ಮಂಡ್ಯ: ಮನೆಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ

By Kannadaprabha NewsFirst Published Oct 16, 2019, 2:45 PM IST
Highlights

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನರಹಂತಕ ಹುಲಿಯನ್ನು ಸೆರೆ ಹಿಡಿದಿರುವ ಬೆನ್ನಲ್ಲೇ ಇದೀಗ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಚಿರತೆ ಕಾಟ ಆರಂಭವಾಗಿದೆ. ಮನೆಯಂಗಳಕ್ಕೇ ಬಂದು ಚಿರತೆ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಜನರನ್ನು ಆತಂಕಕ್ಕೊಳಪಡಿಸಿದೆ.

ಮಂಡ್ಯ(ಅ.16): ಮನೆ ಕಾಂಪೌಂಡ್‌ಗೆ ನುಗ್ಗಿದ ಚಿರತೆ ನಾಯಿನ್ನು ಹೊತ್ತೊಯ್ದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಬೋರೆ ಬಳಿ ಇರುವ ರಿಚರ್ಡ್‌ ಎಂಬುವರ ಮನೆಯ ಕಾಂಪೌಂಡ್‌ ಒಳಗೆ ನುಗ್ಗಿದ ಚಿರತೆ ನಾಯಿಯನ್ನು ಹೊತ್ತು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್‌ ಆಗಿದೆ.

ಆಪರೇಷನ್ ಟೈಗರ್: ಮರಹತ್ತಿ ಕುಳಿತು ಹುಲಿಯ ಜಾಡು ಹಿಡಿದ ಕಾಡಿನ ಮಕ್ಕಳು..!

ಇದರಿಂದ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಶೀಘ್ರ ಚಿರತೆಯನ್ನು ಹಿಡಿದು ಆತಂಕ ದೂರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಗಂಜಾಂನಲ್ಲಿ ಚಿರತೆ ಪ್ರತ್ಯಕ್ಷ:

ಶ್ರೀರಂಗಪಟ್ಟಣದ ಗಂಜಾಂ ಗ್ರಾಮದ ಚಂದಗಾಲು ರಸ್ತೆಗೆ ಹೋಗುವ ಜಮೀನು ಬಳಿ ಕಳೆದ ಎರಡು ಮೂರು ದಿನಗಳಿಂದ ಚಿರತೆ ಪ್ರತ್ಯಕ್ಷವಾಗಿ ರೈತರಿಗೆ ಕಾಣಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ತಿಳಿಸಿದ್ದಾರೆ.

5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!

ಕಳೆದ ತಿಂಗಳ ಹಿಂದೆ ಎರಡು ಕರುಗಳನ್ನು ತಿಂದು ಕರುವಿನ ತಲೆ ಬುರುಡೆ ಮೂಳೆಗಳನ್ನು ಬಿಟು ಹೋಗಿದೆ. ಅದೇ ಜಾಗದಲ್ಲಿ ಮತ್ತೇ ಕಾಣಿಸಿಕೊಂಡು ಬಂಗಾರದೊಡ್ಡಿ ನಾಲೆ ಏರಿಯ ಮೇಲೆ ಹೋಗುತ್ತಿದ್ದುದ್ದನ್ನು ರೈತರು ನೋಡಿ ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಖಾನಾಪುರದಲ್ಲಿ ಕುರಿಗಳ ಮೇಲೆ ಹುಲಿ ದಾಳಿ : ಆತಂಕದಲ್ಲಿ ಜನತೆ

click me!