ಹಿಜಾಬ್ ಆಯ್ತು, ಹಲಾಲ್ - ಝಟ್ಕಾ ಕಟ್ ಆಯ್ತು ಇದೀಗ ಮಾವು ಕಟ್ ಶುರುವಾಗಿದೆ. ಹಿಂದೂಗಳು ಹಿಂದೂಗಳ ಬಳಿಯೇ ಮಾವು ಮಾರಾಟ ಮಾಡ್ಬೇಕು ಅನ್ನೋದು ಶುರುವಾಗಿದೆ. ಆದ್ರೆ ಕೋಲಾರದಲ್ಲಿ ಇದರ ಕತೆಯೇ ಬೇರೆಯಾಗಿದೆ.
ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ (ಎ.5): ರಾಜ್ಯದಲ್ಲಿ ಒಂದಿಲ್ಲೊಂದು ವಿವಾದ ಆರಂಭವಾಗ್ತಿದೆ. ಹಿಜಾಬ್ ಆಯ್ತು, ಹಲಾಲ್ - ಝಟ್ಕಾ ಕಟ್ ಆಯ್ತು ಇದೀಗ ಮಾವು ಕಟ್ ಶುರುವಾಗಿದೆ. ಹಿಂದೂಗಳು ಹಿಂದೂಗಳ ಬಳಿಯೇ ಮಾವು ಮಾರಾಟ ಮಾಡ್ಬೇಕು ಅನ್ನೋದು ಶುರುವಾಗಿದೆ. ಆದ್ರೇ ವಿಶ್ವ ವಿಖ್ಯಾತ ಮಾವಿನ ನಗರಿ ಅಂತಾನೆ ಹೆಸರುವಾಸಿ ಆಗಿರುವ ಕಥೇನೆ ಬೇರೆ. ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ.
ಇನ್ನೇನು ಮುಂದಿನ ತಿಂಗಳಿನಿಂದ ಹಣ್ಣುಗಳ ರಾಜ ಮಾವಿನ ಸೀಸನ್ ಶುರುವಾಗ್ತಿದೆ. ಮಾವು ಪ್ರಿಯರು ಪ್ರತಿ ವರ್ಷಕೊಮ್ಮೆ ಬರುವ ತಮ್ಮಿಷ್ಟ ಮಾವನ್ನು ಸವಿದು,ಚಪ್ಪರಿಸಿ ತಮ್ಮ ಆಸೆ ಪೂರೈಸಿಕೊಳ್ತಾರೆ. ಅದರಲ್ಲೂ ವಿಶ್ವ ವಿಖ್ಯಾತಿ ಮಾವಿನ ನಗರಿ ಅಂತಾನೆ ಹೆಗ್ಗಳಿಕೆ ಪಡೆದಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾವಿನ ಹಣ್ಣು ಅಂದ್ರೆ ಸಾಕು ದೇಶ ವಿದೇಶಗಳಲ್ಲೂ ಹೆಸರುವಾಸಿ.ನಾನಾ ಬಗೆಯ ತರಹೆವಾರಿ ಮಾವನ್ನು ರೈತರು ಬೆಳೆದು ಶ್ರೀನಿವಾಸಪುರದ ಮಾವಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಜನರಿಗೆ ಮಾವಿನ ರುಚಿ ಹಂಚುತ್ತಿದ್ದಾರೆ. ಇನ್ನೂ ಇಲ್ಲಿ ಶೇಕಡ 80 ರಷ್ಟೂ ಹಿಂದೂ ಧರ್ಮಕ್ಕೆ ಸೇರಿರುವ ರೈತರೇ ಮಾವು ಬೆಳೆದು ಮಾರಟ ಮಾಡ್ತಿದ್ದು ರೈತರಿಂದ ಕೊಂಡುಕೊಳ್ಳುವ ಮಂಡಿ ಮಾಲೀಕರ ಪೈಕಿ ಶೇ 80 ರಷ್ಟು ಜನ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ.
ಇದುವರೆಗೂ ಇಲ್ಲಿ ಹಿಂದೂ ಮುಸ್ಲಿಂ ಅನ್ನೋ ಬೇದಬಾವವಿಲ್ಲದೆ ವ್ಯಾಪಾರ ವಹಿವಾಟು ನಡೆಯುತ್ತಿರುವ ಶ್ರೀನಿವಾಸಪುರದ ಮಾವು ಮಾರುಕಟ್ಟೆಯಲ್ಲಿ ಈಗಲೂ ಅದೇ ಒಗ್ಗಟಿನಲ್ಲಿದಾರೆ.ಹಾಸನ ಜಿಲ್ಲೆಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿರುವವರ ಬಳಿ ಮಾಡಿ ಎಂದು ಈಗಾಗಲೇ ವಿವಾದ ಆರಂಭವಾಗಿದ್ರು ಸಹ ಕೋಲಾರದಲ್ಲಿ ಮಾತ್ರ ಇದುವರೆಗೂ ಆ ರೀತಿಯ ಹೇಳಿಕೆ ಆಗಲಿ, ತೀರ್ಮಾನವಾಗಲಿ ಎಲ್ಲೂ ಕಂಡು ಬರದೇ ಇರೋದು ಸಂತೋಷದ ವಿಚಾರ.
ಪೊಲೀಸ್ ಮೇಲಾಧಿಕಾರಿಗಳ ಮನೆ ಸೇವೆ ಮಾಡುವ ಆರ್ಡರ್ಲಿ ಪದ್ಧತಿ ಬೇಡ, ಉಡುಪಿಯಿಂದ ಅಭಿಯಾನ
ಇನ್ನು ಶ್ರೀನಿವಾಸಪುರ ಮಾವಿನ ಮಾರುಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಮೊದಲಿನಿಂದಲೂ ಇಲ್ಲಿ ಮುಸ್ಲಿಂ ಸಮುದಾಯದವ್ರೇ ಹೆಚ್ಚಿನ ಮಂಡಿಗಳ ಮಾಲೀಕರಾಗಿದ್ದಾರೆ. ಸದ್ಯ ಈಗ 140 ಮಂಡಿಗಳು ಇದ್ದು ಇದರಲ್ಲಿ 30 ಮಂಡಿಗಳು ಹಿಂದೂ ಧರ್ಮಕ್ಕೆ ಸೇರಿದೆ. ಇನ್ನೂ ಮಾವು ಬೆಳೆಗಾರರು ಮಂಡಿ ಮಾಲೀಕರಿಂದ ಕಷ್ಟಕ್ಕೆ, ಮದುವೆ ಮುಂಜಿಗೆ ಅಂತಾ ಲಕ್ಷಾಂತರ ರುಪಾಯಿ ಮುಂಗಡ ಹಣ ಸಹ ಪಡೆದುಕೊಂಡಿರುತ್ತಾರೆ.
ಪ್ರತಿ ವರ್ಷ ಬರುವ ಮಾವಿನ ಫಸಲು ಮುಂಗಡ ಹಣವನ್ನು ಪಡೆದುಕೊಂಡಿರುವ ಮಂಡಿಗೆ ಮಾರಾಟ ಮಾಡುವ ಪದ್ದತಿ ರೂಢಿಯಲ್ಲಿದೆ. ಈಗಾಗಿ ದಿಢೀರನೆ ಹಿಂದೂ ಮಾಲೀಕರ ಬಳಿಯೇ ವ್ಯಾಪಾರ ಮಾಡಬೇಕು ಅಂತಾನೆ ನಿರ್ಧಾರ ಮಾಡಿದ್ರೆ ಕಷ್ಟ ಆಗಲಿದೆ, ಯಾಕಂದ್ರೆ ಮಾವಿನ ಸೀಸನ್ ನಲ್ಲಿ ಪ್ರತಿ ದಿನಕ್ಕೆ ಸಾವಿರಾರು ಟನ್ ನಷ್ಟು ಮಾವು ಮಾರುಕಟ್ಟೆಗೆ ಬರುತ್ತೆ, ಹೆಚ್ಚಿನ ದಿನ ಶೇಖರಣೆ ಮಾಡದೇ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಗೆ ರಫ್ತು ಮಾಡುವ ಅನಿವಾರ್ಯತೆ ಮಂಡಿ ಮಾಲೀಕರಿಗಿದೆ. ಈಗಾಗಿ ಅಷ್ಟೋಂದು ಪ್ರಮಾಣದ ಮಾವನ್ನೂ ದಿಡೀರನೇ ಮಾರಟ ಮಾಡಲು ಕಷ್ವಾಗುತ್ತೆ, ಕೋಟ್ಯಾಂತರ ರುಪಾಯಿ ಬಂಡವಾಳ ಸಹ ಹೂಡಿಕೆ ಮಾಡಬೇಕು ಅಂತಾರೆ ಮಂಡಿ ಮಾಲೀಕರು.
Dharwad ಅಂತರ್ಜಾತಿ ಪ್ರೀತಿಗೆ ಮನೆಯವರು ಒಪ್ಪಲಿಲ್ಲವೆಂದು ಪ್ರೇಮಿಗಳ ಆತ್ಮಹತ್ಯೆ
ಇನ್ನೂ ಈ ಬಗ್ಗೆ ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನಾವು ಈ ವಿಚಾರವನ್ನು ಸ್ವಾಗತ ಮಾಡ್ತೇವೆ,ಆದ್ರೇ ಇದು ಜಾತಿ ಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಅಲ್ಲ. ಹಿಂದೂ ಹಾಗೂ ಮುಸ್ಲಿಂ ಸಮುದಾಯಲ್ಲಿ ರೈತರಿದ್ದಾರೆ. ಹಿಂದೂ ಸಮುದಾಯದವ್ರೂ ಹೆಚ್ಚಿನ ಮಂಡಿಗಳನ್ನು ತೆರೆದು ವ್ಯಾಪಾರ ಮಾಡ್ತೇವೆ ಅಂದರೆ ನಾವು ಬೆಂಬಲ ನೀಡ್ತೇವೆ. ರೈತರಿಗೆ ಹೆಚ್ಚಿನ ಲಾಭ ಬರುವ ರೀತಿ ವ್ಯಾಪಾರ ಮಾಡ್ತೇವೆ ಅಂದ್ರೆ ನಾವು ಮುಂದೆ ನಿಂತು ಬೆಂಬಲ ನೀಡ್ತೇವೆ. ಆದ್ರೆ ಮುಸ್ಲಿಂರಿಗೆ ಮಾರಾಟ ಮಾಡಬೇಡಿ ಎಂದು ವಿಷ ಬೀಜ ಬಿತ್ತದೆ ಒಳ್ಳೇಯ ರೀತಿ ವ್ಯಾಪಾರ ವಹಿವಾಟು ನಡೆಸಬೇಕು ಅಂತ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಒಟ್ನಲ್ಲಿ ವಿಶ್ವ ವಿಖ್ಯಾತ ಮಾವಿನ ತವರು ಅಂತಾನೆ ಹೆಸರುವಾಸಿ ಆಗಿರುವ ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿ ಸದ್ಯ ಒಗ್ಗಟ್ಟಾಗಿದ್ದಾರೆ. ಮುಂದಿನ ದಿನಗಳಲ್ಲೂ ಯಾವುದೇ ಕೋಮುಗಲಭೆ ಉಂಟಾಗದೇ ಎಲ್ಲರೂ ಒಗ್ಗಟಾಗಿ ಇರಲಿ ಅನ್ನೋದು ನಮ್ಮ ಆಶಯ ಕೂಡ.