ಕೋಲಾರ: ಮಳೆ ಬಂದಾಗಲೆಲ್ಲ ನಾಡ ಕಚೇರಿ ಬಂದ್..!

By Kannadaprabha NewsFirst Published Nov 2, 2019, 2:56 PM IST
Highlights

ಎಲ್ಲ ಸರ್ಕಾರ ಕಚೇರಿಗಳಿಗೆ ವಿಶೇಷ ದಿನ, ಸರ್ಕಾರಿ ಹಾಲಿಡೇ ಮಾತ್ರ ಸಿಕ್ಕಿದ್ರೆ ಕೆಜಿಎಫ್‌ನ ನಾಡಕಚೇರಿಯಲ್ಲಿ ಮಳೆ ಬಂದಾಗಲೆಲ್ಲಾ ಅಧಿಕಾರಿಗಳಿಗೆ ರಜೆ. ಸ್ವಲ್ಪ ಮಳೆ ಬಂದರೂ ಅಂದು ನಾಡ ಕಚೇರಿಗೆ ರಜೆ ಇರುತ್ತದೆ. ದಶಕಗಳ ಹಿಂದೆ ನಿರ್ಮಿಸಿದ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ಸಣ್ಣ ಮಳೆಗೂ ಸೂರು ಸೋರುತ್ತಿದೆ.

ಕೋಲಾರ(ನ.02): ದಶಕಗಳ ಹಿಂದೆ ನಿರ್ಮಿಸಿರುವ ಕಟ್ಟಡ ದಲ್ಲಿ ನಾಡ ಕಚೇರಿ ನಡೆಯುತ್ತಿದ್ದು, ಮಳೆ ಬಂದರೆ ಎಲ್ಲಾ ಕೆಲಸ ಕಾರ್ಯಕ್ಕೆ ರಜೆ ನೀಡುವಂತಹ ಪರಿಸ್ಥಿತಿ ನಿರ್ಮಾವಾಗಿರು ವುದು ಸಾರ್ವಜನಿಕರಿಂದ ಆಕ್ರೋಶಕ್ಕೆ ಕಾರಣವಾಗಿದೆ.

ಕೆಜಿಎಫ್ ಬೇತಮಂಗಲ ಗ್ರಾಮದಲ್ಲಿರುವ ನಾಡ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಿ ಹಲವು ದಶಕಗಳೇ ಉರುಳಿವೆ. ಈ ಕಟ್ಟಡದಲ್ಲಿ ಸುಮಾರು ವರ್ಷಗಳಿಂದ ನಾಡ ಕಚೇರಿಯನ್ನು ನಡೆಸಲಾಗುತ್ತಿದೆ, ಆದರೆ ಎರಡು ದಿನಗಳಿಂದ ಸುರಿಯು ತ್ತಿರುವ ಮಳೆಯಿಂದ ಕೊಠಡಿಯು ಸಂಪೂರ್ಣವಾಗಿ ಸೋರುತ್ತಿರುವುದ ರಿಂದ ಗ್ರಾಮಸ್ಥರ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.

ಕಚೇರಿಯಲ್ಲಿ ಮಳೆ ನೀರು:

ಈ ನಾಡ ಕಚೇರಿಯಿಂದ ಪ್ರತಿನಿತ್ಯ ರೈತರು ಪಹಣಿ, ಶಾಲಾ ಮಕ್ಕಳ ದಾಖಲೆಗಳು, ಆಧಾರ, ಪಂಡಿತರ ಚೀಟಿ ಸೇರಿದಂತೆ ಇತರೆ ದಾಖ ಲೆಗಳಿಗಾಗಿ ನಿತ್ಯ ನೂರಾರು ಮಂದಿ ದಾಖಲೆಗಳನ್ನು ಪಡೆಯಲಾಗುತ್ತದೆ, ಇಂದು ಮನೆಯಿಂದ ಕೊಠಡಿಯ ಚಾವಣಿ ಯಿಂದ ಮಳೆ ನೀರು ಸೋರುತ್ತೀರುವುದ ರಿಂದ ಎಲ್ಲಾ ಗಣಕ ಯಂತ್ರಗಳಿಗೆ ಟಾರ್ಪಲ್ ಹಾಗಿ ಮಳೆ ನೀರಿನಿಂದ ಭದ್ರ ಪಡಿಸಲಾಯಿತ್ತು. ತಾಲೂಕು ಮತ್ತು ಜಿಲ್ಲಾ ದಂಡಾಧಿ ಕಾರಿಗಳು ಇತ್ತ ಕಡೆ ಗಮನಹರಿಸಿ ಇಲ್ಲಿನ ಸಮಸ್ಯೆಯನ್ನು ಬಗ್ಗೆ ಹರಿಸಿ ಅಉಕೂಲ ಕಲ್ಪಿಸುವಂತೆ ಸಾರ್ವ ಜನಿಕರು ಒತ್ತಾಯಿಸಿದ್ದಾರೆ.

ಕೋಲಾರ: ಸಿಎಂ ಹಿಂದಿಯ ಗುಲಾಮ ಎಂದ ಕರವೇ..!

click me!