಲಿಯಾಗಿಲ್ಲ, ನಾವಿನ್ನೂ ಅನರ್ಹರಲ್ಲ ಹಾಗಾಗಿ ಚುನಾವಣೆ ನಡೆಸಬೇಡಿ ಎಂದು ಮನವಿ ಮಾಡಿದ್ದೇವೆ. ಸುಪ್ರೀಂನಲ್ಲಿ ನಮಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ. ಸುಪ್ರೀಂ ಯಾವ ತೀರ್ಮಾನ ಕೈಗೊಂಡರೂ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು. 

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ