ಪುತಿನ ಕಂಡಂತೆ ಮಹಾತ್ಮ ಗಾಂಧಿ

By Web DeskFirst Published Oct 2, 2018, 10:20 AM IST
Highlights

'ಗೋಕುಲ ನಿರ್ಗಮನ' ಖ್ಯಾತಿಯ ಪು.ತಿ.ನರಸಿಂಹಚಾರ ಕವನದ ಮೂಲಕ ಮಹಾತ್ಮ ಗಾಂಧಿಯನ್ನು ಸೃಷ್ಟಿಸಿದ್ದು ಹೀಗೆ...

ನೆರಳು

- ಪು.ತಿ. ನರಸಿಂಹಾಚಾರ್
ಮೇಲೊಂದು ಗರುಡ
ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ.

ನೆಲನೆಲದಿ ಮನೆ ಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡಗುಲ್ಮ ತೆವರು ತಿಟ್ಟು
ಎನ್ನದಿದಕೊಂದು ನಿಟ್ಟು .
ಗಾಳಿ ಬೆರಗಿದರ ನೆಲದೊಳೋಟ!
ವೇಗಕಡ್ಡಬಹುದಾವ ಹೂಟ?
ಸಿಕ್ಕು ದಣಿವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.
ಇದ ನೋಡಿ ನಾನು ನೆನೆವೆನಿಂದು-
ಇಂಥ ನೆಳಲೇನು ಗಾಂಧಿಯೆಂದು!
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.

 

ರಕ್ತ, ಮಾಂಸ, ಎಲುಬುಗಳಿಂದ ಕೂಡಿದ ಇಂಥ ಒಬ್ಬ ಜೀವಂತ ವ್ಯಕ್ತಿ ನೆಲದ ಮೇಲೆ ನಡೆದಾಡಿದ್ದ ಎಂದು ಹೇಳಿದರೆ, ಮುಂದಿನ ಪೀಳಿಗೆ ನಂಬಲಿಕ್ಕಿಲ್ಲ. 
- ಗಾಂಧೀಜಿ ಬಗ್ಗೆ ಐನ್‌ಸ್ಟೈನ್

click me!