ಚಿತ್ತೂರು ಜಿಲ್ಲೆಯಲ್ಲಿ 3.5 ಕೆಜಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ನಗರಸಭೆಯ ಸದಸ್ಯ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರು ಚಿನ್ನವನ್ನು ಕೆಜಿಎಫ್‌ನಲ್ಲಿ ಮಾರಾಟ ಮಾಡಲು ತರುತ್ತಿದ್ದಾಗ ದರೋಡೆ ನಡೆಸಿದ್ದಾರೆ.
ಚಿತ್ತೂರು: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿಕೋಟ ಮಂಡಲ ವ್ಯಾಪ್ತಿಯ ನಾಯಕನರಿ ಬಳಿ ನಡೆದ 3 ಕೋಟಿ ರೂಪಾಯಿಗಳ ಬೆಲೆ ಬಾಳುವ 3.5 ಕೆ.ಜಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ನಗರಸಭೆಯ ಕಾಂಗ್ರೆಸ್ ಸದಸ್ಯ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಯಪಾಲ್ ಹಾಗೂ ಇತರೆ ಮೂವರನ್ನು ವಿಕೋಟ ಪೊಲೀಸ್‌ರು ಶುಕ್ರವಾರ ರಾತ್ರಿ ಬಂಧಿಸಿ, 3.5 ಕೆಜಿ ಚಿನ್ನವನ್ನು ವಶಪಡಿಸಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಏನಿದು ಪ್ರಕರಣ:
ಅಂಡ್ರಸನ್‌ಪೇಟೆಯ ಚಿನ್ನದ ವ್ಯಾಪರಿ ದೀಪಕ್ ಜೈನ್ ಎಂಬುವವರು ಬುಧವಾರ ರಾತ್ರಿ ಚೈನೈನಿಂದ 3.5 ಕೆ.ಜಿ ಚಿನ್ನವನ್ನು ಕೆಜಿಎಫ್ ನಗರದಲ್ಲಿ ಮಾರಟ ಮಾಡಲು ತರುತ್ತಿದ್ದ ಸಂದರ್ಭದಲ್ಲಿ ಬುಧವಾರ ರಾತ್ರಿ 8.54 ಸಮುದಲ್ಲಿ ತಮಿಳುನಾಡು ಹಾಗೂ ಆಂಧ್ರ ಗಡಿಭಾಗವಾದ ನಾಯಕನರಿ ಕಾಡಿನ ಬಳಿ ನಾಲ್ವರು ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ಕಾರಿನಲ್ಲಿದ್ದ 3.5 ಕೆ.ಜಿ ಚಿನ್ನವನ್ನು ದರೋಡೆ ಮಾಡಿದ್ದರು.
ಇದನ್ನೂ ಓದಿ: ಕೋಲಾರ: ಗ್ರಾಮ ಪಂಚಾಯತಿಯಿಂದಲೇ ಸೌರ ವಿದ್ಯುತ್ ಉತ್ಪಾದನೆ; ರಾಜ್ಯದಲ್ಲೇ ಮೊದಲು
ಈ ಪ್ರಕರಣ ವಿಕೋಟ ಠಾಣೆಯಲ್ಲಿ ದೂರು ದಾಖಲಾಗಿತ್ತು. ದರೋಡೆಕೋರರ ಪತ್ತೆಗಾಗಿ ಚಿತ್ತೂರಿನ ಎಸ್ಪಿ ನಾಲ್ಕು ತಂಡಗಳನ್ನು ರಚಿಸಿದ್ದರು. ಕೆಜಿಎಫ್‌ನ ನಾಲ್ವರು ಜೊತೆಗೆ ತಮಿಳುನಾಡಿನ ಪ್ಯಾರನಂಬಟ್‌ನ ೮ ಜನರು ಸೇರಿಕೊಂಡು ರಾಬರಿಗೆ ಸಂಚು ರೂಪಿಸಿ ದರೋಡೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಜಯಪಾಲ್, ಷೇಣ್‌ಮೊಗಂ, ಮುಕ್ರಂಪಾಷ, ಕೆಅರ್ ಬಾಬು ಅವರನ್ನು ಬಂಧಿಸಿ, 3.5 ಕೆ.ಜಿ ಚಿನ್ನ ಮತ್ತು ಇನ್ನೋವಾ ಕಾರನ್ನು ಪೊಲೀಸ್‌ರು ವಶಪಡಿಸಕೊಂಡಿದ್ದಾರೆ.
ಜಯಪಾಲ್ ಕಾಂಗ್ರೆಸ್ ಮುಖಂಡ
ಜಯಪಾಲ್ 1998ರಲ್ಲಿ ಕ್ಷೇತ್ರದ ವಿಧಾನಸಭಾ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು, ನಂತರ ಪ್ರತಿ ಚುನಾವಣೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪನವರ ಜೊತೆ ಗುರುತಿಸಿಕೊಂಡು ಸಂಸತ್ ಚುನಾವಣಾ ಪ್ರಚಾರವನ್ನು ಕೈಗೊಳ್ಳತ್ತಿದ್ದರು, ಕಳೆದ ಎರಡು ಚುನಾವಣೆಗಳಲ್ಲಿ ಶಾಸಕಿ ರೂಪಕಲಾಶಶಿಧರ್ ಪರ ಕೆಲಸ ಮಾಡಿದ್ದರು, ಈ ಹಿನ್ನೆಲೆಯಲ್ಲಿ ಒಮ್ಮೆ ನಗಾರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆಯನ್ನು ಜಯಪಾಲ್‌ಗೆ ನೀಡಿದ್ದರು, ಪ್ರಸ್ತತ 11ನೇ ವಾರ್ಡ್‌ನ ನಗರಸಭೆ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಏರ್‌ಕ್ರಾಫ್ಟ್ ನಿರ್ಮಾಣಕ್ಕಾಗಿ ಕರ್ನಾಟಕದಲ್ಲಿ ಭಾರೀ ಜಾಗ ಖರೀದಿ ಮಾಡಿದ Tata Advanced Systems!