ಒಂದು ಪ್ರೇಮಕ್ಕೆ ಸಂಬಂಧಿಸಿ ಮೂವರು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಪ್ರೀತಿಗಾಗಿ ಬಾಲಕಿ ಪ್ರಾಣ ಬಿಟ್ಟರೆ ಇನ್ನೂ ಇಬ್ಬರು ಇದೇ ವಿಚಾರಕ್ಕೆ ಸಂಬಂಧಿಸಿ ಮೃತಪಟ್ಟಿದ್ದಾರೆ. ಅಂತೂ ಪ್ರೀತಿಯ ಕಥೆಯೊಂದು ದಾರುಣ ಅಂತ್ಯ ಕಂಡಿದೆ.
ಮಂಡ್ಯ(ಅ. 22): ಒಂದು ಪ್ರೇಮಕ್ಕೆ ಸಂಬಂಧಿಸಿ ಮೂವರು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಪ್ರೀತಿಗಾಗಿ ಬಾಲಕಿ ಪ್ರಾಣ ಬಿಟ್ಟರೆ ಇನ್ನೂ ಇಬ್ಬರು ಇದೇ ವಿಚಾರಕ್ಕೆ ಸಂಬಂಧಿಸಿ ಮೃತಪಟ್ಟಿದ್ದಾರೆ. ಅಂತೂ ಪ್ರೀತಿಯ ಕಥೆಯೊಂದು ದಾರುಣ ಅಂತ್ಯ ಕಂಡಿದೆ.
ಮಂಡ್ಯದ ಮಂಚೇನಹಳ್ಳಿಯಲ್ಲಿ ಹದಿಹರೆಯದ ಪ್ರೇಮ್ ಕಹಾನಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪ್ರಾಪ್ತ ಬಾಲಕಿಯ ಪ್ರೀತಿಯಿಂದಾಗಿ ಸ್ವತಃ ಬಾಲಕಿ ಮಾತ್ರವಲ್ಲದೇ ಇನ್ನೂ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಕ್ಕಳಿಬ್ಬರಿಗೆ ನೇಣು ಹಾಕಿ ಬಳಿಕ ಒಂದೇ ಕುಣಿಕೆಗೆ ಕೊರಳೊಡ್ಡಿದ ಗಂಡ-ಹೆಂಡ್ತಿ
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಘಟನೆ ಸಂಭವಿಸಿದ್ದು ಬಾಲಕಿ, ಬಾಲಕಿಯ ಪ್ರಿಯತಮನ ತಂದೆ, ಬಾಲಕಿಯ ತಾತ ಮೃತರು. ಮಂಚೇನಹಳ್ಳಿಯ ಕಾಂಚನ(17) ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪ್ತೆ. ಅ.5ರಂದು ಕಾಂಚನಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ವಿಷಯ ತಿಳಿದ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಾಂಚನಾ ಭಾನುವಾರ ಸಾವನ್ನಪ್ಪಿದ್ದಾಳೆ..
ಯುವತಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆ ವಿಷಯ ತಿಳಿದ ಯುವಕನ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಾನಕ್ಕೆ ಅಂಜಿದ ಯುವಕ ಮಹೇಶ್ ತಂದೆ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊಮ್ಮಗಳನ್ನು ನೋಡಲು ಬಂದ ತಾತನೂ ಸಾವು:
ಕಾಂಚನಾ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ತಿಳಿದು ಆರೋಗ್ಯ ವಿಚಾರಿಸಲು ಹೋಗಿದ ಆಕೆಯ ತಾತ ಊಟಿ ಚಂದ್ರಣ್ಣ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೊಮ್ಮಗಳನ್ನು ನೋಡಲು ಹೋಗಿ ಹೃದಯಾಘಾತದಿಂದ ಆಸ್ಪತ್ರೆಯಲ್ಲೇ ಕೊನೆಯುಸಿರಿಳೆದಿದ್ದಾರೆ.
ಬಂಟ್ವಾಳದ ಹರೀಶ್ ಪೂಜಾರಿ ಕೊಲೆ ಸಾಕ್ಷಿಗೆ ಜೀವ ಬೆದರಿಕೆ..!
[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]