ಕೋಲಾರ: ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

Published : Nov 15, 2019, 02:34 PM IST
ಕೋಲಾರ: ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ

ಸಾರಾಂಶ

ಕೋಲಾರದಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿ ಹಲ್ಲೆ ನಡೆದಿದ್ದು, ವೈಯಕ್ತಿಕ ದ್ವೇಷ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ.

ಕೋಲಾರ(ನ.15): ಕೋಲಾರದಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿ ಹಲ್ಲೆ ನಡೆದಿದ್ದು, ವೈಯಕ್ತಿಕ ದ್ವೇಷ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ.

ಒಂದೇ ಕುಟುಂಬದ ಮೂರು ಜನರ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿ ಹಲ್ಲೆ ನಡೆದಿದ್ದು, ಪೊಲೀಸರು ಓರ್ವ ಆರೋಪಿ ರಾಜಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನೇ ಕೊಂದ ಮಾವ..!

ನಿನ್ನೆ ವೈಯಕ್ತಿಕ ದ್ವೇಷದ ಹಿನ್ನೆಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ರಜನಿ, ಮುರುಗನ್, ಕಮಲ್ ಎಂಬವರು ಹಲ್ಲೆಗೊಳಗಾಗಿದ್ದಾರೆ. ಸಹೋದರರ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಎದುರಾಳಿಯಾಗಿ ಕೆಲಸ ಮಾಡಿದಕ್ಕಾಗಿ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ದುಷ್ಕರ್ಮಿಗಳು ರಜನಿ ಎಂಬುವವನ ಕೈ ತುಂಡರಿಸಿದ್ದು, ರಜನಿ ಅವರ ಅಣ್ಣ ರಾಜಕುಮಾರ್ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ. ಇಬ್ಬರು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.ಸಹೋದರರನ್ನು ಕೆಜಿಎಫ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆಜಿಎಫ್ ನ ಎಸ್ಪಿ ಮೊಹಮದ್ ಸೂಜಿತಾ ಭೇಟಿ ನೀಡಿದ್ದಾರೆ.

ಪ್ರೇಮ ವಿವಾಹವಾಗಿದ್ದ ನವ ವರನನ್ನು ಕೊಲೆ ಮಾಡಿ ನದಿಗೆಸೆದ್ರು..!

PREV
click me!

Recommended Stories

ಗಗನಕ್ಕೇರಿದ ಟೊಮೆಟೊ ದರ, ಕೋಲಾರದ ಗೂದೆ ಹಣ್ಣಿಗೆ ದೇಶದಾದ್ಯಂತ ಇನ್ನಿಲ್ಲದ ಬೇಡಿಕೆ!
Kolar Road Accident: ಬ್ರಿಡ್ಜ್‌ನಿಂದ ಕೆಳಗೆ ಬಿದ್ದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು!