ಮಂಡ್ಯ: ಸೇತುವೆ ಕುಸಿದು ಗ್ರಾಮಗಳಿಗೆ ಸಂಪರ್ಕ ಕಡಿತ

Published : Oct 25, 2019, 08:32 AM IST
ಮಂಡ್ಯ: ಸೇತುವೆ ಕುಸಿದು ಗ್ರಾಮಗಳಿಗೆ ಸಂಪರ್ಕ ಕಡಿತ

ಸಾರಾಂಶ

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆ. ಆರ್. ಪೇಟೆ ತಾಲೂಕಿನಲ್ಲಿ ಸೇತುವೆ ಕುಸಿದು ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗಿದೆ. ಅಗ್ರಹಾರಬಾಚಹಳ್ಳಿ ಗ್ರಾಮದ ದೊಡ್ಡಕೆರೆಯ ಕೋಡಿ ಉಕ್ಕಿಹರಿದ ಪರಿಣಾಮ ಸೇತುವೆ ಕುಸಿದಿದೆ.

ಮಂಡ್ಯ(ಅ.25): ಕೆ.ಆರ್‌ .ಪೇಟೆ ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಅಗ್ರಹಾರಬಾಚಹಳ್ಳಿ ಗ್ರಾಮದ ದೊಡ್ಡಕೆರೆಯ ಕೋಡಿ ಉಕ್ಕಿಹರಿದ ಪರಿಣಾಮ ಸೇತುವೆ ಕುಸಿದಿರುವುದರಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡು ಜನರಿಗೆ ತೀವ್ರ ತೊಂದರೆಯಾಗಿದೆ.

ಕೆರೆ ಕೋಡಿಯಿಂದ ಅಪಾರವಾಗಿ ನೀರು ಉಕ್ಕಿ ಹರಿದು ಸಂಪರ್ಕ ಸೇತುವೆ ಮುರಿದು ಬಿದ್ದಿದೆ. ಇದರಿಂದ ಶ್ರವಣಬೆಳಗೊಳ, ಅಗ್ರಹಾರಬಸಚಹಳ್ಳಿ, ಚಿಲ್ಲದಹಳ್ಳಿ ಹರಿರಾಯನಹಳ್ಳಿ, ಮಾರ್ಗೋನಹಳ್ಳಿ ಸೇರಿದಂತೆ ಹತ್ತಾರು ಊರುಗಳಿಗೆ ಹೋಗಲು ಇದ್ದ ಸಂಪರ್ಕವೇ ಕಡಿದು ಹೋಗಿದೆ.

ಮಂಡ್ಯ: ಬಿರುಸಿನ ಮಳೆಗೆ ತುಂಬಿ ಹರಿದ ಒಡಕೆ ಕಟ್ಟೆ

ಸೇತುವೆಯಿಂದ ನೀರು ಜಮೀನಿಗೆ ನುಗ್ಗಿದ ಹಲವು ರೈತರ ಭತ್ತ ಮತ್ತು ಕಬ್ಬಿನ ಬೆಳೆಯು ನೀರಿನಲ್ಲಿ ಮುಳುಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರು ನಷ್ಟವಾಗಿದೆ .ಲೋಕೊಪಯೋಗಿ ಇಲಾಖೆಯ ಎಇಇ ರಾಮಸ್ವಾಮಿ, ಗ್ರಾಪಂ ಅಧ್ಯಕ್ಷ ಶ್ರೀಧರ್‌, ಪಿಡಿಒ ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಪಂ ಮಾಜಿ ಸದಸ್ಯ ಎ.ಬಿ.ಕುಮಾರ್‌ ಅಗ್ರಹಾರಬಾಚಹಳ್ಳಿ ಸೇತುವೆ ಕುಸಿದಿರುವುದರಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗಿದೆ. ಹಾಲಿನ ಡೈರಿ ವಾಹನ ಗ್ರಾಮದೊಳಕ್ಕೆ ಬರಲು ಸಾಧ್ಯವಾಗದೇ ಹಾಲು ವ್ಯರ್ಥವಾಗುತ್ತಿದೆ. ಈ ರಸ್ತೆಗೆ ಪರ್ಯಾಯ ವಾಗಿ ಯಾವುದೇ ರಸ್ತೆ ಇಲ್ಲದ ಕಾರಣ ಕೂಡಲೇ ಸೇತುವೆಯನ್ನು ಪುನರ್‌ ನಿರ್ಮಿಸಿಕೊಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

KRSನಿಂದ ಕಾವೇರಿ ನದಿಗೆ 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ