ನಾಗಮಂಗಲದ ತಾಲೂಕಿನ ಬೋರಿಕೊಪ್ಪಲು ಗ್ರಾಮದಲ್ಲಿ ಚಿರತೆ ದಾಳಿಗೆ ಹತ್ತು ಕುರಿಗಳು ಸಾವನ್ನಪ್ಪಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ತಾಲೂಕಿನ ದೇವಲಪಾಪುರ ಹೋಬಳಿಯ ಬೋರಿಕೊಪ್ಪಲು ಗ್ರಾಮದ ರೈತ ಸುರೇಶ್ ಅವರಿಗೆ ಸೇರಿದ ಕುರಿಗಳನ್ನು ಚಿರತೆ ಕಚ್ಚಿ ಕೊಂದು ಹಾಕಿದೆ.
ಮಂಡ್ಯ(ಅ.26): ನಾಗಮಂಗಲದ ತಾಲೂಕಿನ ಬೋರಿಕೊಪ್ಪಲು ಗ್ರಾಮದಲ್ಲಿ ಚಿರತೆ ದಾಳಿಗೆ ಹತ್ತು ಕುರಿಗಳು ಸಾವನ್ನಪ್ಪಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ತಾಲೂಕಿನ ದೇವಲಪಾಪುರ ಹೋಬಳಿಯ ಬೋರಿಕೊಪ್ಪಲು ಗ್ರಾಮದ ರೈತ ಸುರೇಶ್ ಅವರಿಗೆ ಸೇರಿದ ಕುರಿಗಳನ್ನು ಚಿರತೆ ಕಚ್ಚಿ ಕೊಂದು ಹಾಕಿದೆ.
ಸುರೇಶ್ ಅವರಿಗೆ ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಲಾಗಿದೆ. ಸುರೇಶ್ ಎಂದಿನಂತೆ ತಮ್ಮ ಕುರಿಗಳನ್ನು ತಮ್ಮ ಮನೆಯ ಮುಂದೆ ಇರುವ ಕೊಟ್ಟಿಗೆಯಲ್ಲಿ ಕೂಡಿದ್ದರು. ಇದಕ್ಕೇ ಹೊಂಚು ಹಾಕುತ್ತಿದ್ದ ಚಿರತೆ ಗುರುವಾರ ತಡ ರಾತ್ರಿ ಕೊಟ್ಟಿಗೆಗೆ ನುಗ್ಗಿ ಎಂಟು ಕುರಿಗಳನ್ನು ಕಚ್ಚಿ ಸಾಯಿಸಿದೆ. ಇನ್ನೆರಡು ಕುರಿಗಳನ್ನು ಹೊತ್ತುಕೊಂಡು ಹೋಗಿ ಗ್ರಾಮದ ಹೊರ ವಲಯದಲ್ಲಿ ತಿಂದು ಹಾಕಿದೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯ:
ಬೋರಿಕೊಪ್ಪಲು ಮತ್ತು ಸುತ್ತ ಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತಿತ್ತು. ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ್ದ ಪರಿಣಾಮವೇ ಘಟನೆಗೆ ಕಾರಣವಾಗಿದೆ ಎಂದು ರೈತ ಸುರೇಶ್ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಘಟನೆಯಿಂದ ಭಯಭೀತರಾಗಿರುವ ಬೋರಿಕೊಪ್ಪಲು, ಕಲ್ಲಿನಾಥಪುರ, ದೊಡ್ಡ ಯಗಟಿ, ಚಿಕ್ಕಯಗಟಿ, ಕರಡಹಳ್ಳಿ ಗ್ರಾಮಸ್ಥರು ತಮ್ಮ ಹೊಲ ಗದ್ದೆಗಳಿಗೆ ಹೊಗಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಚಿರತೆಯನ್ನು ಹಡಿಯುವ ಕ್ರಮ ವಹಸಿಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಂಡ್ಯ: ಸೇತುವೆ ಕುಸಿದು ಗ್ರಾಮಗಳಿಗೆ ಸಂಪರ್ಕ ಕಡಿತ