ಕಾಂಗ್ರೆಸ್ ಮುಖಂಡರ ಓಲೈಕೆಗೆ ಮುಂದಾದ ಸಂಸದೆ ಸುಮಲತಾ

Published : Oct 11, 2019, 11:44 AM IST
ಕಾಂಗ್ರೆಸ್ ಮುಖಂಡರ ಓಲೈಕೆಗೆ ಮುಂದಾದ ಸಂಸದೆ ಸುಮಲತಾ

ಸಾರಾಂಶ

ಇತ್ತೀಚೆಗಷ್ಟೇ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅಸಮಾಧಾನಗೊಂಡ ಕೈ ಮುಖಂಡರ ಓಲೈಕೆಗೆ ಸುಮಲತಾ ಮುಂದಾಗಿದ್ದು, ನಾಗಮಂಗಲದಲ್ಲಿ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಲಿದ್ದಾರೆ.

ಮಂಡ್ಯ(ಅ.11): ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದ ನಾಗಮಂಗಲದಲಲ್ಲಿರುವ ಕಾಂಗ್ರೆಸ್ ಕಚೇರಿಗೆ ಇಂದು ಭೇಟಿ ನೀಡಲಿದ್ದಾರೆ.

ಶನಿವಾರ ಬೆಳಗ್ಗೆ ನಾಗಮಂಗಲದಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದು, ನಂತರ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಿದ್ದಾರೆ. ನಂತರ ನಾಗಮಂಗಲ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿರುವ ಅವರು ತಾಲೂಕು ಮಟ್ಟದ ಅಧಿಕಾರಿಗಳ ಜೊತರ ಸಭೆ ನಡೆಸಲಿದ್ದಾರೆ. ನಂತರ ಸಾರ್ವಜನಿಕರಿಂದ ಸಹವಾಲು ಸ್ವೀಕರಿಸಲಿದ್ದಾರೆ.

ಅಚ್ಚರಿಗೆ ಕಾರಣವಾದ ಸುಮಲತಾ ನಡೆ : ಬಿಜೆಪಿ ಸೇರುತ್ತಾರಾ ಸುಮಲತಾ?

ಇತ್ತೀಚೆಗಷ್ಟೇ ಬಿಜೆಪಿ ಮುಖಂಡರನ್ನು ಸುಮಲತಾ ಅವರು ಭೇಟಿ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮುಖಂಡರಿಂದ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಇದೀಗ ಸುಮಲತಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿರುವುದು ವಿಶೇಷ.

ರೆಬೆಲ್ ಸ್ಟಾರ್ ಮನೆಯಲ್ಲಿ ಅಬ್ಬರಿಸಿದ ಐರಾ

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ