ಕೆಜಿಎಫ್‌ನಲ್ಲಿ 2 ತಾಸಲ್ಲಿ 2 ಬಾರಿ ನಡುಗಿದ ಭೂಮಿ

By Web DeskFirst Published Jan 24, 2019, 10:51 AM IST
Highlights

ಕೆಜಿಎಫ್‌ ನಗರದಲ್ಲಿ ಎರಡು ಬಾರಿ ಭೂಮಿ ನಡುಗಿದ ಅನುಭವ ಮಂಗಳವಾರ ರಾತ್ರಿ ಆಗಿದೆ. ಚಿನ್ನದ ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯವಾಗಿದ್ದ ಭೂ ಕಂಪನ ಅಥವಾ ಭೂ ನಡುಕ ಚಿನ್ನದ ಗಣಿ ಮುಚ್ಚಿದ ಮೇಲೆ ಕಡಿಮೆಯಾಗಿತ್ತು. ಆದರೆ ಮತ್ತೆ ಇದೀಗ ಕಂಪನ ಅನುಭವವಾಗಿದೆ.  

ಕೆಜಿಎಫ್‌: ಅನೇಕ ವರ್ಷಗಳ ನಂತರ ಕೆಜಿಎಫ್‌ ನಗರದಲ್ಲಿ ಎರಡು ಬಾರಿ ಭೂಮಿ ನಡುಗಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

ಚಿನ್ನದ ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯವಾಗಿದ್ದ ಭೂ ಕಂಪನ ಅಥವಾ ಭೂ ನಡುಕ ಚಿನ್ನದ ಗಣಿ ಮುಚ್ಚಿದ ಮೇಲೆ ಕಡಿಮೆಯಾಗಿತ್ತು. ಆದರೆ, ಈಗ ಮಂಗಳವಾರ ರಾತ್ರಿ 8.50 ಮತ್ತು 11ರ ಸಮಯದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. 

‘ರಾಕ್‌ ಬಸ್ಟ್‌ರ್’ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಕ್ರಿಯೆ ಚಿನ್ನದ ಗಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಲ್ಲುಗಳ ಸ್ಥಾನ ಪಲ್ಲಟದಿಂದ ಹೆಚ್ಚಾಗಿತ್ತು. ಗಣಿ ಮುಚ್ಚಿದ ಮೇಲೆ ಈ ರೀತಿಯ ಶಬ್ದ ಕಡಿಮೆಯಾಗಿತ್ತು. 

ಇತ್ತೀಚಿನ ದಿನಗಳಲ್ಲಿ ಭೂ ಕಂಪನ ಅನುಭವವೇ ಜನತೆಗೆ ಆಗಿರಲಿಲ್ಲ. ಈ ರೀತಿಯ ಕಂಪನವನ್ನು ಜನ ಮರೆತೇ ಬಿಟ್ಟಿದ್ದರು. ಈಗ ಮತ್ತೆ ಅದೇ ರೀತಿಯ ಕಂಪನ ಆಗಿದ್ದು, ಭೂ ಕಂಪನದಿಂದ ಯಾವುದೇ ಅನಾಹುತವಾಗಿಲ್ಲ. ಜನತೆ ಭಯಭೀತರಾಗಲೂ ಇಲ್ಲ.

click me!