ಕೊಲಾರ: ಹಣ ವಂಚನೆ, ಕಂಪನಿಗೆ ನುಗ್ಗಿ ಮಾಲೀಕನಿಗೆ ಥಳಿಸಿದ ಜನರು..!

Published : Apr 29, 2019, 07:48 PM IST
ಕೊಲಾರ: ಹಣ ವಂಚನೆ, ಕಂಪನಿಗೆ ನುಗ್ಗಿ ಮಾಲೀಕನಿಗೆ ಥಳಿಸಿದ ಜನರು..!

ಸಾರಾಂಶ

ಕೊಲಾರದಲ್ಲಿ ಹಣ ವಂಚನೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ರೊಚ್ಚಗೆದ್ದ ಜನರು ಕಂಪನಿಗೆ ನುಗ್ಗಿ ಮಾಲೀಕನಿಗೆ ಭರ್ಜರಿ ಗೂಸಾ ಕೊಟ್ಟಿದ್ದಾರೆ.

ಕೋಲಾರ, [ಏ.29]: ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹೆಸರಿನ ಕಂಪನಿ ಹಣ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಮೋಸ ಹೋದ ಜನರು ಕಛೇರಿಗೆ ಮುತ್ತಿಗೆ ಹಾಕಿ, ಕಂಪನಿ ಮಾಲೀಕನಿಗೆ ಥಳಿಸಿದ ಘಟನೆ ನಡೆದಿದೆ. 

ತಿರುಮಲ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ಲಿಮಿಟೆಡ್ ಎಂಬ ಹೆಸರಿನ ಕಂಪನಿ, ಚೀಟಿ ವ್ಯವಹಾರ, ಹಣ ಡೆಪಾಸಿಟ್, ಲಾಟರಿ ಚೀಟಿ ಹಣ ಪಡೆದು ಒಂದುವರೆ ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. 

ಕೋಲಾರ ನಗರ ಹೊರವಲಯದಲ್ಲಿ ಈ ಕಂಪನಿ ಕಛೇರಿ ಇದ್ದು. ವೇಮಗಲ್ ಹೋಬಳಿಯ ನೂರಾರು ಜನರಿಗೆ ಹಣ ನೀಡದೇ ಈ ಕಂಪನಿ ವಂಚಿಸಿದೆ ಎನ್ನಲಾಗಿದೆ. 

ಹೀಗಾಗಿ ಮೋಸ ಹೋದ ವೇಮಗಲ್ ನಿವಾಸಿಗಳು, ಇಂದು ಕಚೇರಿಗೆ ನುಗ್ಗಿ ಕಂಪನಿ ಮಾಲಿಕ ಶ್ರೀನಿವಾಸ್‌ಗೆ ಥಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

PREV
click me!

Recommended Stories

ಗಗನಕ್ಕೇರಿದ ಟೊಮೆಟೊ ದರ, ಕೋಲಾರದ ಗೂದೆ ಹಣ್ಣಿಗೆ ದೇಶದಾದ್ಯಂತ ಇನ್ನಿಲ್ಲದ ಬೇಡಿಕೆ!
Kolar Road Accident: ಬ್ರಿಡ್ಜ್‌ನಿಂದ ಕೆಳಗೆ ಬಿದ್ದ ಕಾರು, ನಾಲ್ವರು ಯುವಕರು ಸ್ಥಳದಲ್ಲೇ ಸಾವು!