ಕೋಲಾರದಿಂದ 250 ಟನ್ ಮಾವು ಹೊತ್ತು ದೆಹಲಿಗೆ ತೆರಳಿದ ಕರ್ನಾಟಕದ ಮೊದಲ ಕಿಸಾನ್ ರೈಲು!

By Suvarna News  |  First Published Jun 19, 2021, 7:26 PM IST
  • ಕರ್ನಾಟಕದ ಮೊದಲ ಕಿಸಾನ್ ರೈಲಿಗೆ ಚಾಲನೆ
  • ಕೋಲಾರದಿಂದ ರಸಭರಿತ ಮಾವು ಹೊತ್ತು ಸಾಗಿದ ರೈಲು
  • ಕೋಲಾರದ ಮಾವಿಗೆ ದೆಹಲಿಯಲ್ಲಿ ಭಾರಿ ಬೇಡಿಕೆ

 ಕೋಲಾರ(ಜೂ.19):  ಕರ್ನಾಟಕದ ಮೊದಲ ಕಿಸಾನ್ ರೈಲು ಕಾರ್ಯರಂಭಿಸಿದೆ. ದೇಶದ ವಿವಿಧ ಮೂಲೆಗಳಿಗೆ, ವಿದೇಶಗಳಿಗೆ ರೈತರ ಉತ್ಪನ್ನಗಳನ್ನು ಸುಲಭವಾಗಿ ಸಾಗಿಸಲು ಕಿಸಾನ್ ರೈಲು ಬಳಕೆ ಮಾಡಲಾಗುತ್ತಿದೆ. ಇದೀಗ ಕೋಲಾರದಿಂದ 250 ಟನ್ ಮಾವಿನ ಹಣ್ಣನ್ನು ಹೊತ್ತ ಕಿಸಾನ್ ರೈಲು ದೆಹಲಿಯತ್ತ ಸಾಗಿದೆ.

Latest Videos

undefined

ಗಂಡನ ಜೊತೆ ಮಾವಿನ ಮರ ಹತ್ತಿದ ಅಮೂಲ್ಯ

ಕೋಲಾರದ ರಸಭರಿತ ಮಾವಿನ ಹಣ್ಣಿಗೆ ಬಾರಿ ಬೇಡಿಕೆ ಇದೆ. ಇದೀಗ ಕೋಲಾರದಿಂದ ನೇರವಾಗಿ ದೆಹಲಿಗೆ ಮಾವಿನ ಹಣ್ಣಿನ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದಕ್ಕೆ ಪ್ರಮುಕ ಕಾರಣ ಕಿಸಾನ್ ರೈಲು.

ಕೋಲಾರದ ದೊಡ್ಡನತ್ತ ರೈಲು ನಿಲ್ದಾಣದಲ್ಲಿ ರೈಲಿಗೆ 250 ಟನ್ ಮಾವಿನ ಹಣ್ಣುಗಳನ್ನು ತುಂಬಲಾಗಿದೆ. ಬಾಕ್ಸ್‌ನಲ್ಲಿ ತುಂಬಿದ ಹಣ್ಣುಗಳನ್ನು ತುಂಬಿಕೊಂಡ ಕರ್ನಾಟಕ ಕಿಸಾನ್ ರೈಲು ದೆಹೆಲಿದೆ ತೆರಳಿದೆ. ಇದರಿಂದ ದೇಶದ ರೈತನ ಉತ್ಪನ್ನಗಳಿಗೆ ಬೇಡಿಕೆ ಹಾಗೂ ಸೂಕ್ತ ಬೆಲೆಗೆ ಸಿಗಲಿದೆ.

ದೆಹಲಿಯ ಆದರ್ಶನಗರಕ್ಕೆ ತಲುಪಲಿರುವ ಈ ಮಾವಿನ ಹಣ್ಣುಗಳು ಬಳಿಕ ಮಾರುಕಟ್ಟೆ ಮೂಲಕ ವ್ಯಾಪಾರ ವಹಿವಾಟು ನಡೆಯಲಿದೆ. 

click me!