ಆಲೂ, ಟೊಮೆಟೋಗೆ ಅಂಗಮಾರಿ ರೋಗ, ಬೆಳೆ ನಾಶ

By Kannadaprabha News  |  First Published Nov 8, 2019, 12:24 PM IST

ಕೋಲಾರದಲ್ಲಿ ಟೊಮೆಟೋ ಹಾಗೂ ಆಲೂ ಬೆಳೆಗೆ ಅಂಗಮಾರಿ ರೋಗ ಬಾಧಿಸಿದ್ದು, ಕೈಗೆ ಬರುವ ಮುನ್ನವೇ ಬೆಳೆ ಮಣ್ಣು ಪಾಲಾಗುತ್ತಿದೆ. ಕಾಯಿಗಳು ಬಲಿತು ಹಣ್ಣಾಗುವ ಮುನ್ನವೇ ಉದುರಿ ನೆಲ ಸೇರುತ್ತಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.


ಕೋಲಾರ(ನ.08): ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಮತ್ತು ಟೊಮೆಟೋ ಬೆಳೆಗೆ ಅಂಗಮಾರಿ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಟೊಮೆಟೋ ಮತ್ತು ಆಲೂಗಡ್ಡೆ ಬೆಳೆಗಳು ರೈತರ ವಾಣಿಜ್ಯ ಬೆಳೆಗಳು ಈ ಎರಡೂ ಬೆಳೆಗಳಿಂದಲೇ ರೈತರಿಗೆ ಅಷ್ಟೋ ಇಷ್ಟೋ ಹಣ ಕೈಗೆ ಸೇರುತ್ತಿತ್ತು. ಆದರೆ ಈ ಎರಡೂ ಬೆಳೆಗಳಿಗೆ ರೋಗ ತಗುಲಿರುವುದರಿಂದ ರೈತರು ಪರದಾಡುತ್ತಿದ್ದಾರೆ.

Tap to resize

Latest Videos

9 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ:

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ 200 ಕೋಟಿಗೂ ಹೆಚ್ಚು ಟೊಮೆಟೊ ವಹಿವಾಟು ನಡೆಯತ್ತದೆ. ಜಿಲ್ಲೆಯಿಂದ ರಾಜಸ್ಥಾನ, ಕೇರಳ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ, ಜಾಖರ್ಂಡ್, ಒಡಿಶಾ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್, ಮಹಾರಾಷಟ್ರೆಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾ ದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ರಫ್ತಾಗುತ್ತದೆ.

ರೋಗಕ್ಕೆ ತೇವಾಂಶ ಹೆಚ್ಚಳ ಕಾರಣ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹಿಂಗಾರು ಹಂಗಾಮಿನಲ್ಲಿ ೧೫ ದಿನಗಳು ಮೋಡ ಮುಸುಕಿದ ವಾತಾವರಣ ಇದ್ದುದರಿಂದ, ಆಗಾಗ್ಗೆ ತುಂತುರು ಮಳೆಯಾಗುತ್ತಿತ್ತು. ಹೀಗಾಗಿ ವಾತಾ ವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಟೊಮೆಟೊ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಬಹುತೇಕ ತಾಲೂಕುಗಳಲ್ಲಿ ಟೊಮೆಟೊ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗ ಮಾರಿ ರೋಗಬಾತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ.

ಆಲೂ, ದಪ್ಪ ಮೆಣಸಿಗೂ ರೋಗ:

ಟೊಮೆಟೊ ಜತೆಗೆ ಆಲೂಗಡ್ಡೆ ಹಾಗೂ ದಪ್ಪ ಮೆಣಸಿನಕಾಯಿ ಬೆಳೆಗೂ ಅಂಗಮಾರಿ ರೋಗ ತಗುಲಿದೆ. ಅಂಗಮಾರಿ ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಎಲೆಗಳನ್ನು ತಿನ್ನು ತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ. ಅಕ್ಟೋಬರ್ ಆರಂಭದಲ್ಲಿ ಊಜಿ ನೊಣದ ಹಾವಳಿ ಯಿಂದ ಸಾಕಷ್ಟು ಬೆಳೆ ನಾಶವಾಗಿ ನಷ್ಟ ಅನುಭವಿಸಿದ್ದ ಟೊಮೆಟೊ ಬೆಳೆಗಾರರಿಗೆ ಇದೀಗ ಅಂಗಮಾರಿ ರೋಗ ದೊಡ್ಡ ಪೆಟ್ಟು ಕೊಟ್ಟಿದೆ. ರೈತರು ಬೆಳೆಗೆ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರು ತ್ತಿಲ್ಲ. ಕೀಟನಾಶಕ ಸಿಂಪಡಿಸಿ ನಾಲ್ಕೈದು ದಿನ ಕಳೆಯು ವಷ್ಟರಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೊ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಮೋಡ ಮುಸುಕಿದ ವಾತಾವರಣ ಹಾಗೂ ಜಡಿ ಮಳೆ ಮುಂದು ವರಿದರೆ ಅಂಗಮಾರಿ ರೋಗ ಮತ್ತಷ್ಟು ಉಲ್ಬಣಗೊಂಡು ಟೊಮೆ ಟೊ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.

ಬೆಳೆ ನಷ್ಟ:

ಆಲೂಡ್ಡೆ ಬೆಳೆ ಪರಿಸ್ತಿತಿಯೂ ಇದೇ ರೀತಿ ಇದೆ,ರೈತರ ಸಾಕಷ್ಟು ಆಲುಗಡ್ಡೆ ಬೆಳೆಗಳು ಹಾಳಾಗಿವೆ. ಜಿಲ್ಲೆಯಲ್ಲಿ ಸೆಪ್ಟಂಬರ್‌ನಿಂದ ಡಿಸೆಂಬರ್ ವರೆಗೆ ಆಲೂ ಗಡ್ಡೆಯನ್ನು ಬೆಳೆಯುತ್ತಾರೆ ಆದರೆ ಹೆಚ್ಚಿನ ರೈತರು ಸೆಪ್ಟಂಬರ್ ತಿಂಗಳಲ್ಲ ಬಿತ್ತನೆ ಮಾಡುತ್ತಾರೆ, ಈ ಅವಧಿ ಯಲ್ಲಿ ಬಿತ್ತನೆ ಮಾಡಿದರೆ ಹೆಚ್ಚು ಬೆಲೆ ಸಿಗುತ್ತದೆ ಎನ್ನುವ ನಿರೀಕ್ಷೆ ರೈತರದು. ಆದರೆ ಬೆಳೆಗೆ ರೋಗ ತಗುಲಿರು ವುದರಿಂದ ರೈತರಲ್ಲೂ ನಿರಾಶೆ ಕವಿದಿದೆ. 

ACB ದಾಳಿ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆ ಇಲ್ಲದ ಲಕ್ಷ ಲಕ್ಷ ಹಣ..!

click me!